ಕರಾವಳಿ

ಕುಂದಾಪುರ ಸಂಗಮ್ ಪ್ರದೇಶದಲ್ಲಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ: ಸಂಸದೆ ಶೋಭಾ ಭೇಟಿ (Video)

Pinterest LinkedIn Tumblr

ಕುಂದಾಪುರ: ಕುಂದಾಪುರದ ಸಂಗಮ್ ವೃತ್ತದಲ್ಲಿ ಸರ್ವಿಸ್ ರಸ್ತೆಯ ಕಾರ್ಯ ಪೂರ್ಣವಾಗದ ಕುರಿತು ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಲು ಉದ್ದೇಶಿಸಿರುವ ಡ್ರೈನೇಜ್ ಗಳನ್ನು ಉಡುಪಿ ಚಿಕ್ಕಮಗಳುರು ಸಂಸದೆ ಶೋಭಾ ಕರಂದ್ಲಾಜೆ ಶನಿವಾರ ಮಧ್ಯಾಹ್ನ ವೀಕ್ಷಿಸಿದರು.

ಕುಂದಾಪುರದಲ್ಲಿನ ಬಿಜೆಪಿ ಪಕ್ಷದ ಕಚೇರಿಗೆ ಆಗಮಿಸಿದ ಬಳಿಕ ಸಂಗಮ್ ಪ್ರದೇಶಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಸಮಸ್ಯೆಗಳನ್ನು ಕಂಡು ಅಸಮಧಾನ ವ್ಯಕ್ತಪಡಿಸಿದರು. ಸರಿಯಾದ ರೀತಿಯಲ್ಲಿ ನಿರ್ಮಿಸುವಂತೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ಷಿಪ್ರಗತಿಯಲ್ಲಿ ಮಳೆಗಾಲದ ಮೊದಲು ಪೂರ್ಣಗೊಳಿಸುವಂತೆ ಸಂಸದೆ ಸಂಬಂದ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಕುಂದಾಪುರ ಪುರಸಭೆ ಸದಸ್ಯರಾದ ಮೋಹನ್ ದಾಸ್ ಶೆಣೈ, ಸಂತೋಷ್ ಕುಮಾರ್ ಶೆಟ್ಟಿ, ಸಂದೀಪ್ ಖಾರ್ವಿ, ಸ್ಥಳೀಯ ಮುಖಂಡರಾದ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು, ರಾಜೇಂದ್ರ ಸಂಗಮ್, ದಿವಾಕರ ಕಡ್ಗಿಮನೆ ಮೊದಲಾದವರು ಅಲ್ಲಿನ ಸ್ಥಿತಿಗತಿ ಹಾಗೂ ಮಳೆಗಾಲದಲ್ಲಿ ಸಂಭವಿಸಬಹುದಾದ ಸಮಸ್ಯೆಗಳ ಕುರಿತು ಸಂಸದರ ಗಮನಕ್ಕೆ ತಂದರು. ಅಲ್ಲದೇ ಸ್ಥಳೀಯ ಪರಿಸರ ವಾಸಿಗಳು ಕೂಡ ರಸ್ತೆ ಅವ್ಯವಸ್ಥೆ, ಚರಂಡಿ ಸಮಸ್ಯೆ ಬಗ್ಗೆ ಗಮನಕ್ಕೆ ತಂದು ಮಳೆಗಾಲದ ಭಯದ ಬಗ್ಗೆ ತಿಳಿಸಿದರು.

ಎಲ್ಲವನ್ನೂ ಆಲಿಸಿದ ಸಂಸದರು ಸ್ಥಳದಲ್ಲಿದ್ದ ಗುತ್ತಿಗೆ ಕಂಪೆನಿಗೆ ಸಂಬಂದಪಟ್ಟವರ ಬಳಿ ಜನರಿಗೆ ಯಾವುದೇ ಅನಾನೂಕೂಲ ಆಗದಂತೆ ಕಾಮಗಾರಿ ನಡೆಸಬೇಕು. ಮಳೆಗಾಲದಲ್ಲಿ ಅಚಾತುರ್ಯವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

Comments are closed.