ಆರೋಗ್ಯ

ನಿಮ್ಮ ದೇಹದ ಆಕಾರಕ್ಕೆ ತಕ್ಕಷ್ಟೇ ತೂಕ ಇಳಿಸಿಕೊಳ್ಳಬೇಕೇ..? ಇಲ್ಲಿವೆ ಬೆಸ್ಟ್‌ ಟಿಪ್ಸ್‌!

Pinterest LinkedIn Tumblr

ದೇಹದ ತೂಕ ಇಳಿಸುವುದೇ ಈಗಿನ ಬಹು ದೊಡ್ಡ ಟ್ರೆಂಡ್‌. ಜೀವನಶೈಲಿಯ ಬದಲಾವಣೆ, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು, ಆಹಾರ ಕ್ರಮದಲ್ಲಿ ಬದಲಾವಣೆ ಹೀಗೆ ಅನೇಕ ಕಾರಣಗಳಿಂದ ಸ್ಥೂಲಕಾಯತೆ ಇಂದು ಹೆಚ್ಚು ಜನರನ್ನು ಕಾಡತೊಡಗಿದೆ.

ಪ್ರತಿಯೊಬ್ಬರ ದೇಹದ ತೂಲ ಹಾಗೂ ಆಕಾರದ ನಡುವೆ ಹೊಂದಾಣಿಕೆ ಅಗತ್ಯ. ಹೆಚ್ಚು ದಪ್ಪವಾದರೆ, ನಿಮ್ಮ ದೇಹದ ಆಕಾರಕ್ಕೆ ತಕ್ಕಷ್ಟೇ ತೂಕ ಇಳಿಸಿಕೊಳ್ಳಬೇಕು. ದೇಹದ ಆಕಾರಕ್ಕೆ ಹಾಗೂ ತೂಕ ಇಳಿಕೆಯ ಲೆಕ್ಕಾಚಾರದ ಬಗ್ಗೆ ಇಲ್ಲಿವೆ ಒಂದಷ್ಟು ಮಾಹಿತಿ.

ದೇಹ ಸ್ಥೂಲತ್ವ ಹೊಂದುವುದು ಸರಿಯಾಗಿ ಗೋಚರಿಸುವ ಕೆಲವು ಭಾಗಗಳಿವೆ. ಎದೆ ಅಥವಾ ಮಧ್ಯದ ಭಾಗದಲ್ಲಿ ಹೆಚ್ಚು ಬೊಜ್ಜು ಬೆಳೆಯುತ್ತದೆ. ಇದನ್ನು ಆ್ಯಪಲ್‌ಹಣ್ಣಿನ ಆಕಾರಕ್ಕೆ ಹೋಲಿಸಲಾಗುತ್ತದೆ. ಇನ್ನು ಕೆಲವರಲ್ಲಿ ಸೊಂಟ ಹಾಗೂ ತೊಡೆಯ ಭಾಗದಲ್ಲಿ ಬೊಜ್ಜು ಬೆಳೆಯುತ್ತದೆ. ಇದನ್ನು ಪೇರಳೆ ಆಕಾರಕ್ಕೆ ಹೋಲಿಕೆ ಮಾಡಲಾಗುತ್ತದೆ. ಸ್ಥೂಲ ಕಾಯತೆ ಅಥವಾ ದಪ್ಪವನ್ನು ಪರಿಗಣಿಸಿದರೆ, ಈ ಎರಡು ವಿಧದಲ್ಲೇ ಅಳೆಯಲಾಗುತ್ತದೆ.

ಅಳತೆಯ ವೇಳೆ ಸೊಂಟದ ಸುತ್ತಳತೆ ಸೊಂಟದ ಮೇಲ್ಬಾಗ ಹೊಟ್ಟೆಯ ಹತ್ತಿರದ ಸುತ್ತಳತೆ ಹೆಚ್ಚಿದ್ದರೆ ಅದನ್ನು ಆ್ಯಪಲ್‌ಬಾಡಿ ಎನ್ನಲಾಗುತ್ತದೆ. ಅದೇ ಸೊಂಟದ ಸುತ್ತಳತೆ ಹೆಚ್ಚಾಗಿದ್ದರೆ ಅದನ್ನು ಪೇರಳೆ ಹಣ್ಣಿಗೆ ಹೋಲಿಸಲಾಗುತ್ತದೆ. ಡಾ. ಡಾನ್‌ಹಾರ್ಪರ್‌ಪ್ರಕಾರ, ಮಹಿಳೆ ಹಾಗೂ ಪುರುಷರಲ್ಲಿ ದೇಹದ ಬೊಜ್ಜಿನ ಪ್ರಮಾಣವನ್ನು ಕಂಡುಹಿಡಿಲು ಸೂತ್ರವನ್ನು ಬಳಕೆ ಮಾಡಬಹುದು.

ಪುರುಷರಿಗೆ :
ಶೇ.ದಲ್ಲಿ ದೇಹದ ಬೊಜ್ಜು = (1.20 x BMI) + ( 0.23x age) – 16.2
ಮಹಿಳೆಯರಿಗೆ :
Body fat percentage= (1.20x BMI) + ( 0.23 x age) – 5.4

ಇಲ್ಲಿ, ಬಿಎಂಐ ಎಂದರೆ, ಬಾಡಿ ಮಾಸ್‌ಇಂಡೆಕ್ಸ್.
(ನಿಮ್ಮ ದೇಹದ ಎತ್ತರವನ್ನು ತೂಕದಿಂದ ಭಾಗಿಸಿದರೆ ಸಿಗುವ ಅಂಕೆ)

ಅಂಕಿಗಳು ಎಷ್ಟಿರಬೇಕು?
20-40 ವರ್ಷದ ಮಹಿಳೆಯರಲ್ಲಿ ದೇಹದ ಬೊಜ್ಜು ಶೇ. 21-33ರ ಒಳಗಿರಬೇಕು. ಇದನ್ನು ಆರೋಗ್ಯಕರ ದೇಹ ಎನ್ನಬಹುದು. ಶೇ.39%ರಿಂದ ಅಧಿಕವಿದ್ದರೆ ಎಚ್ಚರಿಕೆ ಅಗತ್ಯ. ಅಂತೆಯೇ 41-60 ವರ್ಷದ ನಡುವಿನ ಮಹಿಳೆಯರಲ್ಲಿ ಬೊಜ್ಜು ಶೇ. 25-35ರಿಂದ ಹೆಚ್ಚಿರಬಾರದು. ಶೇ.40ರಿಂದ ಹೆಚ್ಚಿರುವುದು ಸ್ಥೂಲಕಾಯದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅಂತೆಯೇ 20-40 ವರ್ಷದೊಳಗಿನ ಪುರುಷರಲ್ಲಿ ಶೇ.8-19ರೊಳಗೆ ಬಾಡಿ ಫ್ಯಾಟ್‌ಇದ್ದರೆ ಆರೋಗ್ಯಕರ ಎನ್ನಲಾಗುತ್ತದೆ. ಶೇ. 25ಕ್ಕಿಂತ ಹೆಚ್ಚಿರುವುದು ಉತ್ತಮವಲ್ಲ. 41-60 ವರ್ಷದೊಳಗಿನ ಪುರುಷರಲ್ಲಿ ಬಾಡಿ ಫ್ಯಾಟ್‌ಶೇ.11-22ರೊಳಗಿದ್ದರೆ ಆರೋಗ್ಯಕರ ಎನ್ನಲಾಗುತ್ತದೆ. ಶೇ.24 ಹೆಚ್ಚಿದ್ದರೆ ಸ್ಥೂಲಕಾಯತ್ವ ಎಂದು ಕರೆಯಬಹುದು.

ಹೀಗಾಗಿ ಪ್ರತಿಯೊಬ್ಬರೂ ಡಯಟ್‌ಪ್ಲಾನ್‌ಮಾಡುವ ಮುನ್ನ, ತಮ್ಮ ದೇಹದ ಆಕಾರಕ್ಕೆ ತಕ್ಕಂತೆ ಆಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳಬೇಕು. ಬಾಡಿ ಫ್ಯಾಟ್‌ಹೆಚ್ಚಿದ್ದರೆ, ಅವನ್ನು ಇಳಿಸುವ ನಿಟ್ಟಿನಲ್ಲಿ ಪ್ಲಾನ್‌ಮಾಡಿಕೊಳ್ಳಬೇಕು. ದೇಹದ ಆಕಾರ ಸರಿಪಡಿಸುವ ವ್ಯಾಯಾಮಗಳನ್ನೇ ಮಾಡುವುದು ಇನ್ನಷ್ಟು ಪ್ರಯೋಜನಕಾರಿಯಾಗಲಿದೆ. ಅಷ್ಟೇ ಅಲ್ಲ, ಕೆಟ್ಟ ಬೊಜ್ಜು ಕರಗಿಸಲು ಇವು ಸಹಕಾರಿ.

Comments are closed.