ಯುವಜನರ ವಿಭಾಗ

ಸಂಗಾತಿಯೊಂದಿಗೆ ಸೆಕ್ಸ್‌ ನಡೆಸುವ ಮುನ್ನ ಈ ವಿಷಯ ಅರಿತುಕೊಳ್ಳಲೇಬೇಕು…!

Pinterest LinkedIn Tumblr

ಸೆಕ್ಸ್‌ಗೆ ನಿಮ್ಮ ಪಾರ್ಟ್ನರ್‌ನನ್ನು ಓಲೈಸುವುದು ಅಷ್ಟು ಸುಲಭವಲ್ಲ. ನೀವು ಮೂಡ್‌ನಲ್ಲಿ ಇದ್ದೀರೆಂದು ನಿಮ್ಮ ಜತೆಗಾರರಿಗೆ ಅರ್ಥೈಸುವುದು ಕೆಲವರಿಗೆ ತೀರಾ ಕಷ್ಟಕರ. ಸ್ಟಾರ್ಟಿಂಗ್‌ಟ್ರಬಲ್‌ಈಸ್‌ಕಾಮನ್‌ಅಂತಾರಲ್ಲ ಹಾಗೆ! ಹೇಗೆ ಆರಂಭಿಸುವುದು, ಏನು ಮಾತನಾಡುವುದು ಎಂಬಿತ್ಯಾದಿ ಆತಂಕ, ದುಗುಡ ಮನಸ್ಸಿನೊಳಗೆಯೇ ಕಾಡುತ್ತಿರುತ್ತದೆ. ಇಂತಹ ಕಷ್ಟಕರದಿಂದ ನಿಮ್ಮನ್ನು ಪಾರು ಮಾಡಲು ಈ ಉಪಾಯಗಳು ಸಹಕಾರಿಯಾದೀತು!

ನಾಚಿಕೆ ಬಿಟ್ಟುಬಿಡಿ
ಲೈಂಗಿಕ ಕ್ರಿಯೆ ಜೀವನದ ಅವಿಭಾಜ್ಯ ಕ್ರಿಯೆ. ಯಾರೂ ಮಾಡದ ಕೆಲಸವೇನಲ್ಲ. ಹೀಗಾಗಿ ಲೈಂಗಿಕತೆ, ಸಂಬಂಧಗಳ ಬಗ್ಗೆ ನಿಮ್ಮ ಪಾರ್ಟ್ನರ್‌ನಲ್ಲಿ ಮಾತನಾಡಲು ಮುಚ್ಚು ಮರೆ ಬೇಡ. ನಾಚಿಕೆ ಪಡುವ ಅಗತ್ಯವಿಲ್ಲ. ಹಾಗೆಂದು ಪುರುಷನೇ ಮೊದಲು ಸೆಕ್ಸ್‌ಆರಂಭಕ್ಕೆ ಮುಂದಾಗಬೇಕೆಂದಬ ವಾಡಿಕೆ ಏನಿಲ್ಲ. ಮಹಿಳೆಯರೂ ತನ್ನ ಪುರುಷನ ಜತೆ ಇಷ್ಟ ಸೆಕ್ಸ್‌ಗೆ ಪ್ರಚೋದಿಸಬಹದು. ಲೈಂಗಿಕ ಕ್ರಿಯೆ ನಡೆಸುವ ಮನಸ್ಸಾದಲ್ಲಿ, ಪಾರ್ಟ್ನರ್‌ಜತೆ ಹೇಳಿಕೊಳ್ಳುವುದು ತಪ್ಪೇ ಅಲ್ಲ!

ಸೀದಿ ಬಾತ್‌ನೋ ಬಕ್ವಾಸ್‌!
ಸೆಕ್ಸ್‌ನಲ್ಲಿನ ನಿಮ್ಮ ಆಸಕ್ತಿಯನ್ನು ನೇರವಾಗಿ ಹೇಳುವ ಅಭ್ಯಾಸ ಅತ್ಯುತ್ತಮ. ನಾನ್‌ವೆಜ್‌ಜೋಕ್ಸ್‌, ಕೆಟ್ಟದಾಗಿ ಕಮೆಂಟ್‌ಮಾಡುವುದು, ಇಂಡೈರೆಕ್ಟ್‌ಆಗಿ ನಿಮ್ಮ ಆಸೆ, ಮನದ ಬಯಕೆಯನ್ನು ತಿಳಿಸುವ ಪ್ರಯತ್ನ ಅಷ್ಟೊಂದು ಕೆಲಸಕ್ಕೆ ಬಾರದು ಎಂಬುದು ನೆನಪಿರಲಿ!

ಅಂಜಿಕೆ ಬೇಡ!
ಪತಿ ಅಥವಾ ಪತ್ನಿ, ಸೆಕ್ಸ್‌ನಲ್ಲಿ ತೊಡಗುವ ಸಂಬಂಧ ಮಾತುಕತೆ ಮೂಲಕವೇ ಆರಂಭಿಸಬೇಕಿಲ್ಲ. ಒಬ್ಬರೊನ್ನೊಬ್ಬರು ಅಪ್ಪಿಕೊಳ್ಳುವುದು, ಸ್ಪರ್ಶ ಸುಖ ಅನುಭವಿಸುವುದರಿಂದಲೂ ಆರಂಭ ಚೆನ್ನಾಗಿರುತ್ತದೆ. ಇದರಿಂದ ಪಾರ್ಟ್ನರ್‌ಸಹ ಮಿಲನಕ್ಕೆ ಸಜ್ಜಾಗುತ್ತಾರೆ. ಕಿವಿಯಲ್ಲಿ ಪಿಸಿಗುಟ್ಟಿ ಪ್ರಚೋದಿಸುವುದು ಆಸಕ್ತಿಯನ್ನು ಇಮ್ಮಡಿಗೊಳಿಸುತ್ತದೆ!

ಸೆಕ್ಸ್‌ಚ್ಯಾಟ್‌ಸಹಾಯ!
ಹಲವಾರು ಬಾರಿ ಮಾತನಾಡಲು ಕಷ್ಟವಾಗುವುದನ್ನು ಮೊಬೈಲ್‌ಮೆಸೇಜ್‌ಮೂಲಕ ಹೇಳುವುದು ಹೆಚ್ಚು ಸುಲಭವಾಗುತ್ತದೆ. ಹಾಗೆಂದು ಬೆಡ್‌ರೂಂನಲ್ಲಿ ಅಕ್ಕಪಕ್ಕ ಕೂತು ಮೆಸೇಜ್‌ಅಷ್ಟೊಂದು ಒಳ್ಳೆಯದಲ್ಲ! ಪಾರ್ಟ್ನರ್‌ಮನೆಗೆ ಬರುವ ಮುನ್ನವೇ ಫುಲ್‌ಜೋಷ್‌ನಿಂದ ಬರುವಂತೆ ಮಾಡುತ್ತದೆ.

ಉಡುಪುಗಳ ಬಗ್ಗೆ ಇರಲಿ ಗಮನ
ಈ ಸಲಹೆ ಪ್ರಮುಖವಾಗಿ ಲಲನೆಯರಿಗೇ! ನೋಡಿದ ತಕ್ಷಣ ಸುಮ್ಮನೆ ಇರಬಾರದು ಎಂಬ ರೀತಿಯಲ್ಲಿ ನಿಮ್ಮ ಡ್ರೆಸ್‌ಇದ್ದರೆ ಸಾಕು! ಮಿಲನ ಕ್ರಿಯೆಗೆ ಇಂತಹ ಸನ್ನಿವೇಶಗಳನ್ನು ಕ್ರಿಯೇಟ್‌ಮಾಡೋದು ಹೆಚ್ಚು ಪ್ರಯೋಜನಕಾರಿ! ಪುರುಷರಿಗೆ ಟೆಂಪ್ಟ್‌ಮಾಡುವುದಕ್ಕೆ ಇದು ಸರಳ ಉಪಾಯ!

ಆಕ್ಟಿವ್‌ಆಗಿ !
ನಿಮ್ಮ ಮನದ ಇಚ್ಚೆಯನ್ನು ಹೇಳಿ ಸುಮ್ಮನಾಗುವುದಲ್ಲ. ಮಿಲನಕ್ಕೆ ನಿಮ್ಮವರನ್ನು ಪ್ರಚೋದಿಸುವುದೂ ನಿಮ್ಮ ಜವಾಬ್ದಾರಿಯೇ! ಮಿಲನಕ್ಕೆ ಪೂರಕವಾಗಿ ನಿಮ್ಮ ಹಾವ ಭಾವಗಳನ್ನು ತೋರಿಸುವುದರಿಂದ ಜತೆಗಾರರೂ ಸುಖಕ್ಕೆ ಸಿದ್ಧರಾಗುತ್ತಾರೆ!

Comments are closed.