ಕುಂದಾಪುರ: ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‌ನ 16ನೇ ಘಟಿಕೋತ್ಸವ ಸಮಾರಂಭದಲ್ಲಿ, ಕಮ್ಯುನಿಟಿ ಮೆಡಿಸಿನ್ ವಿಭಾಗದ ವೈದ್ಯಕೀಯ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಪ್ರಾವೀಣ್ಯತೆ ತೋರಿ ಚಿನ್ನದ ಪದಕ ಹಾಗೂ ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡಿರುವ ಕುಂದಾಪುರ ಮೂಲದ ಡಾ.ಶೃದ್ಧಾ ಅವರನ್ನು ಗೌರವಿಸಲಾಯಿತು.

ಸಾಧಕರನ್ನು ಗೌರವಿಸಿ, ಪದಕ ಪ್ರದಾನ ಮಾಡಿದ ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ್ ವಿರೂಪಣ್ಣ ಪಾಟೀಲ್ ಅವರು, ಸಾಧನೆಯ ಹಿಂದಿರುವ ಶ್ರಮ ಹಾಗೂ ಸಾಧಕರು ಗುರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ವಿದ್ಯಾಲಯದ ವಿವಿಧ ವಿಭಾಗಗಳಲ್ಲಿನ ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ ಸಾಧಕರನ್ನು ಗೌರವಿಸಲಾಯಿತು.
ಕುಲಾಧಿಪತಿಗಳಾದ ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಎಚ್.ಬಸವನಗೌಡಪ್ಪ, ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರುಮಠ ಇದ್ದರು.
ಕೋಟೇಶ್ವರದ ಕಲ್ಪತರು ಕೊಕೊನಟ್ ಇಂಡಸ್ಟ್ರೀಸ್ ಮಾಲಿಕರಾದ ಚಂದ್ರಶೇಖರ ರಾವ್ ಹಾಗೂ ಪದ್ಮಲತಾ ದಂಪತಿಗಳು ಪುತ್ರಿಯಾಗಿರುವ ಡಾ.ಶ್ರದ್ದಾ ಅವರು ಮಕ್ಕಳ ತಜ್ಞ ಡಾ.ಬಿ.ಲಕ್ಷ್ಮೀನಾರಾಯಣ ಇವರ ಪತ್ನಿಯಾಗಿದ್ದಾರೆ.
Comments are closed.