ಕರಾವಳಿ

ವಕ್ವಾಡಿ ಫ್ರೆಂಡ್ಸ್ (ರಿ.) ವಕ್ವಾಡಿ: ಅಗಲಿದ ಸಾಲುಮರದ ತಿಮ್ಮಕ್ಕನಿಗೆ ಭಾವಪೂರ್ಣ ನಮನ, ಗಿಡ ನೆಟ್ಟು ಗೌರವ ಸಲ್ಲಿಕೆ

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಅಗಲಿದ ವೃಕ್ಷ ಮಾತೆ,  ಸಾಲುಮರದ ತಿಮ್ಮಕ್ಕನವರ ನೆನಪಿಗಾಗಿ ವಕ್ವಾಡಿ ಫ್ರೆಂಡ್ಸ್ (ರಿ.) ವಕ್ವಾಡಿ ವತಿಯಿಂದ ವಕ್ವಾಡಿ ಪಂಚಾಯತ್ ವಠಾರದಲ್ಲಿ ಗಿಡ ನೆಡಲಾಯಿತು ಹಾಗೂ ಮೊಂಬತ್ತಿ ಬೆಳಗುವುದರ ಮೂಲಕ ಸಂತಾಪ ಸೂಚಿಸಲಾಯಿತು.

ಸಾಲುಮರದ ತಿಮ್ಮಕ್ಕ ಅವರ ಹೆಜ್ಜೆ ಗುರುತು ಅನೇಕ ಪರಿಸರ ಹೋರಾಟಗಾರರಿಗೆ ದಿಕ್ಕಾಗಿದೆ. ತಿಮ್ಮಕ್ಕ ಅವರ ಜೀವನ ಒಂದು ಪಾಠ. ಯಾವುದೇ ಒಳ್ಳೆಯ ಕೆಲಸ ಮಾಡಲು ಶಿಕ್ಷಣ,ಪದವಿ ಬೇಕಾಗುವುದಿಲ್ಲ. ಗಿಡ ಮರಗಳನ್ನು ಬೆಳಸಿ ಕಾಪಾಡುವುದು ಸಾಲುಮರದ ತಿಮ್ಮಕ್ಕ ಎನ್ನುವ ವೃಕ್ಷಮಾತೆಗೆ ನಾವು ಸಲ್ಲಿಸಬಹುದಾದ ಬಹುದೊಡ್ಡ ಗೌರವ. ಎಲ್ಲರೂ ಪರಿಸರವನ್ನು ಪ್ರೀತಿಸಿ, ಪರಿಸರವನ್ನು ರಕ್ಷಿಸೋಣ ಎಂದು ವಕ್ವಾಡಿ ಫ್ರೆಂಡ್ಸ್ ಸದಸ್ಯರು ಕರೆಕೊಟ್ಟರು.

ವಕ್ವಾಡಿ ಫ್ರೆಂಡ್ಸ್ (ರಿ) ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ವಕ್ವಾಡಿ ಫ್ರೆಂಡ್ಸ್ ಮಹಿಳಾ ಮಂಡಳದ ಅಧ್ಯಕ್ಷೆ ನಾಗರತ್ನಾ, ಎರಡೂ ಸಂಘಗಳ ಪದಾಧಿಕಾರಿಗಳು ಸದಸ್ಯರು ಇದ್ದರು.

Comments are closed.