ರಾಷ್ಟ್ರೀಯ

ಫೇಕ್ ನ್ಯೂಸ್ ಪತ್ತೆಹಚ್ಚುವ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ನಿಂದ ಹೊಸ ಫೀಚರ್

Pinterest LinkedIn Tumblr

ಮುಂಬೈ: ವಾಟ್ಸಪ್ ಗೆ ಬಂದ ಮಾಹಿತಿ ನಕಲಿಯೇ, ಸತ್ಯವೇ, ದಿಕ್ಕುತಪ್ಪಿಸುವಂತಹದ್ದೇ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ಮಂಗಳವಾರ ಹೊಸ ಫೀಚರ್ ಸೇವೆಯನ್ನು ಭಾರತೀಯ ಬಳಕೆದಾರರಿಗೆ ಪರಿಚಯಿಸಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಫೇಕ್ ಸುದ್ದಿ ತಡೆಯುವ ಸಲುವಾಗಿ ವಾಟ್ಸ್ ಆ್ಯಪ್ ಚೆಕ್ ಪಾಯಿಂಟ್ ಟಿಪ್ ಲೈನ್ ಎಂಬ ಹೊಸ ಫೀಚರ್ ಅನ್ನು ರೂಪಿಸಿದೆ.

ಸ್ಥಳೀಯ ಸ್ಟಾರ್ಟ್ ಅಪ್ ಪ್ರೋಟೋ ಜೊತೆ ಕಾರ್ಯನಿರ್ವಹಿಸಿದ್ದು, ವಾಟ್ಸ್ ಆ್ಯಪ್ ಬಳಕೆದಾರರು ಕಳುಹಿಸುವ ಸಂದೇಶ ನಿಜವಾದದ್ದೇ, ಸುಳ್ಳೇ ಅಥವಾ ದಿಕ್ಕು ತಪ್ಪಿಸುವಂತಹ ಮಾಹಿತಿಯೇ ಎಂಬ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ಅದನ್ನು ನಿರ್ದಿಷ್ಟ ಸಂಖ್ಯೆಗೆ ಕಳುಹಿಸಿಕೊಡುವ ವ್ಯವಸ್ಥೆ ಹೊಸ ಫೀಚರ್ ನಲ್ಲಿದೆ.

ಸುದ್ದಿಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದ್ದರೆ ಅದನ್ನು ವಾಟ್ಸ್ ಆ್ಯಪ್ ನ ನೀಡುವ ನಿರ್ದಿಷ್ಟ ಸಂಖ್ಯೆಗೆ ಕಳುಹಿಸಿಕೊಟ್ಟರೆ ಆ ಮಾಹಿತಿಯ ಸತ್ಯಾಸತ್ಯತೆ ತಿಳಿಸುವುದಾಗಿ ಪ್ರಕಟಣೆಯಲ್ಲಿ ವಿವರಿಸಿದೆ. ಭಾರತದಲ್ಲಿ ಬರೋಬ್ಬರಿ 200ಮಿಲಿಯನ್ ವಾಟ್ಸ್ ಆ್ಯಪ್ ಬಳಕೆದಾರರಿದ್ದಾರೆ.

ಅಲ್ಲದೇ ಜನಪ್ರಿಯವಾಗಿರುವ ವಾಟ್ಸ್ ಆ್ಯಪ್ ಬಳಕೆದಾರರು ತಪ್ಪು ಮಾಹಿತಿಯನ್ನು ಹರಡುತ್ತಿರುವುದಾಗಿ ಭಾರೀ ಟೀಕೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ, ಸುಳ್ಳು ಸುದ್ದಿ ತಡೆಯಲು ಸಾಮಾಜಿಕ ಜಾಲತಾಣ ಕಡಿವಾಣ ಹಾಕಬೇಕೆಂದು ಕೋರಲಾಗಿತ್ತು.

Comments are closed.