ಅಂತರಾಷ್ಟ್ರೀಯ

ಸಿಕ್ಕಾಪಟ್ಟೆ ವೈರಲ್‌ ಆಗುತ್ತಿರುವ ಮಲೇಷ್ಯಾಗೆ ಅಪ್ಪಳಿಸಿದ ವಾಟರ್‌ಸ್ಪೌಟ್ ಒಮ್ಮೆ ನೋಡಿ….

Pinterest LinkedIn Tumblr

ಕ್ವಾಲಾಲಂಪುರ: ಮಲೇಷ್ಯಾದಲ್ಲಿ ಇತ್ತೀಚೆಗೆ ದೊಡ್ಡ ವಾಟರ್‌ಸ್ಪೌಟ್‌( ನೀರಸುಳಿಗಂಬ) ಕಾಣಸಿಕೊಂಡಿದೆ. ಸ್ಕೈ ಫೈ ಅಥವಾ ಹಾಲಿವುಡ್‌ಸಿನಿಮಾಗಳಲ್ಲಿ ತೋರಿಸುವಂತೆ ಇದು ಕಾಣಿಸಿಕೊಂಡಿದೆ. ಇದರ ಫೋಟೋ ಹಾಗೂ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್‌ಆಗುತ್ತಿದೆ.

ಏಪ್ರಿಲ್ 1ರಂದು ಮಲೇಷ್ಯಾದ ಪೆನಾಂಗ್ ದ್ವೀಪದ ಬಳಿ ದೊಡ್ಡ ವಾಟರ್‌ಸ್ಪೌಟ್‌(ನೀರಸುಳಿಗಂಬ) ಕಾಣಿಸಿಕೊಂಡಿತ್ತು. ಇದನ್ನು ನೋಡಿದ ಜನರು ಆಶ್ಚರ್ಯ ಚಕಿತರಾಗಿದ್ದರು. ಅಲ್ಲದೆ, ಇದು ಯಾವುದೋ ಹಾಲಿವುಡ್‌ಸಿನಿಮಾದ ದೃಶ್ಯದ ತರ ಇದೆ ಎಂದುಕೊಂಡಿದ್ದರು.

ಮೊದಲು ಸಮುದ್ರದಲ್ಲಿ ಕಾಣಿಸಿಕೊಂಡ ನೀರಸುಳಿಗಂಬ ಕಡಲ ತೀರಕ್ಕೆ ಮುನ್ನುಗ್ಗಿದ್ದು, ನಂತರ ನೆಲಕ್ಕಪ್ಪಳಿಸಿದೆ. ಸುರುಳಿ ಸುತ್ತುತ್ತಿರುವ ನೀರ ಸುಳಿಗಂಬದ ಅಪರೂಪದ ದೃಶ್ಯಾವಳಿ ಕಂಡ ಹಲವು ಪ್ರತ್ಯಕ್ಷದರ್ಶಿಗಳು ಅದನ್ನು ಸೆರೆ ಹಿಡಿದಿದ್ದಾರೆ.

ಫೋಟೋ ಹಾಗೂ ವೀಡಿಯೋಗಳನ್ನು ಪ್ರತ್ಯಕ್ಷದರ್ಶಿಗಳು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸಹ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಹಲವರು ಶೇರ್ ಮಾಡಿಕೊಂಡಿದ್ದು, ನಿಸರ್ಗದ ವಿಸ್ಮಯವನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Comments are closed.