ಕರ್ನಾಟಕ

ಊಟ ಆರ್ಡರ್ ಮಾಡಿದ್ದ ಯುವತಿಯೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ ಡೆಲಿವರಿ ಹುಡುಗ

Pinterest LinkedIn Tumblr

ಬೆಂಗಳೂರು: ಸ್ವಿಗ್ಗಿ ಡೆಲಿವರಿ ಹುಡಗನೊಬ್ಬ ಊಟ ಆರ್ಡರ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಈ ಕುರಿತು ಡೆಲಿವರಿ ಹುಡುಗನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವತಿ ಒತ್ತಾಯಿಸಿದ್ದಾರೆ. ಆದರೆ ಕೇವಲ ಕ್ಷಮೆಯಾಚಿಸುವ ಮೂಲಕ ಈ ಪ್ರಕರಣವನ್ನು ಮುಕ್ತಾಯ ಮಾಡಲು ಸ್ವಿಗ್ಗಿ ಸಂಸ್ಥೆ ಮುಂದಾಗಿದೆ. ಡೆಲಿವರಿ ಹುಡುಗ ಸೆಕ್ಸ್ ಗೆ ಒತ್ತಾಯಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಏನಿದು ಪ್ರಕರಣ?
ನೇಹಾ (ಹೆಸರು ಬದಲಾಯಿಸಲಾಗಿದೆ) ಎಂಬವರು ಮೊಬೈಲ್‍ನಲ್ಲಿ ಸ್ವಿಗಿ ಆಪ್‍ಮೂಲಕ ಊಟ ಆರ್ಡರ್ ಮಾಡಿದ್ದಾರೆ. ಈ ಆರ್ಡರ್ ಬಂದ ಬಳಿಕ ಸ್ವಿಗ್ಗಿ ಡೆಲಿವರಿ ಹುಡುಗ ಆಹಾರವನ್ನು ಪಾರ್ಸಲ್ ತೆಗೆದುಕೊಂಡು ಯುವತಿಯ ಮನೆಗೆ ಹೋಗಿದ್ದು, ಬಾಗಿಲು ಬಡಿದಿದ್ದಾನೆ.

ಆಗ ಯುವತಿ ಬಂದು ಬಾಗಿಲು ತೆರೆದಿದ್ದಾರೆ. ಈ ವೇಳೆ ಡೆಲಿವರಿ ಹುಡುಗ ಪಾರ್ಸಲ್ ಕೊಡುವಾಗ ಯುವತಿಗೆ ಕೇಳಿಸದ ರೀತಿಯಲ್ಲಿ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದು ಯುವತಿಗೆ ಕೇಳಿಸಲಿಲ್ಲ. ಹೀಗಾಗಿ ಯುವತಿ ಮತ್ತೆ ಆತನನ್ನು ಏನು ಎಂದು ಕೇಳಿದ್ದಾರೆ. ಆಗ ಹುಡುಗ ಮತ್ತೆ ಯುವತಿಗೆ ಕೇಳಿಸುವಂತೆ ನನ್ನ ಜೊತೆಗೆ ಸೆಕ್ಸ್ ಮಾಡಿ ಎಂದು ಒತ್ತಾಯಿಸಿದ್ದಾನೆ.

ಈ ಬಗ್ಗೆ ಯುವತಿ ತನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. “ಡೆಲಿವರಿ ಬಾಯ್ ತನ್ನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದನು. ಆದರೆ ನಾನು ಆತನಿಂದ ಫುಡ್ ಪ್ಯಾಕೇಟ್ ಕಿತ್ತುಕೊಂಡು ಏನೂ ಮಾತನಾಡದೇ ಬಾಗಿಲು ಮುಚ್ಚಿದೆ. ಆತನ ವರ್ತನೆ ನನಗೆ ಅಸಹ್ಯ ಎನಿಸಿತು. ಬಳಿಕ ನಾನು ಆರ್ಡರ್ ಮಾಡಿದ್ದ ಊಟವನ್ನು ತಿನ್ನಲು ಮನಸ್ಸಾಗಲಿಲ್ಲ. ಅದರಲ್ಲೂ ಪ್ಯಾಕೇಟ್ ಮುಟ್ಟಲು ಕೂಡ ಇಷ್ಟವಾಗಿಲ್ಲ. ನಿಮ್ಮ ಡೆಲಿವರಿ ಹುಡುಗ ನನ್ನ ಜೊತೆ ವರ್ತಿಸಿದ್ದ ರೀತಿ ಅಸಭ್ಯವಾಗಿತ್ತು” ಎಂದು ಸ್ವಿಗ್ಗಿ ಕಂಪನಿಗೆ ದೂರು ನೀಡಿದ್ದಾರೆ.

ಯುವತಿಯ ದೂರಿಗೆ ಪ್ರತಿಕ್ರಿಯಿಸಿದ ಕಂಪನಿ, ನಾವು ಡೆಲಿವರಿ ಹುಡಗನ ಬಗ್ಗೆ ವಿಚಾರಣೆ ಮಾಡುತ್ತೇವೆ ಎಂದು ತಿಳಿಸಿದೆ. ಜೊತೆಗೆ ಯುವತಿಯ ಬಳಿ ಕ್ಷಮೆಯಾಚಿಸುವ ಮೂಲಕ 200 ರೂಪಾಯಿ ಕೂಪನ್ ಕಾರ್ಡ್ ಕಳುಹಿಸಿದೆ.

Comments are closed.