ಅಂತರಾಷ್ಟ್ರೀಯ

ಮೊಸಳೆ ಜೊತೆ ಆಟವಾಡುತ್ತ ಹಲ್ಲು ಉಜ್ಜುತ್ತಿರುವ ಬಾಲಕಿ ವೀಡಿಯೊ ವೈರಲ್ !

Pinterest LinkedIn Tumblr

ಮಕ್ಕಳಿಗೆ ಪ್ರಾಣಿ ಅಂದರೆ ಬಹಳ ಪ್ರೀತಿ. ನಾಯಿ, ಬೆಕ್ಕು ಜೊತೆ ಆಟವಾಡುತ್ತ ಮುದ್ದಿಸುವ ಮಕ್ಕಳ ವೀಡಿಯೋವನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಆದರೆ ಇಲ್ಲೋಬ್ಬಳು ಪುಟ್ಟ ಬಾಲಕಿ ಮೊಸಳೆ ಜೊತೆ ಆಟವಾಡುತ್ತ ಹಲ್ಲು ಉಜ್ಜಿಸುತ್ತಿರುವ ದೃಶ್ಯ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಇಂಡೋನೇಷ್ಯಾದ ಜಾವಾ ದ್ವೀಪದ ಟಾಂಜೆರಾಂಗ್​ ನಗರದಲ್ಲಿ ಈ ವಿಡಿಯೋವನ್ನು ಚಿತ್ರಿಕರಿಸಲಾಗಿದೆ. ಬಾಲಕಿ ಬಾತ್​ ಟಬ್​ ಮೇಲೆ ಕುಳಿತುಕೊಂಡು ಟೂತ್​ ಬ್ರಶ್​​ ಮೂಲಕ ಮೊಸಳೆಯ ಹಲ್ಲುಜ್ಜಿಸುತ್ತಿದ್ದಾಳೆ. ಬಾಲಕಿ ಕುಚೇಷ್ಠೆ ಮೊಸಳೆ ಏನು ಮಾಡದೇ ಸುಮ್ಮನೆ ಇರುವುದು ನೋಡಿಗರಿಗೆ ಆಶ್ವರ್ಯ ಮೂಡಿಸಿದೆ.

ವಿಡಿಯೋದಲ್ಲಿ ಬಾಲಕಿ ಹಿಂಭಾಗ ಒಂದು ಪಕ್ಷಿ ಕೂಡ ಕೂಳಿತಿರುವುದು ಕಾಣಬಹುದಾಗಿದ್ದು, ಈ ಬಾಲಕಿಗೆ ಪ್ರಾಣಿಗಳ ಮೇಲಿನ ಪ್ರೀತಿ ಎದ್ದು ಕಾಣುತ್ತಿದೆ.

Comments are closed.