ಮನೋರಂಜನೆ

ಮೋದಿ ಕ್ಷೇತ್ರ ಗುಜರಾತ್ ನ ವಡೋದರಾದ ಮೇಲೇ ನಟ ವಿವೇಕ್ ಒಬೆರಾಯ್ ಕಣ್ಣು !

Pinterest LinkedIn Tumblr

2024 ರ ಲೋಕಸಭಾ ಚುನಾವಣೆಗೆ ಗುಜರಾತ್ ನ ವಡೋದರಾ ಕ್ಷೇತ್ರದಿಂದ ಪಿಎಂ ಮೋದಿ ಸ್ಪರ್ಧಿಸುವುದರ ಬಗ್ಗೆ ಚಿಂತಿಸಲಿದ್ದಾರಂತೆ!

ಹೌದು ಪಿಎಂ ಮೋದಿ ಬಯೋಪಿಕ್ ಚಿತ್ರದ್ಲಲಿ ಮೋದಿ ಪಾತ್ರದಲ್ಲಿ ನಟಿಸಿರುವ ವಿವೇಕ್ ಒಬೆರಾಯ್ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದು, ಒಂದೊಮ್ಮೆ 2024 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಾವೇನಾದರೂ ರಾಜಕೀಯಕ್ಕೆ ಬಂದರೆ ಗುಜರಾತ್ ನ ವಡೋದರಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತಿಸುವುದಾಗಿ ಹೇಳಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಡೋದರಾ ಲೋಕಸಭಾ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದರು.

ಪಿಎಂ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಪ್ರಮೋಷನ್ ನಲ್ಲಿ ತೊಡಗಿರುವ ವಿವೇಕ್ ಒಬೇರಾಯ್, ಪರುಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ತಾವು ರಾಜಕೀಯಕ್ಕೆ ಬರುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದು ರಾಜಕೀಯ ಪ್ರವೇಶಿಸಿದರೆ ವಡೋದರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುವುದಾಗಿ ಹೇಳಿದ್ದಾರೆ.

Comments are closed.