ಆರೋಗ್ಯ

ಎದೆಯುರಿ ಸಮಸ್ಯೆ ನಿವಾರಣೆಗೆ ಕೆಲವು ಮನೆಮದ್ದು

Pinterest LinkedIn Tumblr

ಎದೆಯುರಿ ಅಂತಹ ದೊಡ್ಡ ಆರೋಗ್ಯ ಸಮಸ್ಯೆಯಲ್ಲದಿದ್ದರೂ ಇದು ನಮಗೆ ಕಿರಿಕಿರಿಯನ್ನುಂಟು ಮಾಡುವುದಲ್ಲದೆ, ಅನಾರೋಗ್ಯಕ್ಕೀಡು ಮಾಡುತ್ತದೆ. ಹೆಚ್ಚು ಖಾರ, ಹುಳಿ ತಿಂದ್ರೆ ಎದೆಯುರಿ ಸಮಸ್ಯೆ ಕಾಡುತ್ತದೆ. ಅದರ ನಿವಾರಣೆಗಾಗಿ ಈ ಕೆಲವು ಮನೆಮದ್ದುಗಳನ್ನು ಪಾಲಿಸಿ.

ಒಂದು ದೊಡ್ಡ ಬಟ್ಟಲು ತಣ್ಣೀರು ಮತ್ತು ನಿಂಬೆರಸವನ್ನು ಒಂದು ವಾರದವರೆಗೆ ಕುಡಿಯುತ್ತಿದ್ದರೆ ಎದೆ ಉರಿ ಕಡಿಮೆಯಾಗುವುದು.

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ, ದಿನಕ್ಕೆ ಒಂದು ಬಾರಿ ಕುಡಿಯುತ್ತಿದ್ದರೆ ಎದೆ ಉರಿ ಕಡಿಮೆ ಆಗುವುದು.

ಬೀಜ ಬಲಿಯದ ಸೀಬೆಕಾಯಿಯ ಕಷಾಯ ಮಾಡಿ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿದರೆ ಎದೆ ಉರಿಕಡಿಮೆಯಾಗುವುದು.

ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ, ನೀರಿನಲ್ಲಿ ನೆನೆ ಹಾಕಬೇಕು. ಆನಂತರ ಚೆನ್ನಾಗಿ ಕಿವಿಚಿ ಶೋಧಿಸಿ, ಈ ಕಷಾಯಕ್ಕೆ ಹಾಲು, ಸಕ್ಕರೆ ಸೇರಿಸಿ ಆಗಾಗ ಕುಡಿಯುತ್ತಿದ್ದರೆ ಎದೆ ಉರಿ ಕಾಡುವುದಿಲ್ಲ.

ದಾಳಿಂಬೆ ಹಣ್ಣನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಕೆಮ್ಮು ಸಹಿತ ಉಂಟಾಗುವ ಎದೆ ನೋವು, ಎದೆ ಉರಿ ಬರುವುದಿಲ್ಲ. ಸಾಧ್ಯವಾದರೆ ವಾರಕ್ಕೆ ಮೂರು ದಿನವಾದರೂ ದಾಳಿಂಬೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

Comments are closed.