ಕರಾವಳಿ

ಎಕ್ಸಲೆಂಟ್ ಮೂಡಬಿದಿರೆ – ‘ಕಸದಿಂದ ರಸ’ ವಸ್ತು ಪ್ರದರ್ಶನ

Pinterest LinkedIn Tumblr

ಮಂಗಳೂರು : ಶಿಕ್ಷಕರು ವಿದ್ಯಾರ್ಥಿಗಳ ಕ್ರಿಯಾಶೀಲತೆ ವೃದ್ಧಿಸುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಣ್ಣ ಮಾದರಿ ಯೊಂದರ ತಯಾರಿ ದೊಡ್ಡ ಆವಿಷ್ಕಾರವೊಂದಕ್ಕೆ ಅನುವು ಮಾಡಿಕೊಡಬಹುದು ಎಂದು ಖ್ಯಾತ ಲೆಕ್ಕಪರಿಶೋಧಕರಾದ ಸಿ. ಎ. ರಘುಪತಿ ಭಟ್ ಅವರು ಹೇಳಿದರು.

ಎಕ್ಸಲೆಂಟ್ ಪ. ಪೂ. ಕಾಲೇಜಿನ ವಾಣಿಜ್ಯ ಸಂಘ ಹಾಗೂ ರೋವರ್ಸ್-ರೇಂಜರ್ಸ್ ಘಟಕ ಜಂಟಿಯಾಗಿ ಆಯೋಜಿಸಿದ ‘ಕಸದಿಂದ ರಸ’ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಅವರು ಮಾತನಾಡುತ್ತಾ ಇಂಥ ಕ್ರಿಯಾಶೀಲತೆಯುಳ್ಳ ವಿದ್ಯಾರ್ಥಿಗಳು ಆಶಾದಾಯಕ ಭವಿಷ್ಯ ನಿರ್ಮಿಸಬಲ್ಲರೆಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಯುವರಾಜ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀ ಪ್ರಶಾಂತ್ ಶೆಟ್ಟಿ, ಉಪನ್ಯಾಸಕರಾದ ಶ್ರೀ ಸ್ವರೂಪ್ ಹಾಗೂ ಶ್ರೀಮತಿ ಪ್ರೀತಿಕಾ ರಂಜಿತ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments are closed.