ಕರಾವಳಿ

ಉಡುಪಿ: ಫೈನಾನ್ಶಿಯರ್ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ವಿಚಾರಣಾಧೀನ ಕೈದಿಗೆ ಹಿರಿಯಡ್ಕ ಜೈಲಿನಲ್ಲೇ ಹೃದಯಾಘಾತ

Pinterest LinkedIn Tumblr

ಉಡುಪಿ: ವಿಚಾರಣಾಧೀನ ಖೈದಿಗೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ಹೃದಯಾಘಾತ ಸಂಭವಿಸಿದ್ದು ಮೃತಪಟ್ಟ ಘಟನೆ ನಡೆದಿದೆ.

ಕೊಲೆ ಆರೋಪದಡಿ ಬಂಧಿಯಾಗಿ ಸಬ್ ಜೈಲಿನಲ್ಲಿದ್ದ ಅನೂಪ್ ಶೆಟ್ಟಿ (38) ಹೃದಯಾಘಾತದಿಂದ ಮೃತಪಟ್ಟವರು.

ಘಟನೆ ವಿವರ: ಶನಿವಾರ ಸಂಜೆವೇಳೆ ಎದೆನೋವು‌ ಕಾಣಿಸಿಕೊ‌ಂಡಿದ್ದು ಜೈಲು ಸಿಬ್ಬಂದಿಗಳು ಅನೂಪ್ ಅವರನ್ನು ಆಸ್ಪತ್ರೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

2021 ಜುಲೈ 30 ರಂದು ಕುಂದಾಪುರ ತಾಲೂಕಿನ ಕಾಳಾವರ-ಅಸೋಡು ಎಂಬಲ್ಲಿರುವ ಪೈನಾನ್ಸ್ ಕಚೇರಿಯಲ್ಲೇ ಮಾರಕ ಅಸ್ತ್ರದಿಂದ ಕತ್ತು ಸೀಳಿ ಅಜೇಂದ್ರ ಎನ್ನುವರನ್ನು ಕೊಂದಿದ್ದ ಅನೂಪ್ ಶೆಟ್ಟಿಯನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದು ಕಳೆದ ಎರಡೂವರೆ ವರ್ಷಗಳಿಂದ ವಿಚಾರಣಾಧೀನ ಖೈದಿಯಾಗಿದ್ದ.

 

Comments are closed.