ಕರಾವಳಿ

ಅಮಲ ಭಾರತ” ಸ್ವಚ್ಚತಾ ಅಭಿಯಾನ -“ನಾಲ್ಕನೇ ಭಾನುವಾರ ಸ್ವಚ್ಛ ಭಾನುವಾರ”

Pinterest LinkedIn Tumblr

ಮಂಗಳೂರು : ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಲಯನ್ಸ್ ಕ್ಲಬ್ ಕಾವೇರಿ, ಮಂಗಳೂರು,ಗ್ರೀನ್ ಟ್ರೀ ಆರ್ಗನೈಸೇಶನ್ ಹಾಗೂ ನಗರದ ಬೋಂದೆಲ್ ನಲ್ಲಿರುವ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಸಹಕಾರದಿಂದ ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಪರಿಕಲ್ಪನೆಯ “ಅಮಲ ಭಾರತ” ಸ್ವಚ್ಚತಾ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಮಲ ಭಾರತ ಸೇವಾ ವಿಭಾಗದ ಶ್ರೀನಿವಾಸ್ ಶೆಟ್ಟಿಗಾರ್,ಶ್ರೀ ಸುಗುಣನ್ ಕುಮಾರ್, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಶಾಲಿನಿ ರೈ,ಕಾರ್ಯದರ್ಶಿ ಲಯನ್ ವಸಂತಿ ಕಾಮತ್, ಉಳ್ಳಾಲ ನಗರ ಸಭೆಯ ಪೌರಾಯುಕ್ತರಾದ ಶ್ರೀಮತಿ ವಾಣಿ ಆಳ್ವ,ಲಯನ್ ಹಿತಾಕ್ಷಿ, ಲಯನ್ ರಾಜೇಶ್ವರಿ, ಲಯನ್ ಉಷಾ ,ಕಾವೇರಿ ಲಯನ್ಸ್ ಕ್ಲಬ್ ಲಿಯೋ ಅಧ್ಯಕ್ಷೆ ಕೃಪಾ ಶೆಟ್ಟಿ ಮತ್ತು ತಂಡ.ಅಯುಧ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ರಾಮನಾಥ, ಹಾಗೂ ಪದಾಧಿಕಾರಿಗಳಾದ ಶ್ರೀಮತಿ ಮೀನು,ರಾಹುಲ್ ,ಮೇಘನಾ ಮೊದಲಾದವರು ಭಾಗವಹಿಸಿ ಸೇವೆಗೈದರು.

ಪ್ರಾಂಶುಪಾಲರಾದ ಶ್ರೀ ಬಿ.ಎನ್.ಕುಂಭಾರ್,ಕೆ.ಹೆಚ್. ಬಿ ಕಾಲನಿಯ ಶ್ರೀ ಬಿ.ಎಮ್.ಆಚಾರ್ಯ, ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಪರಿಸರವಾದಿ ಶ್ರೀ ಕೃಷ್ಣಪ್ಪ ಪರಿಸರ ಜಾಗೃತಿ ಮೂಡಿಸುವ ಘೋಷ ವಾಕ್ಯಗಳೊಂದಿಗೆ ಸ್ಪೂರ್ತಿ ತುಂಬಿದರು.

ಈ ಮೂಲಕ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಸಂಕಲ್ಪ ದಂತೆ “ನಾಲ್ಕನೇ ಭಾನುವಾರ ಸ್ವಚ್ಛ ಭಾನುವಾರ” ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು. ಸೇವಾ ಸಮಿತಿಯ ಉಪಾಧ್ಯಕ್ಷರಾದ ಡಾ.ದೇವದಾಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Comments are closed.