ಕರಾವಳಿ

ಕೊಲ್ಲೂರು ದೇವಳದಲ್ಲಿ 13½ ಪವನ್ ಚಿನ್ನಾಭರಣಗಳಿದ್ದ ಮಹಿಳೆ ಪರ್ಸ್ ಕದ್ದ ಆರೋಪಿ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಳೆದ ತಿಂಗಳು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ದರ್ಶನಕ್ಕೆ ಬಂದಿದ್ದ ಮಹಿಳೆಯ 13.5 ಪವನ್ ಚಿನ್ನಾಭರಣಗಳಿದ್ದ ಪರ್ಸ್ ಕದ್ದಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. (32) ಬಂಧಿತ ಆರೋಪಿ. ಈತ ಖಾಸಗಿ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಕಳವು ಮಾಡಿದ ಚಿನ್ನಾಭರಣಗಳಾದ 7½ ಪವನ್ ಚಿನ್ನದ ಚೈನ್, 3 ಪವನ್ ತೂಕದ ಎರಡು ಚಿನ್ನದ ಬಳೆ, 1½ ಪವನ್ ಚಿನ್ನದ ಚೈನ್, ½ ಪವನ್ ಚಿನ್ನದ ಬಳೆ, 1 ಪವನ್ ತೂಕದ 4 ಜೊತೆ ಚಿನ್ನದ ಕಿವಿ ಓಲೆ ಸಹಿತ ಒಟ್ಟು 13½ ಪವನ್ (108 ಗ್ರಾಂ) ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ಕಾಸರಗೋಡು ಮೂಲದ ಸುರತ್ಕಲ್ ನಿವಾಸಿ ಪ್ರವೀಣ್ ಎನ್ನುವರು ಪತ್ನಿಯೊಂದಿಗೆ ಜೂ.4ರಂದು ತನ್ನ ಬಾಡಿಗೆ ಮನೆಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಪತ್ನಿ ಮನೆಯಲ್ಲಿದ್ದ 13 ½ ಪವನ್ ಚಿನ್ನಾಭರಣಗಳನ್ನು ಚಿಕ್ಕ ಪರ್ಸ್ ನಲ್ಲಿ ಹಾಕಿ ವ್ಯಾನಟಿ ಬ್ಯಾಗ್ ನಲ್ಲಿಟ್ಟುಕೊಂಡು ಬಂದಿದ್ದು ದೇವರ ದರ್ಶನ ಮಾಡಿ ಹೊರಗಡೆ ಬಂದಾಗ ವ್ಯಾನಟಿ ಬ್ಯಾಗ್ ಜೀಪ್ ಓಪನ್ ಆಗಿದ್ದು ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಕಳವಾಗಿದ್ದು ಅದರಲ್ಲಿದ್ದ 4 ಲಕ್ಷದ 75 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಕೊಲ್ಲೂರು ಠಾಣೆ ಉಪನಿರೀಕ್ಷಕರಾದ ಜಯಶ್ರೀ, ಸುಧಾರಾಣಿ, ಸಿಬ್ಬಂದಿಗಳಾದ ನಾಗೇಂದ್ರ ಹಾಗೂ ಸಂದೀಪ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.