ಕರಾವಳಿ

ವಿದ್ಯುತ್ ಲೈನ್ ನಿಷ್ಕ್ರಿಯಗೊಳಿಸಲು ಲಂಚ ಸ್ವೀಕಾರ; ಬೈಂದೂರು ಮೆಸ್ಕಾಂ ಲೈನ್ ಮ್ಯಾನ್ ಲೋಕಾಯುಕ್ತ ಬಲೆಗೆ

Pinterest LinkedIn Tumblr

ಉಡುಪಿ: ವಿದ್ಯುತ್ ಕಂಬದ ಲೈನ್ ನಿಷ್ಕ್ರಿಯಗೊಳಿಸಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಬೈಂದೂರು ಮೆಸ್ಕಾಂ ಲೈನ್ ಮ್ಯಾನ್ ರಮೇಶ್ ಎಂಬಾತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಮೂಲತಃ ಬೆಳಗಾಂ ನಿವಾಸಿ ರಮೇಶ್ 2 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ವಿದ್ಯುತ್ ಕಂಬದ ಲೈನ್ ನಿಷ್ಕ್ರಿಯಗೊಳಿಸಲು ರಮೇಶ್ ಲಂಚ ಸ್ವೀಕರಿಸುತ್ತಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಮನೆ ಸಮೀಪದಲ್ಲಿನ ಅಪಾಯಕಾರಿ ಮರ ಕಡಿಯುವ ಸಂದರ್ಭ ಲೈನ್ ಕಟ್ ಮಾಡಿಕೊಡುವಂತೆ ಮಹಿಳೆಯೊಬ್ಬರು ಎಂಬವರು ಮನವಿ ಮಾಡಿದ್ದರು. ಅದಕ್ಕಾಗಿ ರಮೇಶ್ 4 ಸಾವಿರ ಹಣ ಬೇಡಿಕೆಯಿಟ್ಟಿದ್ದ. ಮಹಿಳೆ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು 2 ಸಾವಿರ ಹಣವನ್ನು ಮಹಿಳೆಯಿಂದ ಲಂಚದ ರೂಪದಲ್ಲಿ ಪಡೆಯುತ್ತಿದ್ದಾಗ ಡಿವೈಎಸ್ಪಿ ಪ್ರಕಾಶ್, ಇನ್ಸ್‌ಪೆಕ್ಟರ್ ಜಯರಾಮ್ ಡಿ. ಗೌಡ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದೆ.

Comments are closed.