ಆರೋಗ್ಯ

ಹಣೆಗೆ ಕುಂಕುಮ ಹಚ್ಚುವುದರಿಂದಾಗುವ ಪ್ರಯೋಜನವೇನು….?

Pinterest LinkedIn Tumblr

ಕುಂಕುಮವನ್ನು ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಇಟ್ಟುಕೊಳ್ಳಲು ಕಾರಣವೇನೆಂದರೆ ಯೋಗ(ರಾಜಯೋಗ) ಅಭ್ಯಾಸದಲ್ಲಿ ಮಾನವ ದೇಹ ಏಳು ಶಕ್ತಿ ಕೇಂದ್ರಗಳಾಗಿ ವಿಭಜಿಸಲ್ಪಟ್ಟಿದೆ.

ಬೆನ್ನುಮೂಳೆಯ ಮೂಲದಿಂದ (ಬಾಲ) ಪ್ರಾರಂಭವಾಗಿ ತಲೆಯ ತುದಿಯವರೆಗೆ ಹರಡಿದೆ. ಈ ಶಕ್ತಿಕೇಂದ್ರಗಳಲ್ಲಿ ಆರನೆಯ ಚಕ್ರವು (ಹಣೆಯ ಮೇಲಿನ )ಮೂರನೆಯ ಕಣ್ಣು ಎಂದೂ ಹೇಳುವುದುಂಟು. ಇದು ಕಣ್ಣುಗಳ ಹುಬ್ಬುಗಳ ನಡುವೆ ಇರುವ ಬಿಂದು. ಈ ಬಿಂದುವಿನ ಮೂಲಕ ಮಾನವ ಆಧ್ಯಾತ್ಮಿಕವಾಗಿ ದೈವಿಕತೆಗೆ ತೆರೆಯುವ ಸ್ಥಳ ಎಂದೂ ನಂಬಲಾಗಿದೆ. ಆದ್ದರಿಂದ ಕುಂಕುಮವನ್ನು ದೇಹದ ಅತ್ಯಂತ ಪವಿತ್ರವಾದ ಸ್ಥಳದಲ್ಲಿ ಇಡಲಾಗಿದೆ ಎಂದು ಹಿಂದುಗಳು ನಂಬುತ್ತಾರೆ.

ಕುಂಕುಮ ಧರಿಸಿದ ಹೆಣ್ಣುಮಕ್ಕಳನ್ನು ಕಂಡರೆ ಸಾಕ್ಷಾತ್ ಮಂಗಳ ಗೌರಿಯಂತೆ ಎನ್ನುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಡುವುದು ಮುತ್ತೈದೆತನದ ಸಂಕೇತವಾಗಿದೆ. ಕುಂಕುಮವನ್ನು ಹೆಣ್ಣು ಮಕ್ಕಳು ಮಾತ್ರವಲ್ಲ ಚಿಕ್ಕ ಮಕ್ಕಳಿಂದ ದೊಡ್ಡವರೆಲ್ಲ ಹಚ್ಚುಕೊಳ್ಳುತ್ತಾರೆ, ಪೂಜೆ ಹಾಗು ದೇವಸ್ಥಾನಕ್ಕೆ ಹೋದಂತ ಸಂದರ್ಭದಲ್ಲಿ ಯಾಕೆಂದರೆ ನಕಾರಾತ್ಮಕ ಶಕ್ತಿಯಿಂದ ದೂರ ಉಳಿಯಲು ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.

ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥಿಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆ ಧರಿಸಿದ ಕುಂಕುಮ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.

ಇನ್ನು ಕುಂಕುಮ ಹಚ್ಚುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. “ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನ ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ. ಕುಂಕುಮ ಹಚ್ಚುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.

ಕುಂಕುಮ ಇಡುವುದು ಪ್ರಾಚೀನ ಕಾಲದಿಂದಲೂ ರೂಢಿಯಾಗಿರುವ ಪದ್ಧತಿಯಾಗಿದ್ದು, ಇಂದಿಗೂ ಅದು ಮುಂದುವರಿದುಕೊಂಡು ಬಂದಿದೆ. ಕೇವಲ ವಿವಾಹಿತ ಮಹಿಳೆಯರು ಮಾತ್ರವಲ್ಲದೇ ಎಲ್ಲಾ ಹೆಣ್ಣು ಮಕ್ಕಳು ಹಣೆಯ ಮೇಲೆಕುಂಕುಮ ಇಡುವುದು ಶುಭ ಸೂಚಕವಾಗಿದೆ.

Comments are closed.