ಕರಾವಳಿ

ಈರುಳ್ಳಿ ಮಾತ್ರವಲ್ಲ ಈರುಳ್ಳಿ ಸಿಪ್ಪೆಯಲ್ಲೂ ಇವೆ ಸಾಕಷ್ಟು ಆರೋಗ್ಯಕರ ಗುಣ

Pinterest LinkedIn Tumblr

ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಆಹಾರ ತಯಾರಿಕೆಯ ಜೊತೆಗೆ ಕೆಲವೊಂದು ಔಷಧಿಗೂ ಈರುಳ್ಳಿಯನ್ನ ಬಳಸುತ್ತಾರೆ. ನಾವು ಈರುಳ್ಳಿಯನ್ನ ಬಳಸಿ ಅದರ ಸಿಪ್ಪೆಯನ್ನ ತೆಗೆದು ಕಸಕ್ಕೆ ಹಾಕುತ್ತೆವೆ. ಆದರೆ ಈರುಳ್ಳಿ ಸಿಪ್ಪೆಯಲ್ಲೂ ಸಾಕಷ್ಟು ಆರೋಗ್ಯಕರ ಗುಣಗಳಿವೆ ಎಂಬುದು ಹಲವರಿಗೆ ತುಳಿದಿಲ್ಲ.

* ಈರುಳ್ಳಿ ಆಂಟಿಆಕ್ಸಿಡೆಂಟ್ ಗುಣ ಹೊಂದಿದೆ. ಟೀ ಅಥವಾ ಸೂಪ್ ಮಾಡುವ ವೇಳೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಬೇಕು. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮ ಹಾಗೂ ದೇಹದ ಒಳ ಭಾಗವನ್ನ ಸ್ವಚ್ಛಗೊಳಿಸುತ್ತದೆ. ರೋಗ-ಪ್ರತಿರೋದಕವನ್ನ ಹೆಚ್ಚಿಸುತ್ತದೆ.

* ಈರುಳ್ಳಿ ಸಿಪ್ಪೆ ಗಂಟಲು ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ನೀರಿಗೆ ಈರುಳ್ಳಿ ಸಿಪ್ಪೆಯನ್ನ ಹಾಕಿ ಕುದಿಸಿ ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

* ಈರುಳ್ಳಿ ಸಿಪ್ಪೆ ಮುಖದ ಮೇಲಿನ ಕಲೆಗಳನ್ನ ಹೋಗಲಾಡಿಸುತ್ತದೆ. ಸ್ವಲ್ಪ ರಸವಿರುವ ಈರುಳ್ಳಿ ಸಿಪ್ಪೆಯನ್ನು ತೆಗೆದು ಅದಕ್ಕೆ ಸ್ವಲ್ಪ ಅರಿಶಿಣವನ್ನ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ ನಂತರ ಒಣಗಿದ ಕೈನಲ್ಲಿ ನಿದಾನವಾಗಿ ಮಸಾಜ್ ಮಾಡಿ. ಹೀಗೆ ವಾರಕ್ಕೊಮ್ಮೆ ಮಾಡಿದರೆ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.

Comments are closed.