ಆರೋಗ್ಯ

ದೇಹವನ್ನು ತಪ್ಪಾಗಿಸಲು ಸುಲಭ ಸರಳ ಟಿಪ್ಸ್

Pinterest LinkedIn Tumblr

ಬೇಸಿಗೆ ಬಂತೆಂತೆಂದರೆ ದೇಹವನ್ನು ತಂಪು ಮಾಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಕೆಲವರಿಗಂತೂ ಬೇಸಿಗೆ ಕಾಲದಲ್ಲಿ ದೇಹದ ತಾಪಮಾನ ಕೂಡ ಜಾಸ್ತಿಯಾಗುತ್ತದೆ. ಇಂತಹವರಿಗೆ ಇಲ್ಲಿದೆ ಟಿಪ್ಸ್

ಹೆಚ್ಚಿನ ಪ್ರಮಾಣದಲ್ಲ ಮಜ್ಜಿಗೆ ಸೇವಿಸುವುದರಿಂದ ದೇಹವು ತಂಪಾಗುವುದು ಮಾತ್ರವಲ್ಲದೆ ಉರಿಮೂತ್ರಕ್ಕೂ ಕೊಕ್ ಬೀಳಲಿದೆ. ಇದಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನೀರಿನಂಶ ಹೆಚ್ಚಾಗಿ ಜೀರ್ಣಕ್ರಿಯೆ ಸುಸೂತ್ರವಾಗಿರುತ್ತದೆ.

ಜ್ಯೂಸ್ ಸೇವಿಸಲು ಹೆಚ್ಚಿಗೆ ಹಣ ಖರ್ಚಾಗುತ್ತದೆ ಎಂಬುವವರು ಮನೆಯಲ್ಲೇ ನಿಂಬೆ ಶರಬತ್ತು ಅಥವಾ ನಿಂಬೆಹಣ್ಣಿನ ಜ್ಯೂಸ್ ಮಾಡಿಕೊಂಡು ಕುಡಿದರೂ ದೇಹದ ಉಷ್ಣಾಂಶ ಕಡಿಮೆಯಾಗಲಿದೆ.

ಇದ್ಯಾವುದು ಬೇಡಪ್ಪ, ಖರ್ಚಿಲ್ಲದೆ ಮನೆ ಅಡುಗೆಯಲ್ಲೇ ಬಾಡಿ ಹೀಟ್ ಕಡಿಮೆಯಾಗಬೇಕು ಎನ್ನುವವರಿಗೆ ಚೀಪ್ ಅಂಡ್ ಬೆಸ್ಟ್ ಫುಡ್ ಎಂದರೆ ರಾಗಿ ಅಂಬಲಿ. ರಾಗಿ ರಾತ್ರಿ ಮಲಗುವ ಮುನ್ನ ರಾಗಿ ಹಸಿಟನ್ನು ಬೇಯಿಸಿ ಅಂಬಲಿ ಮಾಡಿಟ್ಟು ಬೆಳಗ್ಗೆ ಅದಕ್ಕೆ ಸ್ವಲ್ಪ ಮಜ್ಜಿಗೆ ಹಾಕಿಕೊಂಡು ಮೂರು, ನಾಲ್ಕು ದಿನಕ್ಕೊಮ್ಮೆ ಕುಡಿದರೆ ಬಾಡಿ ಹೀಟ್ ಕಡಿಮೆಯಾಗಲಿದೆ.

Comments are closed.