ಕರಾವಳಿ

ಎಬಿಸಿಡಿ, ಜನ್ಮ ದಿನಾಂಕ,123 ಯಂತ ಪಾಸ್ ವರ್ಡ್‌ಗಳನ್ನು ಬಳಸಿದರೆ ಮುಂದೆ ಅನಾಹುತ ಕಟ್ಟಿಟ್ಟಬುತ್ತಿ.

Pinterest LinkedIn Tumblr

ಈಗ ಏನಿದರೂ ಗ್ಯಾಜೆಟ್ ಜಮಾನ. ಸ್ಮಾರ್ಟ್ ಪೋನ್, ಕಂಪ್ಯೂಟರ್ ಇಲ್ಲದೆ ಕಾಲವೇ ಮುಂದಕ್ಕೆ ಹೋಗಲ್ಲ. ಆ ಮಟ್ಟಿಗೆ ಅವಲಂಬಿತವಾಗಿಬಿಟ್ಟಿದ್ದೇವೆ. ಪ್ರತಿಯೊಂದನ್ನು ಇಮೇಲ್, ವಾಟ್ಸಾಪ್, ಪೇಸ್ ಬುಕ್, ಯೂಟೂಬ್ ನಲ್ಲೇ ತಿಳಿದುಕೊಳ್ಳುವ ಕುತೂಹಲ. ಅಂಗೈಯಲ್ಲೇ ವಿಶ್ವದ ವಿದ್ಯಾಮಾನ ತಿಳಿದುಕೊಳ್ಳುವ ಮುನ್ನ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಉತ್ತಮ.

ಈಗಂತೂ ಬಹುತೇಕ ಮಂದಿ ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಹಣದ ವ್ಯವಹಾರ ನಡೆಸುತ್ತಿರುವುದರಿಂದ ಮೊಬೈಲ್ ಲಾಕ್ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ. ಟಫ್ ಪಾಸ್ ವರ್ಡ್ ಮೂಲಕ ನೆಟ್ ಬ್ಯಾಂಕಿಂಗ್ ಕಳ್ಳ ವ್ಯವಹಾರಕ್ಕೆ ಕಡಿವಾಣ ಹಾಕಬಹುದು.

ಸಾಮಾನ್ಯವಾಗಿ ಬಹುತೇಕ ಮಂದಿ ತಮ್ಮ ಹುಟ್ಟುಹಬ್ಬದ ದಿನವನ್ನೋ ಇಲ್ಲವೇ ತಮ್ಮ ವಾಹನ ಅದೂ ಇಲ್ಲದಿದ್ದರೆ 123, ಎಬಿಸಿಡಿಯಂತ ಪಾಸ್ ವರ್ಡಗಳನ್ನು ಬಳಕೆ ಮಾಡುವುದೇ ಹೆಚ್ಚು. ಸುಲಭವಾಗಿ ನೆನಪಿರಲಿ ಎಂಬ ಕಾರಣಕ್ಕೆ ಈ ರೀತಿ ಪಾಸ್ ವರ್ಡ್ ಗಳನ್ನು ಬಳಸಿದರೆ ಮುಂದೆ ಅನಾಹುತ ಕಟ್ಟಿಟ್ಟಬುತ್ತಿ.

ಏಕೆಂದರೆ ಇತ್ತೀಚಿಗೆ ಸೈಬರ್ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ನಮಗೆ ಗೊತ್ತಿಲ್ಲದ ರೀತಿಯಲ್ಲಿ ನಮ್ಮ ಖಾತೆಯಲ್ಲಿದ್ದ ಹಣವನ್ನು ಹೆಗರಿಸೋ ಸಾಧ್ಯತೆ ಹೆಚ್ಚಿರುವುದರಿಂದ ಕಠಿಣ ಪದಗಳ ಪಾಸ್ ವರ್ಡ್ ಬಳಸುವುದು ಉತ್ತಮ. ಇದರ ಜೊತೆಗೆ ಪ್ರತಿ ತಿಂಗಳಿಗೊಮ್ಮೆ ಪಾಸ್ ವರ್ಡ್ ಬದಲಿಸುತ್ತಿದ್ದರೆ ನಿಮ್ಮ ನೆಟ್ ಬ್ಯಾಂಕಿಂಗ್, ಇಮೇಲ್ ಹ್ಯಾಕಿಂಗ್ ತಪ್ಪುವುದಕ್ಕೆ ಸಹಕಾರಿಯಾಗುತ್ತದೆ.

Comments are closed.