ಆರೋಗ್ಯ

ಕಿಡ್ನಿ ಸಮಸ್ಯೆ ಇರುವವರು ಈ ತಪ್ಪು ಮಾಡಬೇಡಿ…?

Pinterest LinkedIn Tumblr

ಜೀವನಶೈಲಿ ಹಾಗೂ ಕೆಲವು ಅಭ್ಯಾಸಗಳಿಂದ ದೇಹದೊಳಗಿನ ಅಂಗಾಂಗಗಳ ಮೇಲೆ ಪರಿಣಾಮ ಉಂಟಾಗುವುದು. ಹೌದು ನಮ್ಮ ದೇಹದಲ್ಲಿನ ಪ್ರಮುಖ ಅಂಗವಾದ ಕಿಡ್ನಿಯು ರಕ್ತ ಶುದ್ಧೀಕರಿಸಿ ಕಲ್ಮಶಗಳನ್ನು ಹೊರಹಾಕಲು ಕೆಲಸ ಮಾಡುವುದು, ಇದು ಎಲ್ಲರಿಗೂ ತಿಳಿದಿರುವ ವಿಚಾರ. ನಾವು ದೇಹದ ಬಾಹ್ಯ ಅಂಗಗಳನ್ನು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತೇವೆ. ಅದು ನಮ್ಮ ಹಾಗೂ ಇತರರ ಕಣ್ಣಿಗೆ ಕಾಣಿಸುತ್ತದೆ ಎನ್ನುವ ಕಾರಣದಿಂದ ಹೆಚ್ಚು ಕಾಳಜಿ. ಆದರೆ ದೇಹದ ಒಳಗಡೆ ಇರುವ ಅಂಗಾಂಗಗಳ ಕಡೆ ನಾವು ಗಮನಹರಿಸುವುದೇ ಇಲ್ಲ. ಯಾವುದಾದರೂ ರೋಗ ನಮ್ಮನ್ನು ಕಾಡಿದಾಗ ಮಾತ್ರ ದೇಹದ ಒಳಗಿನ ಅಂಗಾಂಗಗಳ ಪ್ರಾಮುಖ್ಯತೆ ಬಗ್ಗೆ ತಿಳಿಯುವುದು.

ಮಾಂಸಾಹಾರದಿಂದ ಹೆಚ್ಚಾಗಿ ಕಿಡ್ನಿ ಸಮಸ್ಯೆ ಕಂಡುಬರುತ್ತದೆ. ಪ್ರಾಣಿಗಳ ಪ್ರೋಟೀನ್ ಯಾವುದೇ ವ್ಯಕ್ತಿಯಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಾಗ ಹೇಳುವಂತಹ ಮೊದಲ ಮಾತೆಂದರೆ ಪ್ರಾಣಿಗಳ ಪ್ರೋಟೀನ್ ಸೇವನೆ ನಿಲ್ಲಿಸಬೇಕೆಂದು. ಮಾಂಸ ಮತ್ತು ಕೆಲವೊಂದು ಮೀನುಗಳಲ್ಲಿ ಕೂಡ ಫೋಸ್ಪರಸ್ ಮತ್ತು ಪ್ಯೂರಿನ್ ಇದೆ. ಫೋಸ್ಪರಸ್ ಕಿಡ್ನಿಗೆ ತುಂಬಾ ಕೆಟ್ಟದು. ಅದರಲ್ಲೂ ಈಗಾಗಲೇ ಹಾನಿಗೊಂಡಿರುವ ಕಿಡ್ನಿಗೆ ತುಂಬಾ ಮಾರಕ. ಪ್ಯೂರಿನ್ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುವುದು. ಇದರಿಂದ ಗಂಟು ನೋವು ಕಾಣಿಸಬಹುದು ಮತ್ತು ಮೂತ್ರಪಿಂಡವು ವಿಫಲವಾಗಬಹುದು. ಮಾಂಸದ ಬದಲಿಗೆ ತರಕಾರಿಗಳಲ್ಲಿ ಸಿಗುವ ಪ್ರೋಟೀನ್ ಸೇವಿಸಿ.

ಒಕ್ಸಾಲಿಕ್ ಆಮ್ಲ ಅಥವಾ ಒಕ್ಸಾಲೇಟ್ ಒಳ್ಳೆಯದಲ್ಲ. ಚಹಾ, ಕಾಫಿ, ದ್ರಾಕ್ಷಿ, ಕಿತ್ತಳೆ, ಹಸಿರೆಲೆ ತರಕಾರಿಗಳನ್ನು ಕಿಡ್ನಿ ಸಮಸ್ಯೆ ಇರುವವರು ಕಡೆಗಣಿಸಬೇಕು. ಈ ಆಹಾರಗಳು ಕಿಡ್ನಿಯಲ್ಲಿ ಕಲ್ಲನ್ನು ನಿರ್ಮಿಸುತ್ತದೆ. ಇದರಿಂದ ಪರಿಸ್ಥಿತಿ ಕೆಡಬಹುದು.

ಕಿಡ್ನಿ ಸಮಸ್ಯೆ ಇರುವವರು ಹೆಚ್ಚು ಉಪ್ಪು ಸೇವಿಸಬಾರದು ಎನ್ನುವುದು ಸಾಮಾನ್ಯ ವಿಚಾರ. ಅಧಿಕ ರಕ್ತದೊತ್ತಡ ಮತ್ತು ಕಿಡ್ನಿಯ ಅಸಮರ್ಪಕ ನಿರ್ವಹಣೆಗೆ ಪರಸ್ಪರ ಸಂಬಂಧವಿದೆ. ಒಂದರಿಂದ ಇನ್ನೊಂದಕ್ಕೆ ಅಡ್ಡಪರಿಣಾಮಗಳು ಇವೆ. ಆಹಾರದಲ್ಲಿ ಕಡಿಮೆ ಉಪ್ಪು ಬಳಸಿ. ಗಣೀಕೃತ ತರಕಾರಿ ಅಥವಾ ಉಪ್ಪಿನಕಾಯಿ ಸೇವಿಸಬೇಡಿ. ಇವುಗಳನ್ನು ಸಂಸ್ಕರಿಸಲು ಹೆಚ್ಚಿನ ಉಪ್ಪನ್ನು ಬಳಸಿರುತ್ತಾರೆ.

ಕಿಡ್ನಿಯು ತೀವ್ರ ರೀತಿಯಲ್ಲಿ ಹಾನಿಗೀಡಾದ ಬಳಿಕ ಪೊಟಾಶಿಯಂ ಸೇವನೆಯು ನಿಮಗೆ ಸಮಸ್ಯೆ ಉಂಟುಮಾಡಲಿದೆ. ನೀವು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ಯಾಕೆಂದರೆ ತಾಜಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪೊಟಾಶಿಯಂ ಸಮೃದ್ಧವಾಗಿದೆ. ಅತಿಯಾಗಿ ಇವುಗಳ ಸೇವನೆ ಮಾಡುವುದು ಕಿಡ್ನಿಗೆ ಒಳ್ಳೆಯದಲ್ಲ.

ಚಾಕಲೇಟ್, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಬೀಜಗಳು ಮತ್ತು ಒಣಹಣ್ಣುಗಳು ನಿಮಗೆ ವರ್ಜ್ಯ. ಕಿಡ್ನಿಯಲ್ಲಿ ಫೋಸ್ಪರಸ್ ಹೆಚ್ಚು ಸಂಗ್ರಹವಾಗುವ ಕಾರಣ ಅದಕ್ಕೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಧ್ಯವಾಗದು. ಈ ಆಹಾರಗಳ ಕಡೆ ಗಮನಹರಿಸಿದರೆ ನಿಮ್ಮ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಲಭ್ಯವಾಗುವುದು.

Comments are closed.