ಆರೋಗ್ಯ

ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಲು ಈ ಹಣ್ಣು ಸಹಕಾರಿ

Pinterest LinkedIn Tumblr

ಉತ್ತಮ ಆರೋಗ್ಯವನ್ನು ರೂಪಿಸಿ ಕೊಳ್ಳುವಲ್ಲಿ ಇದರ ಪಾತ್ರ ತುಬನೇ ಇದೆ ಅನ್ನಬಹುದು.ಹೌದು ಕರಬೂಜ ಹಣ್ಣಿನಲ್ಲಿದೆ ಹಲವು ಬೇನೆಗಳಿಗೆ ಮದ್ದು ಹಾಗಾದರೆ ಯಾವೆಲ್ಲ ಬೇನೆಗಳಿಗೆ ಮದ್ದು ಅನ್ನೋದನ್ನ ತಿಳಿಯೋಣ ಬನ್ನಿ…

ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಈ ಕರಬೂಜ ಉತ್ತಮವಾದದ್ದು. ಇದು ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ ಆದ್ದರಿಂದ ರಕ್ತದಲ್ಲಿರೋ ಸಕ್ಕರೆಯ ಪ್ರಮಾಣ ಏರುಪೇರಾಗದಂತೆ ತಡೆಯುತ್ತದೆ.

ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯ ಬಹುದು.

ರಕ್ತದ ಒತ್ತಡ ಹೆಚ್ಚಾಗಿದ್ದರೆ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಆದರೆ ಕರಬೂಜದಲ್ಲಿರುವ ಪೊಟ್ಯಾಸಿಯಮ್ ಅಂಶ ರಕ್ತನಾಳಗಳು ಸಡಿಲಗೊಂಡು ರಕ್ತ ಹಾಗೂ ಆಮ್ಲಜನಕ ಸರಾಗವಾಗಿ ಚಲಿಸುವ ಹಾಗೆ ಮಾಡಿ ರಕ್ತದಒತ್ತಡವನ್ನ ಕಡಿಮೆ ಆಗುವ ಹಾಗೆ ಮಾಡುತ್ತದೆ. ಈ ಕರಬೂಜದಲ್ಲಿರುವ ಎಲ್ಲಾ ಗುಣಗಳು ನಮ್ಮ ದೇಹದ ಒತ್ತಡವನ್ನ ಕಡಿಮೆ ಮಾಡುತ್ತವೆ.

ಕರಬೂಜದಲ್ಲಿ ರೋಗ ನೀರೋದಕ ಶಕ್ತಿ ಹೇರಳವಾಗಿದೆ ಇದರಲ್ಲಿರುವಂತಹ ರೋಗ ನಿರೋಧಕ ಶಕ್ತಿಯು ನಮ್ಮ ಆರೋಗ್ಯದ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನ ತಡೆಯುತ್ತದೆ.ಕರ್ಬುಜವು ನಮ್ಮ ದೇಹದಲ್ಲಿರುವ ವಿಷದ ಅಂಶಗಳು ಹೊರಗೆ ಹೋಗಲು ಸಹಾಯ ಮಾಡುತ್ತದೆ ಇದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಹಾಗೂ ಇದರಲ್ಲಿ ಕ್ಯನಾಸರ್ನ ವಿರುದ್ಧ ಹೊರಡುವ ಶಕ್ತಿ ಇದೆ.

Comments are closed.