ಮನೋರಂಜನೆ

ಸ್ವಚ್ಛತೆ ಪಾಠ ಮಾಡಲು ಹೋಗಿ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ಅನುಷ್ಕಾ ಶರ್ಮ

Pinterest LinkedIn Tumblr

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೂ ವಿವಾದಗಳಿಗೂ ಅವಿನಾಭಾವ ನಂಟು, ಹಿಂದೆ ಕ್ರಿಕೆಟ್ ವಿಚಾರವಾಗಿ ಟ್ರೋಲ್ ಆಗುತ್ತಿದ್ದ ಅನುಷ್ಕಾ ಇದೀಗ ತಾವೇ ಮಾಡಿಕೊಂಡ ಎಡವಟ್ಟಿನಿಂದಾಗಿ ಮತ್ತೆ ಟ್ವೀಟಿಗರ ಆಹಾರವಾಗಿದ್ದಾರೆ.

ಹೌದು.. ಇತ್ತೀಚೆಗೆ ಮುಂಬೈನಲ್ಲಿ ಕಾರಿನಿಂದ ರಸ್ತೆಗೆ ಕಸ ಎಸೆದ ವ್ಯಕ್ತಿ ವಿರುದ್ಧ ಅನುಷ್ಕಾ ಕಿಡಿಕಾರಿದ್ದರು. ಅಲ್ಲದೆ ಆತನಿಗೆ ಸ್ವಚ್ಛತೆಯ ಪಾಠ ಮಾಡಿದ್ದರು. ಇದೀಗ ಇದೇ ವಿಚಾರವಾಗಿ ಅನುಷ್ಕಾ ಮತ್ತು ಆಕೆಯ ಪತಿ ವಿರಾಟ್ ಕೊಹ್ಲಿ ಟ್ವೀಟಿಗರ ಆಹಾರವಾಗಿದ್ದಾರೆ. ಕಾರಣ ಅನುಷ್ಕಾ ಕಾರಿನ ವ್ಯಕ್ತಿಗೆ ಸ್ವಚ್ಛತೆಯ ಪಾಠ ಮಾಡುತ್ತಿದ್ದ ವೇಳೆ ಸೀಟ್ ಬೆಲ್ಟ್ ಧರಿಸಿರಲಿಲ್ಲವಂತೆ. ಅಲ್ಲದೆ ಕಾರು ಚಾಲನೆ ಮಾಡುತ್ತಿದ್ದ ಕೊಹ್ಲಿ ಕೂಡ ಸೀಟ್ ಬೆಲ್ಟ್ ಧರಿಸದೇ ಕಾರು ಚಾಲನೆ ಮಾಡುತ್ತಿದ್ದರು. ಅಲ್ಲದೆ ಪತ್ನಿ ಮಾಡುತ್ತಿದ್ದ ಕೆಲಸವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

ದಂಪತಿಯ ಈ ಕೆಲಸಕ್ಕೆ ಟ್ವೀಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಬೇರೊಬ್ಬರಿಗೆ ಸ್ವಚ್ಛತೆಯ ಪಾಠ ಮಾಡುವ ಮೊದಲು ನೀವು ರಕ್ಷಣೆಯ ಪಾಠ ಕಲಿಯಿರಿ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ತಮ್ಮ ಪ್ರಚಾರಕ್ಕಾಗಿ ಈ ದಂಪತಿ ಹೀಗೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Comments are closed.