ಆರೋಗ್ಯ

ದೇಹಕ್ಕೆ ನೀರಿನ ಮಟ್ಟ ಕಡಿಮೆಯಾದರೆ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ..!

Pinterest LinkedIn Tumblr

ಮಾನವ ತನ್ನ ಆರೋಗ್ಯಕ್ಕೆ ಮತ್ತು ದೇಹಕ್ಕೆ ಎಷ್ಟು ನೀರು ಬೇಕೋ ಅಷ್ಟು ನೀರು ಕುಡಿಯಬೇಕು. ನೀವು ನಿಮ್ಮ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿದರೆ ನಿಮ್ಮ ದೇಹ ಉತ್ತಮ ರೀತಿಯಲ್ಲಿ ಆರೋಗ್ಯವಾಗಿರುತ್ತೆ. ನೀವು ಕಡಿಮೆ ನೀರು ಕುಡಿದರೆ ನಿಮ್ಮ ಆರೋಗ್ಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

ಕಡಿಮೆ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಯಾವೆಲ್ಲ ಸಮಸ್ಯೆಗಳು ಕಾಣುಬರುತ್ತವೆ ಅನ್ನೋದು ಇಲ್ಲಿದೆ ನೋಡಿ.

ಯಾವಾಗಲು ಹಸಿವು ಹಸಿವು ಅನ್ನೋದು:
ನೀವು ಕಡಿಮೆ ನೀರು ಕುಡಿದರೆ ನಿಮ್ಮ ದೇಹದಲ್ಲಿ ನಿಮ್ಮ ದೇಹ ನಿರ್ಜಲೀಕರಣ ಸಮಸ್ಯೆ ಆಗಿ ಯಕೃತ್ತು ತನ್ನ ಗ್ಲೈಕೋಜೆನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿನ ನಿಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ಮೂತ್ರ ಹಳದಿ ಬಣ್ಣಕ್ಕೆ ಬರುತ್ತೆ:
ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಿಡ್ನಿಯಿಂದ ಬರುವ ಎಲ್ಲಾ ತ್ಯಾಜ್ಯ ಕಡಿಮೆ ಮೂತ್ರದ ರೂಪದಲ್ಲಿ ಹೊರಬರುತ್ತದೆ. ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರದ ಬಣ್ಣ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ತುಂಬ ಸಮಸ್ಯೆ ಆಗುವು ಸಾಧ್ಯತೆ ಹೆಚ್ಚು.

ಉಸಿರಾಟದಲ್ಲಿ ತೊಂದರೆ :
ಬಾಯಿಯಲ್ಲಿರುವ ಸಲೈವಾ ಉಸಿರಾಟಕ್ಕೆ ಸಮಸ್ಯೆ ಮಾಡಬಲ್ಲ ಬ್ಯಾಕ್ಟೀರಿಯಾಗಳನ್ನು ತಡೆಯುವ ಕೆಲಸ ಮಾಡುತ್ತದೆ. ನೀರನ್ನು ನಾವು ಕಡಿಮೆ ಕುಡಿದಾಗ ಬಾಯಿಯಲ್ಲಿರುವ ಸಲೈವಾ ಪ್ರಮಾಣ ಕೂಡ ಕಡಿಮೆಯಾಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಿಮ್ಮ ಆರೋಗ್ಯದ ಸಮಸ್ಯೆ ಗಂಭೀರ ಪರಿಣಾಮಕ್ಕೆ ಹೋಗುವ ಸಾದ್ಯತೆ ಹೆಚ್ಚು.

ತಲೆ ನೋವು ಮತ್ತು ತಲೆಸುತ್ತು:
ನೀವು ಪ್ರತಿದಿನ ಕಡಿಮೆ ನೀರು ಕುಡಿದರೆ ನಿಮ್ಮ ರಕ್ತ ಮತ್ತು ಮೆದುಳಿನಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತವೆ. ಆದೊಷ್ಟು ನಿಮ್ಮ ಅರೋಗ್ಯ ಉತ್ತಮವಾಗಿರಬೇಕು ಅಂದ್ರೆ ತುಂಬಾ ನೀರು ಕುಡಿಯಬೇಕು.

Comments are closed.