ಆರೋಗ್ಯ

ಆರೋಗ್ಯಕ್ಕೆ ಗ್ರೀನ್ ಟೀ” ಒಳ್ಳೆಯದು..! ಆದರೆ ಇದರಿಂದಾಗುವ ಸೈಡ್ ಎಫೆಕ್ಟ್ಸ್ ಬಲ್ಲಿರಾ..?

Pinterest LinkedIn Tumblr

ಹೆಚ್ಚಾದ ಮಾಲಿನ್ಯ, ಬದಲಾದ ಜೀವನ ಮೌಲ್ಯಗಳ ದೃಷ್ಟಿಯಿಂದ ಬಳಲುತ್ತಿರುವವರು ಅದೆಷ್ಟೋ ಮಂದಿ. ಅದರಲ್ಲಿಂದ ಈಗ ಅನೇಕ ಮಂದಿ ಆರೋಗ್ಯದ ಕಡೆಗೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಒಂದು ಕಾಲದ ಜೋಳದ ರೊಟ್ಟಿ, ರಾಗಿ ಮುದ್ದೆ, ಅಂಬಲಿ ಇವೆಲ್ಲವಕ್ಕೂ ಮತ್ತೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದರ ಜತೆಗೆ ಒಂದು ಕಾಲದಲ್ಲಿ ಟಿ, ಕಾಫಿಗಳ ಸುತ್ತಲೂ ತಿರುಗುವ ಜನ ಆರೋಗ್ಯವೇ ಮಹಾಭಾಗ್ಯ ಎದುಕೊಂಡು ಗ್ರೀನ್ ಟಿ ಕಡೆಗೆ ಹೊರಳಿದ್ದಾರೆ.. ಅಷ್ಟೇ ಅಲ್ಲ ಯಾರು ಹೆಲ್ತ್ ಬಗ್ಗೆ ಏನೇ ಕಂಪ್ಲೇಂಟ್ ಮಾಡಿದರೂ ಗ್ರೀನ್ ಟೀ ಟ್ರೈ ಮಾಡಿ ನೋಡು ಎಂದು ಉಚಿತ ಸಲಹೆಗಳನ್ನು ಸಹ ನೀಡುತ್ತಿರುತ್ತಾರೆ. ಆದರೆ ಗ್ರೀನ್ ಟೀ ನೀವು ಅಂದುಕೊಂಡಷ್ಟು ಒಳ್ಳೆಯದಲ್ಲ.. ಅದರಿಂದ ಹಲವು ನಷ್ಟಗಳು ಇವೆ. ಅವೇನು ಎಂದು ತಿಳಿದುಕೊಳ್ಳಿ..

1. ಅನಿಮಿಯಾ… ಎಂದರೆ ರಕ್ತಹೀನತೆ.. ಗ್ರೀನ್ ಟೀಯನ್ನು ಹೆಚ್ಚಾಗಿ ಸೇವಿಸುವುದರಿಂದ ಐರನ್ ಡೆಫಿಷಿಯನ್ಸಿ ಕಾರಣದಿಂದ ಅನಿಮಿಯಾ ಬರುವ ಅವಕಾಶಗಳಿವೆ. ಗ್ರೀ ಟೀಯಲ್ಲಿ ಇರುವ ಟಾನಿನ್ಸ್ ದೇಹದಲ್ಲಿನ ಐರನ್ ಕಂಟೆಂಟ್ಸ್ ಅಬ್ಸಾರ್ಬ್ ಮಾಡಿಕೊಳ್ಳಲು ಬಿಡಲ್ಲ. ಪ್ರತಿಫಲವಾಗಿ ನಮ್ಮ ದೇಹದಲ್ಲಿ ಐರನ್ ಡಿಫಿಷಿಯನ್ಸಿ ಉಂಟಾಗುತ್ತದೆ.
೨. ಗ್ರೀ ಟೀ ಕಾರಣದಿಂದ ನಮ್ಮ ಹಾರ್ಟ್ ಬೀಟ್ ರೇಂಜ್‌ನಲ್ಲಿ ಬದಲಾಗಣೆಗಳು ಆಗುವ ಸಾಧ್ಯತೆಗಳಿವೆ. ಹಾರ್ಟ್ ಬೀಟ್ ಹೆಚ್ಚಾಗಿ ಅಪಾರ ಇದೆ. ನಾರ್ಮಲ್ ಹಾರ್ಟ್ ಬೀಟ್ ಬದಲಾದರೆ ತುಂಬಾ ಕಷ್ಟ.
3. ಗ್ರೀ ಟೀಯಲ್ಲಿ ಕೆಫಿನ್ ಪ್ರಮಾಣ ಕಡಿಮೆ ಇದ್ದರೂ, ದೇಹದಲ್ಲಿ ಆಸಿಡ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಆ ಮೂಲಕ ಹೊಟ್ಟೆನೋವು, ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ.
4. ನಮ್ಮ ದೇಹ 9.9 ಗ್ರಾಮ್ ಗ್ರೀನ್ ಟೀ ತೆಗೆದುಕೊಂಡರೆ ಶಕ್ತಿ ಉಂಟಾಗುತ್ತದೆ. ಇದರ ಪ್ರಮಾಣ ಹೆಚ್ಚಾದರೆ ದೇಹದಲ್ಲಿ ಚಿಕ್ಕಚಿಕ್ಕ ಬದಲಾವಣೆಗಳು ಆಗುತ್ತವೆ. ತಲೆನೋವು ಅವುಗಳಲ್ಲಿ ಒಂದು ಭಾಗ.
5. ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆದರೆ ಅದರಿಂದ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಇದರಲ್ಲಿರುವ ಕಾಟಚಿನ್ಸ್.
6. ಗ್ರೀನ್ ಟೀ ಮೂಲದಿಂದ ಕಣ್ಣಿನ ಮೇಲೆ ಪ್ರೆಶರ್ ಸಹ ಹೆಚ್ಚಾಗಿ ಆಗುವ ಸಾಧ್ಯತೆಗಳಿವೆ.
7. ಅಷ್ಟೇ ಅಲ್ಲ ಗ್ರೀ ಟೀಯನ್ನು ಹೆಚ್ಚಾಗಿ ತೆಗೆದುಕೊಳ್ಳುವ ಮೂಲಕ ಅಲರ್ಜಿ ಬರುವ ಸಾಧ್ಯತೆಗಳಿವೆ. ಮುಖ, ನಾಲಿಗೆ, ಗಂಟಲು ಮತ್ತು ತುಟಿ ಭಾಗಗಳಲ್ಲಿ ತುರಿಕೆಯಂತೆ ಅನ್ನಿಸುತ್ತದೆ.

Comments are closed.