ಕರಾವಳಿ

ಗಾಯದಿಂದ ಅಧಿಕ ರಕ್ತಸ್ರಾವವಾಗಿದರೆ ಮನೆಯ ಉಪಾಯ ಪಾಲಿಸಿ ಬ್ಲಡ್ ಪ್ಲೇಟ್ ಲೆಟ್ಸ್ ಪ್ರಮಾಣ ಹೆಚ್ಚಿಸಿ.

Pinterest LinkedIn Tumblr

ರಕ್ತದಲ್ಲಿ ‘ಬ್ಲಡ್ ಪ್ಲೇಟ್ ಲೆಟ್ಸ್’ ಸಂಖ್ಯೆಯು ಕಡಿಮೆಯಾಗುವುದನ್ನು ವೈಜ್ಞಾನಿಕ ಭಾಷೆಯಲ್ಲಿ ‘ಥ್ರಾಂಬೋಸೈಟೋಪೀನಿಯಾ’ ಎನ್ನುತ್ತಾರೆ.ಜೀವನಾವಧಿಯು ತುಂಬಾ ಕಡಿಮೆ ….ಕೆಂಪು ಹಾಗೂ ಬಿಳಿ ರಕ್ತಕಣಗಳಿಗಿಂತ ಬ್ಲಡ್ ಪ್ಲೇಟ್ ಲೆಟ್ಸ್ ಚಿಕ್ಕದಾಗಿಯೂ, ಹೆಚ್ಚಿನ ಸಂಖ್ಯೆಯಲ್ಲಿಯೂ ಇರುತ್ತವೆ. ಗಾಯ ಆದಾಗ ಅಧಿಕವಾಗಿ ರಕ್ತವು ನಷ್ಟವಾಗದಂತೆ ಇವು ಕಾಪಾಡುತ್ತವೆ. ಇವುಗಳ ಜೀವನಾವಧಿಯು ಕೇವಲ 5-9 ದಿನಗಳ ನಡುವೆ ಇರುತ್ತದೆ.

ಪ್ಲೇಟ್ ಲೆಟ್ಸ್ ನ ಸಂಖ್ಯೆ ಕುಗ್ಗುವುದರಿಂದ ಶರೀರಕ್ಕೆ ತುಂಬಾ ಹಾನಿಯಾಗುತ್ತದೆ. ಇದಕ್ಕೆ ಕಾರಣ…ಅವು ನಾಶವಾಗುತ್ತಿರಬಹುದು ಅಥವಾ ಅಷ್ಟು ಸಂಖ್ಯೆಯಲ್ಲಿ ಉತ್ಪತ್ತಿ ಆಗದಿರಬಹುದು.
ವಿಭಿನ್ನ ಕಾರಣಗಳಿರಬಹುದು.

ಸ್ವಲ್ಪ ಪ್ರಮಾಣದಲ್ಲಿ ಪ್ಲೇಟ್ ಲೆಟ್ಸ್ ಉತ್ಪತ್ತಿಗೆ ಅನೀಮಿಯಾ, ವೈರಲ್ ಇನ್ಫೆಕ್ಷನ್ ಕಾರಣಗಳಾದರೆ, ಲುಕೇಮಿಯಾ, ಕೀಮೊಥೆರಫಿ, ಅಧಿಕ ಮದ್ಯಪಾನ, ವಿಟಮಿನ್ ‘ಬಿ-12’ ನ ಲೋಪಗಳಂತಹ ಇತರೇ ಕಾರಣಗಳಿರಬಹುದು.

ರಕ್ತದಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್ಸ್, ಔಷಧಿಗಳಿಗೆ ರಿಯಾಕ್ಷನ್, ರೋಗನಿರೋಧಕ ಖಾಯಿಲೆಗಳಿಂದಲೂ ಪ್ಲೇಟ್ ಲೆಟ್ಸ್ ಬೇರ್ಪಡುತ್ತವೆ. ಹೃದ್ರೋಗದಿಂದ, ಕ್ಯಾನ್ಸರ್ ನಿಂದ ಕ್ಲೋಮ ಗ್ರಂಥಿಯಲ್ಲಿ ಹೆಚ್ಚಿನ ಪ್ಲೇಟ್ ಲೆಟ್ಸ್ ಉಳಿದಿರುತ್ತವೆ.

ಲಕ್ಷಣಗಳು:-
ತಲೆ ತಿರುಗಿ ಬೀಳುವುದು, ಬಲಹೀನವಾಗುವುದು, ಗಾಯವಾದಾಗ ರಕ್ತ ನಿಲ್ಲದಿರುವುದು, ಚರ್ಮದ ಮೇಲೆ, ಮಲಮೂತ್ರಗಳಲ್ಲಿ ರಕ್ತ ಕಾಣಿಸಿಕೊಳ್ಳುವುದು ಇವುಗಳೆಲ್ಲಾ ಪ್ಲೇಟ್ ಲೆಟ್ಸ್ ಕುಗ್ಗಿರುವ ಲಕ್ಷಣಗಳು.

ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಕೆಲವು ಮನೆಯ ಉಪಾಯಗಳನ್ನು ಪಾಲಿಸುವುದರಿಂದ ಬ್ಲಡ್ ಪ್ಲೇಟ್ ಲೆಟ್ಸ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಅಂತಹ ಕೆಲವು ಉಪಾಯಗಳನ್ನು ಕೆಳಗೆ ತಿಳಿಸಲಾಗುತ್ತಿದೆ.

1. ಪಪ್ಪಾಯ
ಈ ಹಣ್ಣಿನೊಂದಿಗೆ ಅದರ ಎಲೆಗಳು ಸಹಾ ಬ್ಲಡ್ ಪ್ಲೇಟ್ ಲೆಟ್ಸ್ ಪ್ರಮಾಣವನ್ನು ಹೆಚ್ಚಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದು ಏಷಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಮಲೇಷಿಯಾ ಅವರು 2009 ರಲ್ಲಿ ನಡೆಸಿದ ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ, ಎಲೆಗಳನ್ನು ಅಗಿಯುವುದರಿಂದ ಅಥವಾ ಪಪ್ಪಾಯ ಜೂಸ್ ನಲ್ಲಿ ನಿಂಬೆರಸವನ್ನು ಬೆರೆಸಿ ಕುಡಿಯುವುದರಿಂದ ಕ್ರಮವಾಗಿ ಪ್ಲೇಟ್ ಲೆಟ್ಸ್ ನ ಪ್ರಮಾಣ ಅಧಿಕವಾಗುತ್ತದೆ.

2. ಕುಂಬಳಕಾಯಿ
ಇದರಲ್ಲಿರುವ ಪ್ರೊಟೀನ್ ಗಳು, ವಿಟಮಿನ್ ‘ಎ’ ಪ್ಲೇಟ್ ಲೆಟ್ಸ್ ಪ್ರಮಾಣ ಹೆಚ್ಚಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದಲೇ ಆಗಾಗ ಕುಂಬಳಕಾಯಿ ಹಾಗೂ ಅದರ ಬೀಜಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ವೈದ್ಯರು.

3. ನಿಂಬೆಹಣ್ಣು
ನಿಂಬೆಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಪ್ಲೇಟ್ ಲೆಟ್ಸ್ ಪ್ರಮಾಣವನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

4. ಆಮ್ಲಾ
ಇದರಲ್ಲಿ ವಿಟಮಿನ್ ‘ಸಿ’ ಹೇರಳವಾಗಿರುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಇತರೇ ಆರೋಗ್ಯ ಸಮಸ್ಯೆಗಳನ್ನು ತೊಲಗಿಸುತ್ತವೆ.

5. ಬೀಟ್ ರೂಟ್
ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಪ್ಲೇಟ್ ಲೆಟ್ಸ್ ಪ್ರಮಾಣ ಹೆಚ್ಚುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

6. ಗೋಧಿ ಹುಲ್ಲು
ಇಂಟರ್ ನ್ಯಾಷನಲ್ ಜರ್ನಲ್ ಆಫ್ ಯೂನಿವರ್ಸಲ್ ಫಾರ್ಮಸಿ ಅಂಡ್ ಲೈಫ್ ಸೈನ್ಸೆಸ್ ಅವರು ನಡೆಸಿದ ಸಂಶೋಧನೆಯಲ್ಲಿ ಪ್ಲೇಟ್ ಲೆಟ್ಸ್ ಪ್ರಮಾಣ ಹೆಚ್ಚಿಸುವುದರಲ್ಲಿ ಗೋಧಿ ಹುಲ್ಲು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ. ಇದರಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್ ನಂತಿರುವ ಕ್ಲೋರೋಫಿಲ್ ಅಧಿಕವಾಗಿರುತ್ತದೆ. ಆದ್ದರಿಂದಲೇ ದಿನಕ್ಕೆ ಕನಿಷ್ಟ 1/2 ಕಪ್ ಗೋಧಿ ಹುಲ್ಲಿನ ರಸದಲ್ಲಿ ನಿಂಬೆರಸವನ್ನು ಬೆರೆಸಿ ಕುಡಿಯುವುದರಿಂದ ವಿಟಮಿನ್ ‘ಸಿ’. ಐರನ್ ಅನ್ನು ಹಿರಿಕೊಳ್ಳುವಂತೆ ಮಾಡುತ್ತವೆ. ತಕ್ಕಷ್ಟು ಐರನ್ ಇದ್ದರೆ ಪ್ಲೇಟ್ ಲೆಟ್ಸ್ ಪ್ರಮಾಣ ಕುಗ್ಗುವುದಿಲ್ಲ.

7. ಅಲೊವೆರಾ
ಇದು ರಕ್ತ ಶುದ್ಧಿ ಮಾಡುತ್ತದೆ ಹಾಗೂ ಇನ್ಫೆಕ್ಷನ್ ಆಗುವುದಿಲ್ಲ.ಇದು ಸಹಾ ಬ್ಲಡ್ ಪ್ಲೇಟ್ ಲೆಟ್ಸ್ ಹೆಚ್ಚುವುದಕ್ಕೆ ಸಹಾಯವಾಗುತ್ತವೆ.

Comments are closed.