ಕರಾವಳಿ

ಈ ಪವರ್‌ಫುಲ್ ಟಿಪ್ಸ್ ಪಾಲಿಸಿ, ಕಿಡ್ನಿ ಸ್ಟೋನ್ಸ್ ಬರದಂತೆ ತಡೆಯಿರಿ….!

Pinterest LinkedIn Tumblr

ಇಂದು ನಮ್ಮ ದೇಶದಲ್ಲಿ ಅಧಿಕ ಪ್ರಮಾಣದ ಜನರನ್ನು ಕಾಡುತ್ತಿರುವ ಕಾಯಿಲೆಗಳಲ್ಲಿ ಕಿಡ್ನಿ ಸ್ಟೋನ್ಸ್ ಸಹ ಒಂದು. ಇವು ಬಹಳಷ್ಟು ಮಂದಿಯಲ್ಲಿ ಉಂಟಾಗುತ್ತವೆ. ಹಿರಿಯ ಕಿರಿಯ ಎಂಬ ಬೇಧಭಾವ ಇಲ್ಲದೆ ಕಿಡ್ನಿ ಸ್ಟೋನ್ಸ್ ಎಲ್ಲರಲ್ಲೂ ಬರುತ್ತವೆ. ಇದಕ್ಕೆ ಕಾರಣಗಳು ಅನೇಕ ಇವೆ. ಆದರೆ ಹೇಗೆ ಬಂದರೂ ಕಿಡ್ನಿ ಸ್ಟೋನ್ಸ್ ಒಮ್ಮೆ ಉಂಟಾದರೆ ಎಚ್ಚರವಹಿಸಬೇಕಾದದ್ದೇ. ಯಾಕೆಂದರೆ ಅವನ್ನು ಯಾವುದೇ ರೀತಿಯಲ್ಲಿ ಕರಗಿಸಿಕೊಂಡರೂ ಮತ್ತೆ ಬರುತ್ತವೆ. ಆದ ಕಾರಣ ಅವುಗಳ ವಿಚಾರದಲ್ಲಿ ಎಚ್ಚರ ವಹಿಸಬೇಕು. ಆದರೆ ಕೆಳಗೆ ತಿಳಿಸಿದ ಒಂದು ಪವರ್‌ಫುಲ್ ಟಿಪ್ ಪಾಲಿಸಿದರೆ ಅದರಿಂದ ಕಿಡ್ನಿ ಸ್ಟೋನ್ಸ್ ಇನ್ನು ಮುಂದೆ ಬರುವುದಿಲ್ಲ. ಅಷ್ಟು ಪರಿಣಾಮಕಾರಿಯಾಗಿ ಈ ಸಲಹೆ ಕೆಲಸ ಮಾಡುತ್ತದೆ. ಹಾಗಿದ್ದರೆ ಅದರ ಬಗ್ಗೆ ತಿಳಿದುಕೊಳ್ಳೋಣವೇ..!

ಬೇಸಿಗೆ ಕಾಲ ಬಂದಿದೆ. ನಮಗೆ ಎತ್ತ ನೋಡಿದರೂ ಕಲ್ಲಂಗಡಿ ಕಾಣಸಿಗುತ್ತದೆ. ಬಿಸಿಬಿಸಿ ವಾತಾವರಣದಲ್ಲಿ ತಣ್ಣಗಿನ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ ಜನ ಆಸ್ವಾದಿಸುತ್ತಿದ್ದಾರೆ. ಆದರೆ ಕಲ್ಲಂಗಡಿಯನ್ನು ತಿಂದ ಬಳಿಕ ಯಾರೇ ಆಗಲಿ ಅದರಲ್ಲಿನ ಬೀಜ ಉಗಿಯುತ್ತಾರೆ. ಆ ರೀತಿ ಮಾಡಬಾರದು. ಯಾಕೆಂದರೆ ಕಿಡ್ನಿ ಸ್ಟೋನ್ಸ್ ಕರಗಿಸುವ ಶಕ್ತಿ ಕಲ್ಲಂಗಡಿ ಬೀಜಗಳಿಗಿದೆ. ಅದಕ್ಕಾಗಿ ಏನು ಮಾಡಬೇಕು ಎಂದು ಈಗ ತಿಳಿದುಕೊಳ್ಳೋಣ.

ಕಲ್ಲಂಗಡಿ ಬೀಜಗಳನ್ನು ಸಂಗ್ರಹಿಸಿ ಅವನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೆಕು. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ನಿತ್ಯ ಮೂರು ಸಲ ಕೆಲವು ದಿನಗಳ ಕಾಲ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹಾಗಂತ ಆಯುರ್ವೇದ ಹೇಳುತ್ತದೆ. ಇದರಿಂದ ಕಿಡ್ನಿ ಕಲ್ಲುಗಳು ಶೀಘ್ರ ಕರಗುತ್ತವೆ. ಅಷ್ಟೇ ಅಲ್ಲ, ಇನ್ನು ಮುಂದೆ ಆ ಕಲ್ಲುಗಳು ಬರುವ ಅವಕಾಶ ಇರಲ್ಲ ಎಂದು ಆಯುರ್ವೇದ ಹೇಳುತ್ತಿದೆ. ಅದೇ ರೀತಿ ಕಲ್ಲಂಗಡಿ ಹಣ್ಣಿನ ಒಳಗೆ ಇರುವ ಬಿಳಿ ಪದಾರ್ಥವನ್ನು ದೇಹದಲ್ಲಿ ಫಂಗಸ್ ಇರುವ ಭಾಗದಲ್ಲಿ ಅಪ್ಲೈ ಮಾಡಿದರೆ ಕ್ರಮೇಣ ಅದರ ತೊಂದರೆಯಿಂದ ಮುಕ್ತಿಪಡೆಯಬಹುದು. ಆದಕಾರಣ ಈ ಸಲ ಕಲ್ಲಂಗಡಿ ತಿನ್ನುವಾಗ ಅದರಲ್ಲಿ ಇರುವ ಬೀಜಗಳು, ಕಲ್ಲಂಗಡಿಯಲ್ಲಿ ಇರುವ ಬಿಳಿ ಪದಾರ್ಥವನ್ನು ಎಸೆಯಬೇಡಿ..! ಬಳಸಿದರೆ ಮೇಲೆ ತಿಳಿಸಿದ ರೀತಿಯಲ್ಲಿ ಆಯಾ ಸಮಸ್ಯೆಗಳಿಂದ ನಿವಾರಣೆಯಾಗುತ್ತವೆ..!

Comments are closed.