ಕರಾವಳಿ

ಸುಳ್ಳು ಆರೋಪಗಳ ಮೂಲಕ ನನ್ನ ತೇಜೋವಧೆಗೆ ಯತ್ನ :ಸತ್ಯಜಿತ್ ಸುರತ್ಕಲ್ ಆರೋಪ

Pinterest LinkedIn Tumblr

ಮಂಗಳೂರು: ಕೆಲವು ವ್ಯಕ್ತಿಗಳು ನನ್ನ ತೇಜೋವಧೆಗೆ ಯತ್ನಿಸುತ್ತಿದ್ದು, ನನ್ನ ವಿರುದ್ಧ ಕೆಟ್ಟ ಆಪಾದನೆಗಳಲ್ಲಿ ತೊಡಗಿದ್ದಾರೆ. ಆದರೆ ಇವೆಲ್ಲವೂ ಸುಳ್ಳು ಆರೋಪ ಹಾಗೂ ಕಪೋಲಕಲ್ಪಿತ ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಘೋಷಣೆ ಆದ ನಂತರ ನಾನು ತಟಸ್ಥ ಧೋರಣೆ ತಳೆದಿದ್ದೆ. ಆದರೆ ಕೆಲವೊಂದು ವ್ಯಕ್ತಿಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದಾರೆ. ನನ್ನ ಮೇಲೆ ಕಾರ್ಮಿಕರಿಂದ, ಗುತ್ತಿಗೆದಾರರಿಂದ ಹಣ ಪಡೆದಿದ್ದೇನೆ ಎಂಬ ಆರೋಪ ಮಾಡುತ್ತಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಕಮಿಷನ್, ಮರಳು ಮಾಫಿಯಾದಲ್ಲಿ ಭಾಗಿ ಎಂದು ಆರೋಪಿಸುತ್ತಿದ್ದಾರೆ. ಕ್ರಿಮಿನಲ್ ಮೊಕದ್ದಮೆ ಕಾರಣದಿಂದಾಗಿ ಸೀಟ್ ತಪ್ಪಿದೆ ಎಂಬ ಅಪಪ್ರಚಾರ ಕೂಡ ಮಾಡಲಾಗುತ್ತಿದೆ. ಆದರೆ ಇವೆಲ್ಲವೂ ಅ ವ್ಯಕ್ತಿಗಳು ಮಾಡುತ್ತಿರುವ ಕಪೋಲಕಲ್ಪಿತ ಸುಳ್ಳು ಸುದ್ಧಿ ಎಂದು ಹೇಳಿದ್ದಾರೆ.

ಇವತ್ತಿಗೂ ನನ್ನ ಹಣಕಾಸು ಪರಿಸ್ಥಿತಿ ಚೆನ್ನಾಗಿಲ್ಲ. ಈಗಲೂ ಜನನ ಬಳಿ 85 ಲಕ್ಷ ಸಾಲ ಇದೆ. ನನ್ನ ಸಂಬಂಧಿಕರಿಗೆ, ಬೆಂಬಲಿಗರಿಗೆ ಯಾವುದೇ ಫೇವರ್ ಮಾಡಿಸಿಕೊಂಡಿಲ್ಲ. ನನ್ನ ಸಂಬಂಧಿಕರಿಗೆ ಉದ್ಯೋಗ ಸಿಕ್ಕಿದ್ದು ಕೂಡ ಅವರ ಅರ್ಹತೆಗೆ ಅನುಗುಣವಾಗಿ. ಹೀಗಿರುವಾಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ನನ್ನ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದು ಸತ್ಯಜಿತ್ ಸುರತ್ಕಲ್ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

Comments are closed.