ಆರೋಗ್ಯ

ನೆನಪಿನ ಶಕ್ತಿ ಹೆಚ್ಚಿಸಲು ಈ ಟ್ರಿಕ್ಸ್ ಪಾಲಿಸಿ

Pinterest LinkedIn Tumblr


ಹೆಚ್ಚು ಹೊತ್ತು ಕಂಪ್ಯೂಟರ್‌, ಮೊಬೈಲ್‌ ಸ್ಕ್ರೀನ್‌ ನೋಡುತ್ತಿರುವವರಿಗೆ ನೆನಪಿನ ಶಕ್ತಿ ಸ್ವಲ್ಪ ಕಡಿಮೆಯಾಗುತ್ತಿರುವಂತೆ ಅನಿಸುತ್ತಿದೆಯೇ? ಹೌದು ನಮ್ಮ ಮೆದುಳನ್ನು ಸರಿಯಾಗಿ ಬಳಸಿ ಕೊಳ್ಳದಿದ್ದರೆ ನೆನಪಿನ ಶಕ್ತಿಯೂ ಕಡಿಮೆಯಾಗುತ್ತಾ ಹೋಗುತ್ತದೆ.

ನೆನಪಿನ ಶಕ್ತಿ ಹೆಚ್ಚಾಗಲು ಕೆಲವೊಂದು ಸಣ್ಣ ಪುಟ್ಟ ಟ್ರಿಕ್ಸ್ ಪಾಲಿಸಬೇಕು. ಆ ಟ್ರಿಕ್ಸ್ ಬಗ್ಗೆ ಹೇಳಿದ್ದೇವೆ ನೋಡಿ:

1. ಎರಡೂ ಕೈಯಲ್ಲಿ ಬರೆಯಲು ಅಭ್ಯಾಸ ಮಾಡುವುದು: ಈ ರೀತಿ ಕೈ ಬದಲಾಯಿಸಿ ಬರೆಯುವುದರಿಂದ ಮೆದುಳಿನ ಸಾಮರ್ಥ್ಯ‌ ಅಧಿಕಗೊಳ್ಳುವುದು.

2. ಹೊಸ ಭಾಷೆ ಕಲಿಯವುದು: ಹೊಸ ಭಾಷೆಯನ್ನು ಕಲಿಯುವುದರಿಂದ ಏಕಾಗ್ರತೆ ಹಾಗೂ ನೆನಪಿನ ಕ್ರಿಯೆಗಳು ಹೆಚ್ಚಳವಾಗುವವು.

3. ಟಿವಿ, ಕಂಪ್ಯೂಟರ್‌, ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌ ಇವುಗಳ ಬಳಕೆಯನ್ನು ಕಡಿಮೆ ಮಾಡಬೇಕು.

4. ಚೆಸ್‌ನಂಥ ಮೈಂಡ್‌ ಗೇಮ್‌ಗಳನ್ನು ಆಡುವುದು.

5. ಸಾಕು ಪ್ರಾಣಿಗಳೊಂದಿಗೆ ಆಡುವುದು.

6. ರಾತ್ರಿ ಹೊತ್ತಿನಲ್ಲಿ ಬೆಳಗ್ಗಿನಿಂದ ನಡೆದ ಘಟನೆಯನ್ನು ಮೆಲುಕು ಹಾಕುವುದು.

7. ಸಂಗೀತ, ಓದು, ವೀಣೆ ಹೀಗೆ ಒಳ್ಳೆಯ ಅಭ್ಯಾಸಗಳಲ್ಲಿ ತೊಡಗಿಕೊಳ್ಳುವುದು.

8. ಅನಾವಶ್ಯಕ ಚಿಂತೆಗಳನ್ನು ತಲೆಯಿಂದ ಹೊರಹಾಕಿ ಸಂತೋಷದಿಂದ ಇರುವುದು.

9. ಯೋಗ, ಪ್ರಾಣಯಾಮ ಅಭ್ಯಾಸ ಮಾಡುವುದು.

ಈ ರೀತಿಯ ಅಭ್ಯಾಸಗಳು ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.

Comments are closed.