ಕರ್ನಾಟಕ

ಚಿಕ್ಕಮಗಳೂರು: ನಟ ರೈ,ಶಾಸಕ ಮೇವಾನಿ ವಿರುದ್ದ FIR ದಾಖಲು

Pinterest LinkedIn Tumblr


ಚಿಕ್ಕಮಗಳೂರು: ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ ಕಾರಣಕ್ಕೆ ನಟ ಪ್ರಕಾಶ್‌ ರೈ ಮತ್ತು ಗುಜರಾತ್‌ ಪಕ್ಷೇತರ ಶಾಸಕ ಜಿಗ್ನೇಶ್‌ ಮೇವಾನಿ ವಿರುದ್ಧ ನಗರ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಮೇ 03 ರಂದು ಅಂಡೇ ಛತ್ರದ ಬಳಿ ಸಂವಿಧಾನದ ಉಳಿವಿಗಾಗಿ ಕರ್ನಾಟಕ, ಸ್ವಾಭಿಮಾನಿ ಸಮಾವೇಶ ಮತ್ತು ಹೋರಾಟ ಗೀತೆ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರವನ್ನು ಕುವೆಂಪು ಕಲಾ ಮಂದಿರದಲ್ಲಿ ನಡೆಸಲು ಅನುಮತಿ ಕೋರಿದ್ದರು, ಆದರೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ.

ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ್ದಕ್ಕಾಗಿ ನಟ ಪ್ರಕಾಶ್‌ ರೈ, ಶಾಸಕ ಮೇವಾನಿ ಸೇರಿದಂತೆ 15 ಮಂದಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಐಪಿಸಿ ಸೆಕ್ಷನ್‌ 143, 147, 341, 188, 149 (37,109)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

-Udayavani

Comments are closed.