ರಾಷ್ಟ್ರೀಯ

ಲಂಚ ನಿರಾಕರಿಸಿದ್ದಕ್ಕೆ ಕೊಲೆಯಾದ ಮಹಿಳಾ ಅಧಿಕಾರಿ

Pinterest LinkedIn Tumblr


ಹೊಸದಿಲ್ಲಿ: ಕಳೆದ ಮೂರು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಕರ್ತವ್ಯ ನಿರತ ಮಹಿಳಾ ಅಧಿಕಾರಿಯನ್ನು ಗುಂಡಿಕ್ಕಿ ಕೊಂದಿದ್ದ ಹೊಟೇಲ್ ಮಾಲೀಕ ತಪ್ಪೊಪ್ಪಿಕೊಂಡಿದ್ದಾನೆ. ಲಂಚ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ನಾನವರನ್ನು ಶೂಟ್ ಮಾಡಿದೆ ಎಂದು ಆರೋಪಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಹೊಟೇಲ್‌ನ್ನು ತೆರವು ಮಾಡಲು ಶೈಲ್ ಬೇಲಾ ತಮ್ಮ ತಂಡದೊಂದಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಆರೋಪಿ ವಿಜಯ್ ಮತ್ತವರ ತಾಯಿ ವಾಗ್ದಾದಕ್ಕಿಳಿದಿದ್ದರು. ಹೊಟೇಲ್ ಕಟ್ಟಡ ತೆರವುಗೊಳಿಸಲು ಬಿಡಲಾರೆ ಎಂದ ವಿಜಯ್ ಸಿಂಗ್, ಅಧಿಕಾರಿ ಬೇಲಾ ಮತ್ತವರ ಸಿಬ್ಬಂದಿಯ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದ. ಗುಂಡೇಟಿನಿಂದ ಗಾಯಗೊಂಡಿದ್ದ ಸಹಾಯಕ ಪಟ್ಟಣ ಯೋಜಕ ಶೈಲ್ ಬಾಲಾ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಮತ್ತೊಬ್ಬ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದರು.

ಹತ್ಯೆ ಮಾಡಿ ಕಾಡೊಂದರಲ್ಲಿ ಓಡಿ ಹೋಗಿದ್ದ ವಿಜಯ್ ಸಿಂಗ್ ನೇಪಾಳಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದ್ದ, ಆದರೆ ಮಥುರಾದಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

Comments are closed.