ಆರೋಗ್ಯ

ಮಣ್ಣಿನ ಮಡಿಕೆಯ ನೀರು ಕುಡಿಯುದರಿಂದ ಆರೋಗ್ಯಕ್ಕೆ ಆಗುವ ಲಾಭವನ್ನೊಮ್ಮೆ ನೋಡಿ…

Pinterest LinkedIn Tumblr

ಬೇಸಿಗೆಯಲ್ಲಿ ತಿಂಡಿ, ಸ್ನ್ಯಾಕ್ಸ್ ತಿನ್ನಬೇಕು ಅನಿಸುವುದಕ್ಕಿಂತ ತಣ್ಣನೆಯ ನೀರು, ತಂಪಾದ ಮಜ್ಜಿಗೆ, ಜ್ಯೂಸ್‌ಗಳು ಕುಡಿಯಬೇಕೆಂದು ಅನಿಸುತ್ತದೆ ಅಲ್ವಾ? ಆದರೆ ತಂಪಾದ ಜ್ಯೂಸ್‌, ನೀರಿಗಾಗಿ ನಮ್ಮಲ್ಲಿ ಹೆಚ್ಚಿನವರು ಫ್ರಿಜ್‌ ಅನ್ನೇ ಅವಲಂಭಿಸಿದ್ದೇವೆ.

ಆದರೆ ಮಣ್ಣಿನ ಮಡಿಕೆಯಲ್ಲಿರುವ ನೀರು, ಮಜ್ಜಿಗೆ ತಂಪಾಗಿರುವುದರ ಜತೆಗೆ ತುಂಬಾ ರುಚಿಕರವಾಗಿರುತ್ತದೆ.

ಮಣ್ಣಿನ ಮಡಿಕೆಯಲ್ಲಿರುವ ನೀರಿನಲ್ಲಿರುವ ಈ ಆರೋಗ್ಯಕರ ಗುಣಗಳು ಫ್ರಿಜ್‌ನಲ್ಲಿಟ್ಟ ನೀರಿನಲ್ಲಿ ಇರುವುದಿಲ್ಲ ನೋಡಿ:

*ಬೇಸಿಗೆಗಾಲದಲ್ಲಿ ಮಣ್ಣಿನ ಮಡಿಕೆಯಲ್ಲಿ ಇರುವ ನೀರು ಕುಡಿದು ದೇಹವನ್ನು ತಂಪಾಗಿ ಇಡಬಹುದು. ಮಣ್ಣಿನ ಮಡಿಕೆ ವಾತಾವರಣಕ್ಕೆ ಅನುಗುಣವಾಗಿ ನೀರನ್ನು ತಂಪಾಗಿ ಇಡುತ್ತದೆ.

* ಈ ನೀರಿನಲ್ಲಿ ಖನಿಜಾಂಶಗಳಿರುತ್ತದೆ.

* ಸನ್‌ಸ್ಟ್ರೋಕ್‌ ಆಗದಂತೆ ತಡೆಯುತ್ತದೆ.

* pH ಪ್ರಮಾಣ ಸಮತೋಲನದಲ್ಲಿಟ್ಟು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ನೀರು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆ ತಡೆಗಟ್ಟಬಹುದು.

*ಅಸ್ತಮಾ, ಶೀತ, ಗಂಟಲು ಕೆರೆತ ಈ ರೀತಿಯ ಸಮಸ್ಯೆ ಇರುವವರು ಮಣ್ಣಿನ ಮಡಿಕೆಯಲ್ಲಿ ಇರುವ ನೀರು ಕುಡಿದರೆ ಒಳ್ಳೆಯದು.

Comments are closed.