ಕ್ರೀಡೆ

ಐಪಿಎಲ್ 2018ರ ಅತಿ ದೊಡ್ಡ ಸಿಕ್ಸರ್ ಸಿಡಿಸಿದ ಆಟಗಾರ ಯಾರು ಗೊತ್ತೇ..?

Pinterest LinkedIn Tumblr

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರದಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ ಸ್ಫೋಟಕ ಅರ್ಧಶತಕವನ್ನು ಬಾರಿಸಿದ್ದಾರೆ.

ಸಿಎಸ್‌ಕೆ ಬೌಲರುಗಳನ್ನು ನಿರ್ದಯವಾಗಿ ದಂಡಿಸಿದ ವಿಲಿಯರ್ಸ್, ಸಿಕ್ಸರ್‌ಗಳ ಸುರಿಮಳೆಗೈದರು. ಈ ಮೂಲಕ ಬೆಂಗಳೂರು ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.

ಕೇವಲ 24 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ ವಿಲಿಯರ್ಸ್, ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು.

ಅಷ್ಟೇ ಯಾಕೆ ಐಪಿಎಲ್ 2018ನೇ ಸಾಲಿನಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಖ್ಯಾತಿಗೂ ಪಾತ್ರವಾಗಿತ್ತು. ವಿಲಿಯರ್ಸ್ ಬಾರಿಸಿದ ಸಿಕ್ಸರ್ (111 ಮೀಟರ್) ನೇರವಾಗಿ ಸ್ಟೇಡಿಯಂ ಹೊರಗಡೆಗೆ ತೇಲಿತ್ತು.

ಅಂತಿಮವಾಗಿ 30 ಎಸೆತಗಳನ್ನು ಎದುರಿಸಿದ ವಿಲಿಯರ್ಸ್ ಎರಡು ಬೌಂಡರಿ ಹಾಗೂ ಎಂಟು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 68 ರನ್ ಗಳಿಸಿದರು. ಇದರೊಂದಿಗೆ ಸತತ ಎರಡನೇ ಅರ್ಧಶತಕ ಸಾಧನೆಯನ್ನು ಮಾಡಿದರು.

Comments are closed.