ಕರಾವಳಿ

ಕ್ಯಾಬೇಜ್ ಎಲೆಗಳಿಗೆ ಮೊಣಕಾಲು ನೋವು ನಿವಾರಿಸುವ ಗುಣ ಇದೆ

Pinterest LinkedIn Tumblr

ಸ್ವಲ್ಪ ವಯಸ್ಸಾದವರನ್ನು ಮಾತನಾಡಿದರೆ ಸಾಕು ಸಂಧಿನೋವು, ಮೊಳಕಾಲು ನೋವು ಬಗ್ಗೆ ಮಾತನಾಡುತ್ತಾರೆ.. ಆ ನೋವನ್ನು ನಿವಾರಿಸಿಕೊಳ್ಳಲು ಅದೆಷ್ಟೋ ರೀತಿಯ ಔಷಧಿಗಳು, ವ್ಯಾಯಾಮಗಳು, ನಾನಾ ಪ್ರಯೋಗಗಳು.. ಬದಲಾವ ಜೀವನ ಮೌಲ್ಯಗಳೂ, ಆಹಾರಾಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ತೀವ್ರ ಪ್ರಭಾವ ತೋರುತ್ತಿವೆ. ಎಲ್ಲಾ ಅನಾರೋಗ್ಯ ಸಮಸೆಯ್ಗಳಿಗೆ ಔಷಧಿಗಳೊಂದೇ ಪರಿಹಾರ ಆಗದಿರಬಹುದು.. ನಮ್ಮ ಮನೆಗಳಲ್ಲಿ ಇರುವ ನಾನಾ ಪದಾರ್ಥಗಳು ನಮ್ಮ ಸಮಸ್ಯೆಗಳಿಗೆ ಪರಿಹಾರ ತೋರುತ್ತವೆ. ಅವುಗಳಲ್ಲಿ ಒಂದು ಕ್ಯಾಬೇಜ್… ಕ್ಯಾಲಿಫೋರ್ನಿಯಾದಲ್ಲಿನ ಮುಸ್ಸೂರಿ ಯೂನಿವರ್ಸಿಟಿ ಸಂಶೋಧಕರು ಕ್ಯಾಬೇಜ್ ಎಲೆಗಳಿಗೆ ಮೊಣಕಾಲು ನೋವು ನಿವಾರಿಸುವ ಗುಣ ಇದೆ ಎಂದು ಕಂಡುಹಿಡಿದಿದ್ದಾರೆ.

ಮೊಣಕಾಲ ನೋವಿಗೆ ಕ್ಯಾಬೇಜ್ ಎಲೆಗಳ ಔಷಧಿ…

ಎರಡೂ ಕಾಲು ನೋವಾಗುತ್ತಿದ್ದರೆ ಎರಡು ಕ್ಯಾಬೇಜ್ ಎಲೆಗಳನ್ನು ತೆಗೆದುಕೊಳ್ಳಬೇಕು. ಕ್ಯಾಬೇಜ್ ಮೇಲಿರುವ ತಾಜಾ ಎಲೆಗಳನ್ನು ಎಗೆದುಕೊಂಡರೆ ಸಾಕು. ಸ್ವಚ್ಛವಾಗಿ ಆ ಎಲೆಗಳನ್ನು ತೊಳೆದು, ಒಣಗಿಸಬೇಕು.
ಎಲೆಯ ಆಕಾರ ಬದಲಾಗದಂತೆ ಚಾಕುವಿನಿಂದ ಅದನ್ನು ಅಡ್ಡಲಾಗಿ ಕತ್ತರಿಸಿಕೊಳ್ಳಬೇಕು. ಕತ್ತರಿಸಿದ ಆ ಚೂರುಗಳ ಆಕಾರ ಸಂಪೂರ್ಣವಾಗಿ ಎಲೆಗಳಂತೆ ಇರುವಂತೆ ಎಚ್ಚರ ವಹಿಸಬೇಕು.
ಅಥವಾ ಮನೆಯಲ್ಲಿರುವ ಚಪಾತಿ ಲಟ್ಟಣಿಯಿಂದ ಚಪಾತಿ ಮಾಡುವ ರೀತಿಯಲ್ಲಿ ಎಲೆಗಳು ಸ್ವಲ್ಪ ಮೆತ್ತಗಾಗುವಂತೆ ಲಟ್ಟಿಸಬೇಕು. ಸ್ವಲ್ಪ ಮೆತ್ತಗಾಗಿ ರಸ ಹೊರಬರುವಂತಾದರೆ ಸಾಕು.
ರಾತ್ರಿ ಮಲಗುವ ಮೊದಲು ಆ ರೀತಿ ಎಲೆಗಳನ್ನು ಲಟ್ಟಣಿಸಿದ ಬಳಿಕ ಮೊಳಕಾಲಿಗೆ ಎಲೆಯನ್ನು ಇಟ್ಟು ಬ್ಯಾಂಡೇಜ್ ಬಟ್ಟೆಯಿಂದ ಅಥವಾ ಪ್ಲಾಸ್ಟರ್‌ನಿಂದ ಸುತ್ತಬೇಕು.

ಮೊಣಕಾಲು ನೋವು ಅಲ್ಲದೆ ಕಾಲಿನ ಇತರೆ ಭಾಗಗಳಲ್ಲಿ ನೋವು ಇದ್ದರೂ ಅಲ್ಲೂ ಈ ರೀತಿ ಮಾಡಿದರೆ ಪರಿಹಾರವಾಗುತ್ತದೆ.
ಬೆಳಗ್ಗೆಯೇ ಆ ಬ್ಯಾಂಡೇಜನ್ನು ಬಿಚ್ಚಬೇಕು. ಪ್ರತಿ ದಿನ ಹೊಸದಾಗಿ ಮತ್ತೆ ಕ್ಯಾಬೇಜ್ ಎಲೆಗಳನ್ನು ತೆಗೆದುಕೊಂಡು ಒಂದು ತಿಂಗಳ ಕಾಲ ರಾತ್ರಿ ಹೂತ್ತು ಈ ರೀತಿ ಬ್ಯಾಂಡೇಜ್ ಹಾಕಿಕೊಂಡರೆ ಮೊಣಕಾಲ ನೋವು ಕಡಿಮೆಯಾಗುತ್ತದೆ

ಕ್ಯಾಬೇಜ್‌ನಿಂದ ಆಗುವ ಇತರೆ ಉಪಯೋಗಗಳು..

ಪ್ರತಿ ನಿತ್ಯ ಕ್ಯಾಬೇಜ್ ಜ್ಯೂಸ್ ಕುಡಿದರೆ ಇನ್ನಷ್ಟು ಒಳ್ಳೆಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆಂಟಿ ಇನ್ಪರ್ಮೇಟರಿ ಲಕ್ಷಣಗಳು ಕ್ಯಾಬೇಜಿನಲ್ಲಿವೆ. ಇವು ನೋವನ್ನು ಕಡಿಮೆ ಮಾಡಲು ಉಪಯೋಗಕ್ಕೆ ಬರುತ್ತವೆ.
ಕ್ಯಾಬೇಜ್‌ನಲ್ಲಿ ಸಲ್ಫರ್ ಸಮೃದ್ಧಿಯಾಗಿ ಇರುತ್ತದೆ. ಹಲವು ರೀತಿಯ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳು ಕ್ಯಾಬೇಜ್‌ನಲ್ಲಿವೆ.
ಕ್ಯಾಬೇಜ್ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಪೊಟ್ಯಾಷಿಯಂ ರಕ್ತನಾಳಗಳು ತೆರೆದುಕೊಳ್ಳುವಂತೆ ಮಾಡಿ ರಕ್ತ ಸಂಚಲನೆಯನ್ನು ಉತ್ತಮಗೊಳಿಸುತ್ತದೆ.
ತೂಕ ಕಡಿಮೆಯಾಗಬೇಕೆಂದರೆ ಕ್ಯಾಬೇಜನ್ನು ಚೆನ್ನಾಗಿ ಉಪಯೋಗಿಸಬೇಕು. ಹಸಿ ಕ್ಯಾಬೇಜ್ ಜ್ಯೂಸ್ ಕುಡಿದರೆ ನಿರೀಕ್ಷಿಸಿದ ಮಟ್ಟದಲ್ಲಿ ಫಲಿತಾಂಶ ಪಡೆಯಬಹುದು

Comments are closed.