ಆರೋಗ್ಯ

ಪಪ್ಪಾಯ ಹಣ್ಣಿನಲ್ಲಿರುವ 12 ಔಷಧೀಯ ಗುಣಗಳ ಬಗ್ಗೆ ಗೊತ್ತಾ?

Pinterest LinkedIn Tumblr

ಶ್ರೀರಾಮ್ ನಾಯಕ್

ಪಪ್ಪಾಯಿ ಅಥವಾ ಪರಂಗಿ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕಾಣಸಿಗುವ ಹಾಗೂ ಎಲ್ಲಾ ಋತುಗಳಲ್ಲಿ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.

ಪಪ್ಪಾಯಿ ಏಕೆ ತಿನ್ನಬೇಕು? ಇಲ್ಲಿವೆ ಕೆಲವು ಕಾರಣಗಳು
1. ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳನ್ನು ಬಹಿರಂಗ ಪಡಿಸುವುದು:
ಸಾಮಾನ್ಯ ಪಪ್ಪಾಯವು ಆರೋಗ್ಯ ಪ್ರಯೋಜನಗಳೊಂದಿಗೆ ತುಂಬಿದ ಹಣ್ಣಾಗಿದೆ. ಇದು ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅತ್ಯಂತ ಪೌಷ್ಟಿಕ ಹಣ್ಣು ಎಂದು ನಂಬಲಾಗಿದೆ. ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು. ಇದು ಕಿತ್ತಳೆಗಿಂತ ಹೆಚ್ಚಿನ ವಿಟಮಿನ್‌ ಸಿ ಯನ್ನು ಹೊಂದಿದೆ ಮತ್ತು ಜೀವಸತ್ವಗಳು ಎ ಮತ್ತು ಬಿ ಗಳ ಉತ್ತಮ ಮೂಲವಾಗಿದೆ.

2. ತೂಕ ನಷ್ಟ:
100 ಗ್ರಾಂಗಳಷ್ಟು ಪಪ್ಪಾಯವು 43 ಕ್ಯಾಲೋರಿಗಳನ್ನು ಮಾತ್ರ ಹೊಂದಿದೆ. ಪಪ್ಪಾಯಲ್ಲಿನ ನಾರಿನ ಅಂಶವು ನಿಮಗೆ ದೀರ್ಘ‌ಕಾಲದವರಿಗೆ ಪೂರ್ಣವಾಗಿ ಪರಿಣಮಿಸುತ್ತದೆ ಮತ್ತು ಇದು ಮಲಬದ್ಧತೆಯನ್ನು ತಡೆಯುತ್ತದೆ.

3. ಕೊಲೆಸ್ಟ್ರಾಲ್‌ (ಕೊಬ್ಬಿನ ಅಂಶ)ಲನ್ನು ಕಡಿಮೆಗೊಳಿಸುತ್ತದೆ
ನಮ್ಮ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯಿ ಉತ್ತಮವಾದ ಫೈಬರ್‌ಗಳ ಮೂಲವಾಗಿದೆ. ಪಪ್ಪಾಯಿ ಸೇವಿಸುವ ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚಾಗುತ್ತದೆ. ಪಪ್ಪಾಯದಲ್ಲಿ ಮಿಟಮಿನ್‌ ಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು:
ಮಧುಮೇಹಕ್ಕೆ ಸಕ್ಕರೆ ಅಂಶ ಮತ್ತು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆಯಾಗಿರುವುದರಿಂದ ಪಪ್ಪಾಯಿ ಉತ್ತಮ ಆಯ್ಕೆಯಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ,ಪಪ್ಪಾಯಿ ಸಾರವು ವಾಸ್ತವವಾಗಿ ಟೈಪ್‌ 2 ಮಧುಮೇಹದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

5. ಕಣ್ಣುಗಳನ್ನು ರಕ್ಷಿಸುತ್ತದೆ:
ಪಪ್ಪಾಯಗಳು ಮಿಟಮಿನ್‌ ಎ ಮತ್ತು ಬೀಟಾ -ಕ್ಯಾರೋಟಿನ್‌ (Beta-Carotene), ಝೀಕ್ಸಾಂಥಿನ್‌ (Zeaxanthinn) ಸೈಟೋಟಾಂಥಿನ್‌(Cyptoxanthinn) ಮತ್ತು ಲ್ಯೂಟಿನ್‌(Luteinn) ನಂತಹ ಫ್ಲೇವೊನೈಡ್ಸ್‌ಗಳು(Flavonoids) ಸಮೃದ್ಧವಾಗಿವೆ,ಇದು ವಯಸ್ಸಿಗೆ ಸಂಬಂಧಿಸಿದ ಸ್ನಾಯುವಿನ ಅವನತಿಗೆ ಅಪಾಯವನ್ನುಂಟು ಮಾಡುತ್ತದೆ . ಲ್ಯೂಟಿನ್‌ ಮತ್ತು ಝೀಕ್ಸಾಂಥಿನ್‌ ಎರಡು ಗುÉಕೋಮಾ(Glaucoma) ಕಣ್ಣಿನ ಪೊರೆ ಹಾಗೂ ಇತರ ದೀರ್ಘ‌ಕಾಲದ ಕಣ್ಣಿನ ರೋಗಗಳನ್ನು ತಡೆಗಟ್ಟುತ್ತದೆ.

6.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಪಪ್ಪಾಯಿಯಲ್ಲಿ ಫೈಬರ್‌ ಹೆಚ್ಚಿರುತ್ತದೆ ಹಾಗಾಗಿ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಹೊಟ್ಟೆ ಸಮಸ್ಯೆಗಳಾದ ಅಜೀರ್ಣ,ಹೊಟ್ಟೆ ಹುಣ್ಣು ,ಹೊಟ್ಟೆ ಮತ್ತು ಎದೆ ಉರಿ ಸಮಸ್ಯೆಗಳಿಗೆ ಪಪ್ಪಾಯಿ ಹಣ್ಣು ಸಹಕಾರಿಯಾಗಿದೆ.ಅಲ್ಲದೇ ಪಿತ್ತಕೋಶದಲ್ಲಿರುವ ವಿಷ ವಸ್ತುಗಳನ್ನು ಹೊರ ಹಾಕುವಲ್ಲಿ ಇದು ಸಹಕಾರಿ.

7. ಸಂಧಿವಾತದಿಂದ ರಕ್ಷಿಸುತ್ತದೆ
ಕೀಲುರೋಗವು ಕೀಲುಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಅಸ್ವಸ್ಥತೆಯಾಗಿದೆ. ಪಪ್ಪಾಯವು ವಿಟಮಿನ್‌ ಸಿ ಜೊತೆಗೆ ಉರಿಯೂತ ಕಿಣ್ವಗಳನ್ನು ಹೊಂದಿದೆ. ಇದು ಸಂಧಿವಾತದಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

8.ಕ್ಯಾನ್ಸರ್‌ ತಡೆಯುತ್ತದೆ
ನೈಸರ್ಗಿಕ ಆಹಾರವಾದ ಪಪ್ಪಾಯಿ ಕೂಡ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪಪ್ಪಾಯವು ಉತ್ಕರ್ಷಣ ನಿರೋಧಕ ,ಫೈಟೋನ್ಯೂಟ್ರಿಯಟ್ಸ್‌ಗಳ ಸಮೃದ್ಧ ಮೂಲವಾಗಿದೆ.ಇದು ಕ್ಯಾನ್ಸರ್‌ಗೆ ಕಾರಣವಾಗುವ ಕೋಶಗಳ ವಿರುದ್ಧ ದೇಹವು ಹೋರಾಡಲು ಸಹಾಯ ಮಾಡುತ್ತದೆ.

9. ಕೂದಲು ಪೋಷಿಸುತ್ತದೆ
ಪಪ್ಪಾಯ ಖನಿಜಗಳು,ಜೀವಸ್ವತಗಳು ಮತ್ತು ಕಿಣ್ವಗಳ ಒಂದು ಉತ್ತಮ ಮೂಲವಾಗಿದೆ.ಇದು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಅಲ್ಲದೇ ಕೂದಲನ್ನು ಹೊಳಪಿನಂತೆ ಮಾಡುತ್ತದೆ.

10.ಚರ್ಮದ ಕಲೆಗೆ ರಾಮಬಾಣ:
ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನು ಉಜ್ಜಿದರೆ ಚರ್ಮದ ಮೇಲಿನ ಕಲೆ ಮಾಯವಾಗುತ್ತದೆ.

11. ಶಕ್ತಿದಾಯಕ ಆಹಾರ
ಪಪ್ಪಾಯಿ ಸೇವನೆಯಿಂದ ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ ಅಲ್ಲದೇ ಮಕ್ಕಳಿಗೆ ಹಾಲು ಉಣಿಸುವ ತಾಯಂದಿರಿಗೆ ಪಪ್ಪಾಯು ಶಕ್ತಿದಾಯಕ ಆಹಾರ.

12. ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಪಪ್ಪಾಯದಲ್ಲಿ ಇರುವ ವಿಟಮಿನ್‌ ಸಿ ಒತ್ತಡದ ಹಾರ್ಮೋನುಗಳ ಹರಿವನ್ನು ನಿಯಂತ್ರಿಸುತ್ತದೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಲ್ಲಿ ಪಪ್ಪಾಯಿ ಅವರ ದಿನನಿತ್ಯದ ಆಹಾರದಲ್ಲಿ ಇರಬೇಕು.

ಪಪ್ಪಾಯಿ ಎಲೆಯ ಮಹತ್ವ:
1. ಪಪ್ಪಾಯ ಎಲೆಗಳಿಂದ ಹಲ್ಲು ಉಜ್ಜಿದರೆ ಹಲ್ಲು ಹಾಗೂ ವಸಡು ನೋವು ನಿವಾರಣೆಯಾಗುತ್ತದೆ.
2. ಪಪ್ಪಾಯಿ ಎಲೆ ರಸ ಕುಡಿಯುವುದರಿಂದ ಡೆಂಗ್ಯೂ ಜ್ವರದಿಂದ ಗುಣಮುಖ ಮಾಡುವ ಅತ್ಯುತ್ತಮ ಮನೆ ಮದ್ದಾಗಿದೆ.

ನಿಮಗೊಂದು ಸಲಹೆ:
ಮನೆ ಮುಂದೆ ಜಾಗವಿದ್ದರೆ ಒಂದಾದರೂ ಪಪ್ಪಾಯಿ ಗಿಡವನ್ನು ಬೆಳೆದಲ್ಲಿ ಇದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

-ಉದಯವಾಣಿ

Comments are closed.