ಕರ್ನಾಟಕ

ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಬಲ ಪ್ರದರ್ಶನ; ಸಿಎಂ ಚೌಹಾಣ್‌ ಸಾಥ್‌

Pinterest LinkedIn Tumblr


ಮೊಳಕಾಲ್ಮೂರು: ಸಂಸದ ಶ್ರೀರಾಮುಲು ಅವರು ಶನಿವಾರ ಮೊಳಕಾಲ್ಮೂರಿನಲ್ಲಿ ಭರ್ಜರಿ ಬಲಪ್ರದರ್ಶನ ಮಾಡುವ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.

ಅಪಾರ ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಶ್ರೀರಾಮುಲು ಅವರಿಗೆ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು.

ಬಹಿರಂಗ ಸಮಾವೇಶ ನಡೆಸಲಾಗುತ್ತಿದೆ. ವ್ಯಾಪಕ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ.

ಟಿಕೆಟ್‌ ಕೈತಪ್ಪಿದ ಬಳಿಕ ಶಾಸಕ ತಿಪ್ಪೇಸ್ವಾಮಿ ಅವರ ಬೆಂಬಲಿಗರು ಶ್ರೀರಾಮುಲು ಪ್ರಚಾರ ಆರಂಭಿಸಿದ ದಿನ ಕಲ್ಲು , ಚಪ್ಪಲಿಗಳನ್ನು ತೂರಾಡಿ ವ್ಯಾಪಕ ಆಕ್ರೋಶ ಹೊರ ಹಾಕಿದ್ದರು.

-ಉದಯವಾಣಿ

Comments are closed.