ರಾಷ್ಟ್ರೀಯ

6 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ: ಚಿಕ್ಕಪ್ಪನ ಕೃತ್ಯ

Pinterest LinkedIn Tumblr


ಇಂದೋರ್‌ : ಬಲೂನ್‌ ಮಾರಿಕೊಂಡು ಜೀವನ ಸಾಗಿಸುವ ಕುಟುಂಬವೊಂದರ ಆರು ತಿಂಗಳ ಹೆಣ್ಣು ಮಗವನ್ನು ಅದರ ಚಿಕ್ಕಪ್ಪನೇ ಅಪಹರಿಸಿ ಇಲ್ಲಿನ ರಾಜವಾಡ ಪ್ರದೇಶದಲ್ಲಿನ ಕಟ್ಟಡವೊಂದರ ತಳ ಅಂತಸ್ತಿನಲ್ಲಿ ಅತ್ಯಾಚಾರ ಗೈದು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಗವನ್ನು ಅಪಹರಿಸಿ ಅತ್ಯಾಚಾರಗೈದು ಕೊಂದಿರುವ ಚಿಕ್ಕಪ್ಪನನ್ನು 21ರ ಹರೆಯದ ಸುನೀಲ್‌ ಭೀಲ್‌ ಎಂದು ಗುರುತಿಸಲಾಗಿದೆ. ರಾಜವಾಡ ಕೋಟೆಯ ಹೊರಗೆ ಶುಕ್ರವಾರ ರಾತ್ರಿ ಮಗುವಿನ ಕುಟುಂಬ ಮಲಗಿಕೊಂಡಿದ್ದಲ್ಲಿಂದ ಆರೋಪಿ ಸುನೀಲ್‌ ಭೀಲ್‌ ಮಗುವನ್ನು ಹೆಗಲಿಗೇರಿಸಿಕೊಂಡು ಸಾಗುತ್ತಿದ್ದ ದೃಶ್ಯ ಸಿಸಿಟಿವಿ ಯಲ್ಲಿ ದಾಖಲಾಗಿದ್ದು ಇದರ ಆಧಾರದಲ್ಲಿ ಅತ್ಯಾಚಾರಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಾಯಿಯೊಂದಿಗೆ ಆರೋಪಿ ಸುನೀಲ್‌ ಜಗಳ ಮಾಡಿದ್ದನ್ನು ಅನುಸರಿಸಿ ಆತ ಈ ನೀಚ ಕೃತ್ಯ ಎಸಗಿದ್ದಾನೆ. ಆದರೆ ಸುನೀಲ್‌ ಮನೆಯವನೇ ಆದ ಕಾರಣ ಮಗುವಿನ ಹೆತ್ತವರು ಆತನ ಹೆಸರನ್ನು ಎಫ್ಐಆರ್‌ನಲ್ಲಿ ಉಲ್ಲೇಖೀಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

-ಉದಯವಾಣಿ

Comments are closed.