ಮುಂಬೈ

ಕೆವೈಸಿ ನಿಯಮದಡಿ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ: ಆರ್‌ಬಿಐ

Pinterest LinkedIn Tumblr


ಮುಂಬಯಿ: “ನಿಮ್ಮ ಗ್ರಾಹಕರನ್ನು ತಿಳಿಯಿರಿ” ಮಾರ್ಗದರ್ಶಿ ಸೂತ್ರಗಳ ಪ್ರಕಾರ ಬ್ಯಾಂಕ್‌ ಗ್ರಾಹಕರು ಆಧಾರ್‌ ಕಾರ್ಡನ್ನು ತಮ್ಮ ಬ್ಯಾಂಕ್‌ ಖಾತೆಗೆ ಜೋಡಿಸುವುದನ್ನು ಆರ್‌ಬಿಐ ಕಡ್ಡಾಯ ಮಾಡಿದೆ.

ಹಾಗಿದ್ದರೂ ಆಧಾರ್‌ ಕಾರ್ಡನ್ನು ಕಡ್ಡಾಯಗೊಳಿಸುವಲ್ಲಿನ ಸುಪ್ರೀಂ ಕೋರ್ಟ್‌ ಅಂತಿಮ ನಿರ್ಧಾರವನ್ನು ಇದು ಅವಲಂಬಿಸಿದೆ ಎಂದು ಆರ್‌ಬಿಐ ಹೇಳಿದೆ.

ಈ ವರೆಗಿನ ಆರ್‌ಬಿಐನ ಕೆವೈಸಿ (ನೋ ಯುವರ್‌ ಕಸ್ಟರ್‌ ಅಥವಾ ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮಗಳ ಪ್ರಕಾರ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಗೆ ಐಟಿ ಇಲಾಖೆ ಕೊಟ್ಟಿರುವ ಪ್ಯಾನ್‌ ನಂಬರ್‌ ಮತ್ತು ಈಚಿನ ಪಾಸ್‌ಪೋರ್ಟ್‌ ಗಾತ್ರದ ಫೋಟೋ ಸಲ್ಲಿಸುವುದು ಅಗತ್ಯವಾಗಿದೆ. ಆದರೆ ಆರ್‌ಬಿಐ ತಿದ್ದುಪಡಿ ಮಾಡಿರುವ ತನ್ನ ಕೆವೈಸಿ ನಿಯಮಗಳ ಪ್ರಕಾರ ಬ್ಯಾಂಕ್‌ ಖಾತೆಗೆ ಆಧಾರ್‌ ನಂಬರ್‌ ಜೋಡಣೆಯನ್ನು ಕಡ್ಡಾಯ ಮಾಡಿದೆ.

-ಉದಯವಾಣಿ

Comments are closed.