ಮುಂಬಯಿ: ಭಗವತೀ ಮಾತೆಯ ಆಶೀರ್ವಾದದಿಂದ ನನ್ನನ್ನು ಸಸಿಹಿತ್ಲು ಕ್ಷೇತ್ರದ ಆಡಳಿತ ಮೊಕ್ತೇಸರನನ್ನಾಗಿ ನೇಮಿಸಲಾಗಿದೆ. ಭಗವತೀ ಮಾತೆಯು ನನ್ನ ಬೇಡಿಕೆಯನ್ನೂ ಈಡೇರಿಸಿದ್ದು ಮಾತೆಯ ಸೇವೆ ಮಾಡುವ ಅವಕಾಶ ನನಗೆ ದೊರಕಿದೆ. ಆದುದರಿಂದ ಒಗ್ಗಟ್ಟಿನಿಂದ ನಾವೆಲ್ಲರೂ ಮುಂಬಯಿ ಸಮಿತಿಯ ನೂತನ ಅಧ್ಯಕ್ಷರಾದ ವೇದಪ್ರಕಾಶ್ ಎಂ. ಶ್ರೀಯಾನ್ ಇವರೊಂದಿಗೆ ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಈ ಪುಣ್ಯ ಕಾರ್ಯಕ್ಕೆ ಒಗ್ಗಟ್ಟಿನಿಂದ ಕೈ ಜೋಡಿಸೋಣ ಎಂದು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಆರ್. ಬೆಳ್ಚಡ ನುಡಿದರು.

ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭವು ಮಾರ್ಚ್ 4 ರಿಂದ 8, 2026 ರವರೆಗೆ ನಡೆಯಲಿದ್ದು ಪೂರ್ವಭಾವಿ ಸಭೆಯು ಅ. 12, ರಂದು ಅಂಧೇರಿ ಪಶ್ಚಿಮದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಕ್ಯಾಂಪಸ್, 2 ನೇ ಮಹಡಿಯಲ್ಲಿ ಜರಗಿದ್ದು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಜನಪ್ರಿಯ ಕಲಾವಿದರನ್ನು ಮುಂಬಯಿ ಮಹಾನಗರಕ್ಕೆ ನೀಡಿದ ಸಸಿಹಿತ್ಲುನವರು ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ದಿಯನ್ನು ಪಡೆದವರು. ಹದಿನಾರು ಕೋಟಿ ರೂಪಾಯಿ ಅಂದಾಜು ವೆಚ್ಚದ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ನಾವು ಭಗವತೀ ಮಾತೆಯ ಆಶ್ರೀರ್ವಾದದಿಂದ ನಗರದ ಖ್ಯಾತ ಉದ್ಯಮಿ ಸಮಾಜ ಸೇವಕ ವೇದಪ್ರಕಾಶ್ ಎಂ. ಶ್ರೀಯಾನ್ ಇವರನ್ನು ಆಯ್ಕೆ ಮಾಡಿದ್ದು ಇವರು ಈ ಸ್ಥಾನಕ್ಕೆ ಸಮರ್ಥ ನಾಯಕರಾಗಿದ್ದು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭವು ಎಲ್ಲರ ಸಹಕಾರದಿಂದ ಅದ್ದೂರಿಯಾಗಿ ನಡೆಯುದರಲ್ಲಿ ಸಂದೇಹವಿಲ್ಲ ಎಂದರು.
ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಮುಖ್ಯ ಅಥಿಯಾಗಿ ಆಗಮಿಸಿ ಮಾತನಾಡಿ ಮಾನವನ ಅಸ್ತಿತ್ವ ಭಗವಂತನ ನೆಲೆಯಲ್ಲಿದೆ. ಸನಾತನ ಧರ್ಮ ಉಳಿಸಲು ಊರಿಗೆ ಮಹಾಲಕ್ಷ್ಮಿ ನೆಲೆಸಿರುವ ಮುಂಬಯಿಗರು ಪ್ರತೀ ವರ್ಷ ಹಲವಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದ್ದರೆ. ದೇವಿಯನ್ನು ಎತ್ತರದ ಸ್ಥಳದಲ್ಲಿ ಇರಿಸಿದ್ದು , ದೇವಿಯ ಮಹಿಮೆ ನಮಗೆ ಸಿಗುತ್ತಿದೆ. ದೇವರ ಸ್ಥಳಗಳಲ್ಲಿ ನಮಗೆ ಮನಸ್ಸಿಗೆ ಶಾಂತಿ ಸಿಗುತ್ತದೆ. ಈ ಪುಣ್ಯ ಕಾರ್ಯಕ್ಕೆ ನನ್ನಿಂದಾಗುವ ಸಹಾಯವನ್ನು ಮಾಡುವೆನು ಎಂದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಯವರು ಮಾತನಾಡುತ್ತಾ ಭಗವತಿ ಮಾತೆಯ ಸೇವೆಯನ್ನು ನಿಮ್ಮೆಲ್ಲರ ಮೂಲಕ ಮಾಡಿಸಲು ಭಗವತಿ ಮಾತೆ ನಮ್ಮನ್ನು ಇಂದು ಪ್ರಸಾದದೊಂದಿಗೆ ಮುಂಬಯಿಗೆ ಕಳುಹಿಸಿದ್ದಾರೆ. ಮಾತೆಯ ಸೇವೆ ಮಾಡುವ ಸದಾವಾಕಾಶ ನಮ್ಮೆಲ್ಲರಿಗೆ ಸಿಕ್ಕಿದ್ದು ಭಗವತಿಯ ಆಶ್ರೀರ್ವಾದ ನಿಮ್ಮೆಗೆಲ್ಲರಿಗೂ ಪ್ರಾಪ್ತವಾಗಲಿ ಎಂದರು. ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘದ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.
ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ವಾಮನ್ ಇಡ್ಯಾ ಅವರು ಸಸಿಹಿತ್ಲು ಕ್ಷೇತ್ರದಲ್ಲಿ ಭಗವತೀ ಮಾತೆ ನೆಲೆನಿಂತ ಬಗ್ಗೆ ಮಾಹಿತಿ ನೀಡಿದರು. ಮುಂಬಯಿಗರ ಪ್ರೀತಿಯನ್ನು ಕಾಣಲು ಇಲ್ಲಿಗೆ ಬಂದಿದ್ದು ಪ್ರೀತಿ ಸ್ನೇಹ ಎಂದೂ ಶಾಸ್ವತ. ಮಾತೆ ಭಗವತಿಯು ಮೊಗವೀರ ಭವನಕ್ಕೆ ಆಗಮಿಸಿದ್ದಾಳೆ. ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ, ಅತಿಥಿಗೃಹ ಸೇರಿ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಮುಂಬಯಿ ಭಕ್ತರ ಹಾಗೂ ದಾನಿಗಳ ಸಹಾಯದ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಸಾಲ್ಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷರಾದ ಗಣೇಶ್ ಕಾಂಚನ್, ಹೋಟೆಲ್ ಉದ್ಯಮಿ ಸುರೇಶ್ ಕಾಂಚನ್ ಗೋಪಾಲ್ ಪುತ್ರನ್, ಬಿಲ್ಲವ ಹಿತವರ್ಧಕ ಸಂಘದ ಸಸಿಹಿತ್ಲು ಅಧ್ಯಕ್ಷ ಸಿ, ಬಿ. ಕರ್ಕೇರ, ಸಸಿಹಿತ್ಲು, ರಾಜಕಾರಿಣಿ ಲಕ್ಷಣ ಪೂಜಾರಿ, ಸಸಿಹಿತ್ಲು ಭಗವತೀ ತೀಯಾ ಸಂಘ ಮುಂಬಯಿಯ ಅಧ್ಯಕ್ಷ ಚಂದ್ರಹಾಸ ಪಾಲನ್, ಪದ್ಮನಾಭ ಬಿ. ಅಮೀನ್, ಕದಿಕೆ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಚಂದ್ರಕಾಂತ್ ಪುತ್ರನ್ ಮೊದಲಾದವರು ಬ್ರಹ್ಮಕಲಶೋತ್ಸವ ಮಾತನಾಡಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು.
ಸಸಿಹಿತ್ತ್ಲು ಬಿಲ್ಲವರ ಮುಂಬಯಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್, ಸಸಿಹಿತ್ಲು ಮುಂಬಯಿ ಸಮಿತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಟ್ರಸ್ಟಿ ಗೀತಾ ಪಿ ಕುಮಾರ್, ಕಲೀನ ಭಗವತಿ ದೇವಸ್ಥಾನದ ಕುಮಾರ ಸ್ವಾಮಿ, ಸುಹಾನ್ ದೇಸಾಯಿ ಮುಂಬಯಿ, ಮನೋಜ್ ನಾಗ್ ಪಾಲ್, ಕೃಷ್ಣ ಶೆಟ್ಟಿಗಾರ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರು ಬ್ರಹ್ಮಕಲಶೋತ್ಸವ ಸಮಾರಂಭದ ವಿಜ್ನಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು.
ಪದ್ಮನಾಭ ಸಸಿಹಿತ್ತ್ಲು ಸ್ವಾಗತಿಸಿದ್ದು, ರಾಜೇಂದ್ರ ಪ್ರಸಾದ್ ಎಕ್ಕಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಶೋಕ್ ಸಸಿಹಿತ್ತ್ಲು ಸಹಕರಿಸಿದರು.
ಬ್ರಹ್ಮಕಲಶೋತ್ಸವದ ಮುಂಬಯಿ ಸಮಿತಿಯ ಅಧ್ಯಕ್ಷರನ್ನಾಗಿ ವೇದಪ್ರಕಾಶ್ ಎಂ. ಶ್ರೀಯಾನ್ ಮಹಾನಗರದ ಖ್ಯಾತ ಉದ್ಯಮಿ ಸಮಾಜ ಸೇವಕ ವೇದಪ್ರಕಾಶ್ ಎಂ. ಶ್ರೀಯಾನ್ ಇವರನ್ನು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಆಯ್ಕೆ ಮಾಡಲಾಯಿತು. ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಆರ್. ಬೆಳ್ಚಡ ಅವರು ವೇದಪ್ರಕಾಶ್ ಎಂ. ಶ್ರೀಯಾನ್ ಅವರ ಹೆಸರನ್ನು ಘೋಷಿಸಿದರು. ನಂತರ ಮಾತನಾಡಿದ ವೇದಪ್ರಕಾಶ್ ಎಂ. ಶ್ರೀಯಾನ್ ಅವರು ಮುಂಬಯಿಯಲ್ಲಿ ನಾವು ಒಂದು ಬಲಿಷ್ಠ ಸಮಿತಿಯನ್ನು ಮಾಡಲಿದ್ದೇವೆ. ಈ ಅವಕಾಶ ಹನ್ನೆರಡು ವರ್ಷಗಳ ನಂತರ ಬರಲಿದ್ದು, ಈಗ ನಮಗೆ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯ ಆದುದರಿಂದ ನಾವೆಲ್ಲರೂ ಒಂದಾಗಿ ಅದ್ದೂರಿಯಿಂದ ಬ್ರಹ್ಮಕಲಶೋತ್ಸವ ಸಮಾರಂಭವನ್ನು ನೆರವೇರಿಸೋಣ ಎಂದರು.
ವರದಿ : ಈಶ್ವರ ಎಂ. ಐಲ್
Comments are closed.