UAE

ದುಬೈಯಲ್ಲಿ ಪ್ರಥಮ ಪ್ರದರ್ಶನದಲ್ಲೇ ಪ್ರೇಕ್ಷಕರ ಮನಗೆದ್ದ ‘ಪೋನಗ ಕೊನೊಪರಾ..?’ ತುಳು ನಾಟಕ 

Pinterest LinkedIn Tumblr

ದುಬೈ: ಯುಎಇಯಲ್ಲಿ ಇರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತ ಬಂದಿರುವ ಗಮ್ಮತ್ ಕಲಾವಿದೆರ್ ದುಬೈ ಯುಎಇ ತಂಡವು ಈ ಭಾರಿ ಅತ್ಯುತ್ತಮ ಪ್ರದರ್ಶನ ನೀಡಿ ಕಲಾಭಿಮಾನಿಗಳ ಮನಗೆದ್ದಿದೆ.

ಅಕ್ಟೋಬರ್ ಹನ್ನೊಂದರಂದು ಸಂಜೆ ನಗರದ ಎಮಿರೇಟ್ಸ್ ಥೀಯೇಟರ್ ಉಮ್ ಅಲ್ ಸೈಫ್‌ನ ಸಭಾಂಗಣದಲ್ಲಿ ಗಮ್ಮತ್ ಕಲಾವಿದೆರ್ ದುಬೈನ 14ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ “ಪೋನಗ ಕೊನೊಪರಾ..?” ಎಂಬ ತುಳು ನಾಟಕ ಪ್ರಥಮ ಪ್ರದರ್ಶನಗೊಂಡಿದ್ದು “ಹೌಸ್ ಪುಲ್ ಶೋ” ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಬಿ ಆರ್ ಶೆಟ್ಟಿ, ಮುಂಬೈನ ಪ್ರಖ್ಯಾತ ಜ್ಯೋತಿಷ್ಯರು  ಸೈನ್ ಕನ್ನಡ‌ ಸಂಘದ ಅಧ್ಯಕ್ಷರಾದ ಡಾ.ಎಂ.ಜೆ.ಪ್ರವೀಣ್ ಭಟ್, ಖ್ಯಾತ ಮುಳುಗು ತಜ್ಞ, ಸಮಾಜ ಸೇವಕ ಈಶ್ವರ್ ಮಲ್ಪೆ, ದೈಜಿವಲ್ಡ್ ವಾಹಿನಿಯ ಸಂಪಾದಕ ವಾಲ್ಟರ್ ನಂದಳಿಕೆ, ಐವರಿ ಗ್ರ್ಯಾಂಡ್ ನ ಮ್ಯಾನೇಜಿಂಗ್ ನಿರ್ದೇಶಕ ಮೈಕಲ್ ಡಿಸೋಜಾ, ತುಳು ಸಿನಿಮಾ ಕಜ್ಜ ದ ನಿರ್ಮಾಪಕ ವಿಶಾಂತ್ ಮಿನೇಜಸ್, ಯುಎಇ ಬಂಟ್ಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ಥಮ ಶೆಟ್ಟಿ, ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ಆಗಮಿಸಿ ಶುಭ ಹಾರೈಸಿದ್ದಾರೆ.

ವೇದಿಕೆಯಲ್ಲಿ ಗಮ್ಮತ್ ಕಲಾವಿದೆರ್ ಸಂಘದ  ಅಧ್ಯಕ್ಷರಾದ ಲಾವಿನ ಫರ್ನಾಂಡಿಸ್, ಸೆಕ್ರೆಟರಿ ದೀಪ್ತಿ ದಿನರಾಜ್ ಶೆಟ್ಟಿ , ಖಜಾಂಜಿ ಜೇಶ್ ಬಯ್ಯಾರ್, ಮಹಾಪೋಷಕರು ಹರೀಶ್ ಬಂಗೇರ್ ಉಪಸ್ಥಿತರಿದ್ದರು.

ಈ ನಾಟಕವು ದಿನಕರ್ ಭಂಡಾರಿ ಕಣಂಜರ್ ಅವರ ಮೂಲ ಕಥೆಯಾಗಿದ್ದು, ನಾಟಕವನ್ನು ರಂಗ ಸಾರಥಿ  ವಿಶ್ವನಾಥ ಶೆಟ್ಟಿ ನಿರ್ದೇಶಿಸಿದ್ದು,  ಖ್ಯಾತ ರಂಗ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ರಚನೆಯಲ್ಲಿ “ಪೋನಗ ಕೊನೊಪರಾ” ಈ ನಾಟಕವು ವಿಶೇಷ ಶೈಲಿಯಲ್ಲಿ ಮೂಡಿಬಂದಿದೆ.

ಇನ್ನು ಮೊದಲ ಪ್ರದರ್ಶನದಲ್ಲೇ  ‘ಪೋನಗ ಕೋನಪರ’ ನಾಟಕ ಪ್ರೇಕ್ಷಕರ ಮನಗೆದ್ದಿದ್ದು, ಈಗ ನಾಟಕ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ ಎನ್ನಲಾಗಿದೆ.

Comments are closed.