ಆರೋಗ್ಯ

ಗರ್ಭಧಾರಣೆಯ ಸಮಯದಲ್ಲಿ ಮಗುವಿಗೆ ಹಾನಿ ಉಂಟು ಮಾಡುವ ಅಂತಹ ವಿಷಯಗಳು

Pinterest LinkedIn Tumblr

ಗರ್ಭಧಾರಣೆಯ ಸಮಯದಲ್ಲಿ ಹೆಣ್ಣಿನ ದೇಹ ಅಪಾಯಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದೇ ಕಾರಣಕ್ಕೆ ಹೆಣ್ಣು ಗರ್ಭಿಣಿ ಆದೊಡನೆ ಆಕೆಯ ಬಗ್ಗೆ ಎಂದಿಗಿಂತ ಹೆಚ್ಚು ಕಾಳಜಿ ವಹಿಸುತ್ತಾರೆ. ಅದು ಮೆಟ್ಟಿಲು ಹತ್ತುವಾಗಲೇ ಇರಲಿ, ಹಣ್ಣು ತಿನ್ನುವಾಗಲೇ ಇರಲಿ. ಹೀಗೆ ಪ್ರತಿ ಹೆಜ್ಜೆಯು ಅಷ್ಟೊಂದು ಎಚ್ಚರವಹಿಸಿ ಇಡಬೇಕಾದಾಗ, ಅಮ್ಮಂದಿರು ತಾವು ಪ್ರತಿನಿತ್ಯ ಹಾನಿಕಾರಕ ಟಾಕ್ಸಿನ್ಸ್ ಮತ್ತು ರಾಸಾಯನಿಕಗಳಿಗೆ ತೆರೆದುಕೊಳ್ಳುತ್ತಿರುವುದರ ಬಗ್ಗೆ ಏಕೆ ಎಚ್ಚರ ವಹಿಸುವುದಿಲ್ಲ?

ನಾವು ಕೆಮಿಕಲ್ಸ್ ಅಥವಾ ರಾಸಾಯನಿಕಗಳು ಎಂದೊಡನೆ ಅದು ಕೈಗಾರಿಕೆಗಳಿಂದಲೇ ಬರುವ ರಾಸಾಯನಿಕಗಳು ಅಲ್ಲ. ನಾವು ಮಾತಾಡುತ್ತಿರುವುದು ನಿಮಗೇ ಗೊತ್ತಿಲ್ಲದೇ ನಿಮ್ಮ ಮನೆಯಲ್ಲೇ ಹರಡಿರುವ ಹಾನಿಕಾರಕ ರಾಸಾಯನಿಕಗಳು. ಹೌದು, ಪಾತ್ರೆ ತೊಳೆಯಲು ಬಳಸುವ ಪೌಡರ್ ಇಂದ ಹಿಡಿದು ನೀವು ಪ್ರತಿದಿನ ಮನೆಯಲ್ಲೇ ಬಳಸುವ ಚಿಕ್ಕ ಚಿಕ್ಕ ವಸ್ತುಗಳಲ್ಲೂ ಹಾನಿಕಾರಕ ರಾಸಾಯನಿಕಗಳು ಇದ್ದು, ಇವುಗಳು ನಿಮ್ಮ ಮಗುವಿಗೆ ಹಾನಿ ಉಂಟು ಮಾಡುತ್ತವೆ.

ಗರ್ಭಿಣಿ ಹೆಣ್ಣು ಇದಕ್ಕೆ ತೆರೆದುಕೊಂಡಾಗ, ಅವುಗಳು ಆಕೆಯ ಗರ್ಭಕೋಶದ ಒಳಗೆ ಪ್ರಯಾಣಿಸಿ, ಬೆಳೆಯುತ್ತಿರುವ ಭ್ರೂಣದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನ ಬೀರುತ್ತವೆ. ಇವುಗಳು ಮಗುವಿನಲ್ಲಿ ಬರ್ತ್ ಡೆಫೆಕ್ಟ್ಸ್, ಮೆದುಳು ಮತ್ತು ಅಂಗಾಂಗ ಹಾನಿ ಮತ್ತು ಇನ್ನುಳಿದ ಬೆಳವಣಿಗೆಯ ಮತ್ತು ಸ್ವಾಭಾವಿಕ ತೊಂದರೆಗಳನ್ನ ಉಂಟು ಮಾಡುತ್ತವೆ.

ಹಾಗಿದ್ದರೆ ನಿಮ್ಮ ಮಗುವಿಗೆ ಹಾನಿ ಉಂಟು ಮಾಡುವ ಅಂತಹ ವಿಷಯಗಳು ಯಾವುದೆಂದು ನೋಡೋಣ ಬನ್ನಿ :
೧. ನೀವು ಸೇವಿಸುವ ಆಹಾರ
ಹಸಿ ಮೊಟ್ಟೆ ಅಥವಾ ಮಾಂಸ, ಕಾಫಿ ಮತ್ತು ಮದ್ಯಪಾನದಂತಹ ವಸ್ತುಗಳನ್ನ ನೀವು ಗರ್ಭಧಾರಣೆಯಲ್ಲಿ ದೂರವಿಡಬೇಕು. ಆದರೆ ನೀವು ಸೇವಿಸುವ ತರಕಾರಿ, ಹಣ್ಣುಗಳು ಕೂಡ ಕೀಟನಾಶಕಗಳ ರಾಸಾಯನಿಕಗಳಿಂದ ಕೂಡಿರಬಹುದು ಅಥವಾ ಕೆಮಿಕಲ್ಸ್ ವರ್ಗಾವಣೆ ಇಂದ ಆಗಬಹುದು. ನೀವೇನಾದರೂ ರಾಸಾಯನಿಕಗಳುಳ್ಳ ಫ್ಲೋರ್ ಕ್ಲೀನರ್ ಅಂತಹ ಉತಪನ್ನವನ್ನ ಮುಟ್ಟಿ, ತರಕಾರಿ ಮುಟ್ಟಿದರೆ ರಾಸಾಯನಿಕಗಳ ವರ್ಗಾವಣೆ ಆಗುತ್ತದೆ.

೨. ನೀವು ಉಸಿರಾಡುವ ಗಾಳಿ
ನಿಮ್ಮ ಮನೆಯಲ್ಲಿನ ರಾಸಾಯನಿಕಗಳನ್ನ ನೀವು ಮುಟ್ಟಿದ ನಂತರವಷ್ಟೇ ಸೇವಿಸುವುದಿಲ್ಲ. ಬದಲಿಗೆ ನಿಮ್ಮ ಮನೆಯಲ್ಲಿನ ಗಾಳಿಯೊಂದಿಗೆ ಅವುಗಳು ಸೇರಿಕೊಂಡು ನಿಮ್ಮ ಶ್ವಾಸಕೋಶ ಸೇರಿಕೊಳ್ಳಬಹುದು. ಇದರಿಂದ ನಿಮಗೆ ಮತ್ತು ಮಗುವಿಗೆ ಕಳಪೆ ಮಟ್ಟದ ಗಾಳಿ ದೊರೆತು, ಮಗುವಿನಲ್ಲಿ ತೂಕದ ಕೊರತೆ, ಅಕಾಲಿಕ ಹೆರಿಗೆ ಅಥವಾ ಆಟಿಸಂ ಅಂತಹ ತೊಂದರೆಗಳು ಉಂಟಾಗಬಹುದು.

೩. ನೀವು ಕುಡಿಯುವ ನೀರು
ಇತ್ತೀಚಿಗಷ್ಟೇ ನಡೆದ ಅಧ್ಯಯನ ಒಂದರಲ್ಲಿ ಯಾವೆಲ್ಲಾ ಗರ್ಭಿಣಿಯರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತಾರೋ, ಅಂತವರಿಗೆ ಸ್ಥೂಲಕಾಯ ತೊಂದರೆ ಉಳ್ಳ ಮಗು ಜನಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ತಿಳಿದು ಬಂದಿದೆ. ಇದಕ್ಕೆ ಕಾರಣ ಪ್ಲಾಸ್ಟಿಕ್ ಅಲ್ಲಿರುವ BPA ನಿಮ್ಮ ಹಾರ್ಮೋನುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಪ್ರೆಗ್ನನ್ಸಿ ಸಮಯದಲ್ಲಿ ಹಸಿವನ್ನ ನಿಯಂತ್ರಿಸುವುದು ಕಷ್ಟ ಮಾಡುತ್ತದೆ.

೪. ನೀವು ಹಚ್ಚಿಕೊಳ್ಳುವ ಮೇಕ್ಅಪ್
ಪ್ರೆಗ್ನನ್ಸಿ ವೇಳೆ ನೀವು ನಿಮ್ಮ ದೇಹದ ಒಳಗೆ ಏನು ಸೇವಿಸುತ್ತೀರ ಎಂಬುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದದು ನಿಮ್ಮ ದೇಹದ ಮೇಲೆ ಏನು ಹಾಕಿಕೊಳ್ಳುತ್ತೀರಾ ಎಂಬುವುದು. ಬಹಳಷ್ಟು ಸ್ಕಿನ್-ಕೇರ್ ಉತ್ಪನ್ನಗಳು ಮತ್ತು ಮೇಕ್ಅಪ್ ಉತ್ಪನ್ನಗಳು ರೆಟಿನೋಯ್ಡ್ಸ್, ಹೈಡ್ರಾಕ್ಸಿ ಆಸಿಡ್ಸ್, ಸಾಲಿಸಿಲಿಕ್ ಆಸಿಡ್ ಮತ್ತು ಭ್ರೂಣಕ್ಕೆ ಹಾನು ಉಂಟುಮಾಡುವ ಇತರೆ ಅಂಶಗಳನ್ನ ಒಳಗೊಂಡಿರುತ್ತವೆ. ಹೀಗಾಗಿ ನೀವು ನೈಸರ್ಗಿಕವಾದ ಮತ್ತು ಪರಿಣಾಮಕಾರಿಯಾದ ಪರ್ಯಾಯಗಳನಂ ಹುಡುಕಬೇಕು.

Comments are closed.