ಕರ್ನಾಟಕ

ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸಂಜಯ ಪಾಟೀಲ್ ವಿರುದ್ಧ ಬೆಳಗಾವಿಯಲ್ಲಿ ಎಫ್ ಐರ್ ದಾಖಲು

Pinterest LinkedIn Tumblr

ಬೆಳಗಾವಿ: ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ನಿನ್ನೆ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಸಂಜಯ ಪಾಟೀಲ್ ಈ ಬಾರಿಯ ಚುನಾವಣೆ ರಸ್ತೆ, ಗಟಾರ, ನೀರಿಗಾಗಿ ಅಲ್ಲ.ಹಿಂದೂ-ಮುಸ್ಲಿಂ ಚುನಾವಣೆಯಾಗಿದೆ. ಯಾರಿಗೆ ಬಾಬ್ರಿ ಮಸೀದಿ ಕಟ್ಟಬೇಕಿದೆಯೋ ಅವರು ಕಾಂಗ್ರೆಸ್‌ಗೆ ಮತ ಹಾಕಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇನ್ನೂ ಈ ಬಗ್ಗೆ ನೀಡಿರುವ ದೂರಿನಲ್ಲಿ ಸಂಜಯ್ ಪಾಟೇಲ್ ಅವರ ಆಭ್ಯರ್ಥಿಯಾಗಿ ಸ್ಪರ್ದಿಸದಂತೆ ಅನರ್ಹಗೊಳಿಸಬೇಕೆಂದು ಒತ್ತಾಯಿಸಲಾಗಿದೆ.ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಮಾರಿಹಾಳ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ಶಿವಾಜಿ ಮಹಾರಾಜರು, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಯಾರಿಗೆ ಬೇಕೋ ಅವರೆಲ್ಲರೂ ಬಿಜೆಪಿಗೆ ಮತ ಹಾಕಿ. ಟಿಪ್ಪು ಸುಲ್ತಾನ ಜಯಂತಿ ಬೇಕು ಎನ್ನುವವರು ಅಕ್ಕಾ ಕೊಡುವ ಕುಕ್ಕರ್‌ ತೆಗೆದುಕೊಂಡು ಕಾಂಗ್ರೆಸ್‌ಗೆ ವೋಟ್‌ ಹಾಕಿ. ಹಿಂದೂ ಧರ್ಮ ಉಳಿಸುವ ಬಿಜೆಪಿಗೆ ಮತ ಹಾಕ್ತೀರೋ ಅಥವಾ ಟಿಪ್ಪು ಜಯಂತಿ ಆಚರಿಸುವವರಿಗೆ ವೋಟ್‌ ಹಾಕ್ತಿರೋ ಯೋಚಿಸಿ ಎಂಬ ಹೇಳಿಕೆ ನೀಡಿದ್ದರು.

Comments are closed.