ಕರ್ನಾಟಕ

ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಬೇಕೆಂದರೆ ನನ್ನ ಷರತ್ತುಗಳಿಗೆ ಒಪ್ಪಿ: ಕಾಂಗ್ರೆಸ್ ನಾಯಕರಿಗೆ ಅಂಬರೀಷ್ ಬೇಡಿಕೆ

Pinterest LinkedIn Tumblr

ಬೆಂಗಳೂರು: ಟಿಕೆಟ್ ಸಿಗಲಿಲ್ಲ ಎಂದು ಹಲವು ಕ್ಷೇತ್ರಗಳಲ್ಲಿ ನಾಯಕರುಗಳ ಬಂಡಾಯದ ಜೊತೆಗೆ ನಟ ಹಾಗೂ ಮಾಜಿ ವಸತಿ ಸಚಿವ ರೆಬೆಲ್ ಸ್ಟಾರ್ ಅಂಬರೀಷ್ ಕಾಂಗ್ರೆಸ್ ನಾಯಕರುಗಳ ಪಾಲಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ.

ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಸ್ಪರ್ದಿಸಲು ನಾಮಪತ್ರ ಸಲ್ಲಿಸಬೇಕಾದರೇ ತಮ್ಮಬೇಡಿಕೆಗಳನ್ನು ಈಡೇರಿಸಬೇಕೆಂದು ಷರತ್ತು ವಿಧಿಸಿದ್ದಾರೆ.

ಮಂಡ್ಯದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಮಂಡ್ಯದ ಗಂಡು ಎಂದೇ ಖ್ಯಾತಿಯಾಗಿರುವ ಅಂಬರೀಷ್ ಕಾಂಗ್ರೆಸ್ ಮಾಡಿರುವ ಅವಮಾನ ಮರೆಯಲು ಸಿದ್ದರಾಗಿಲ್ಲ, 2-16ರ ಜೂನ್ ನಲ್ಲಿ ಸಚಿವ ಸ್ಥಾನದಿಂದ ತಮ್ಮನ್ನು ಕೈ ಬಿಟ್ಟ ಹಿನ್ನಲೆಲಯಲ್ಲಿ ಪತ್ರ ನೀಡಿರುವ ಭಿ ಪಾರಂ ಅನ್ನು ಪಡೆಯಲು ತಕರಾರು ಮುಂದುವರಿಸಿದ್ದಾರೆ.

ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ತಯಾರಾಗಿದ್ದಾರೆ, ಮಂಡ್ಯ ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ ಮೇಲೂ ಅಂಬರೀಷ್ ಅವರ ಒಂದು ಹೇಳಿಕೆ ಪ್ರಭಾವ ಬೀರುತ್ತದೆ.

ಬಳಸಿ ಬಿಸಾಡಲು, ಯಾರದ್ದೋ ಫ್ಯಾನ್ಸಿಗಾಗಿ ಉಪಯೋಗಿಸುವ ಮೀನು ನಾನಲ್ಲ, ಎಂದು ಪಕ್ಷದ ಮುಖಂಡರಿಗೆ ಹೇಳಿದ್ದಾರೆ. ಜೊತೆಗೆ ಜೆಡಿಎಸ್ ಬಂಡಾಯ ಶಾಸಕ ಚಲುವರಾಯ ಸ್ವಾಮಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದರ ಬಗ್ಗೆ ಅಂಬಿ ಅಸಮಾಧಾನವ್ಯಕ್ತಪಡಿಸಿದ್ದಾರೆ. ಜೊತೆಗೆ ಚಲುವರಾಯ ಸ್ವಾಮಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಮತ್ತು ಟಿಕೆಟ್ ಕೊಡುವಾಗ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಆದೇಶದ ಮೇರೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಇತ್ತೀಚೆಗೆ ಅಂಬರೀಷ್ ಅವರನ್ನು ಬೇಟಿ ಮಾಡಿದ್ದರು, ಆದರೆ ನಾಮಪತ್ರ ಸಲ್ಲಿಸುವಂತೆ ಅಂಬರೀಷ್ ಮನವೊಲಿಸಲು ವಿಫಲರಾಗಿದ್ದಾರೆ.

ನಾಮಪತ್ರ ಸಲ್ಲಿಸಬೇಕಾದರೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಷರತ್ತು ವಿಧಿಸಿದ್ದಾರೆ, ಅವುಗಳೆಂದರೇ, ಮಂಡ್ಯ ಜಿಲ್ಲಾ ಚುನಾವಣಾ ಪ್ರಚಾರದ ಉಸ್ತುವಾರಿ ನೀಡಬೇಕು, ಕಾಂಗ್ರೆಸ್ ಗೆದ್ದು ಮತ್ತೆ ಸರ್ಕಾರ ರಚನೆಯಾದರೇ ತಮಗೆ ಸಚಿವ ಸ್ಥಾನ ಹಾಗೂ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವನನ್ನಾಗಿಸಬೇಕೆಂಬ ಷರತ್ತು ವಿಧಿಸಿದ್ದಾರೆ, ಈ ಸಂಬಂಧ ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕ ಚುನಾವಣಾ ಉಸ್ತುವಾರಿ ಕೆ.ಸಿ ವೇಣು ಗೋಪಾಲ್ ಅಂಬರೀಷ್ ಅವರ ಜೊತೆ ಚರ್ಚಿಸುವ ಸಾಧ್ಯತೆಯಿದೆ.

ಇನ್ನೂ ಅಂಬರೀಷ್ ಅವರ ಅತೃಪ್ತಿಯನ್ನು ದಾಳವಾಗಿಸಿಕೊಳ್ಳಲು ಜೆಡಿಎಸ್ ಮತ್ತು ಬಿಜೆಪಿಗಳು ಹವಣಿಸುತ್ತಿವೆ. ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಭರವಸೆ ವ್ಯಕ್ತಪಡಿಸಿರುವ ಪರಮೇಶ್ವರ್ ಮಂಡ್ಯ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಹಾಕುವ ವಿಷಯವನ್ನು ತಳ್ಳಿ ಹಾಕಿದ್ದಾರೆ. ಅಂಬರೀಷ್ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರ ಜೊತೆ ನಮಗೆ ವಿಶೇಷ ಬಾಂದವ್ಯವಿದೆ ಎಂದು ತಿಳಿಸಿದ್ದಾರೆ.

Comments are closed.