ಕರ್ನಾಟಕ

ಈ ಬಾರಿಯ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಕಣಕ್ಕಿಳಿಯಲಿವೆ 12 ಹೊಸ ಪಕ್ಷಗಳು !

Pinterest LinkedIn Tumblr

ಬೆಂಗಳೂರು: ಮೇ 12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು 12 ಹೊಸ ಪಕ್ಷಗದಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಈ ಎಲ್ಲಾ ಪಕ್ಷಗಳು ನೋಂದಣಿಯಾಗಿವೆ ಆದರೆ ಭಾರತೀಯ ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟಿಲ್ಲ, ಭಾರತದಲ್ಲಿ 7 ರಾಷ್ಟ್ಟೀಯ ಪಕ್ಷಗಳು, 24 ಪ್ರಾದೇಶಿಕ ಪಕ್ಷಗಳು, 20,144 ನೋಂದಣಿಯಾಗಿರುವ ಪಕ್ಷಗಳಿದ್ದು ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟಿಲ್ಲ,

ಕರ್ನಾಟಕದಲ್ಲಿ 7 ರಾಷ್ಚ್ರೀಯ ಪಕ್ಷಗಳನ್ನು ಹೊರತು ಪಡಿಸಿ ಒಂದು ಪ್ರಾದೇಶಿಕ ಪಕ್ಷವಿದೆ, 68 ಪಕ್ಷಗಳಿದ್ದು ಅವುಗಳು ನೋಂದಣಿಯಾಗಿವೆ ಆದರೆ ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟಿಲ್ಲ, 62 ಪಕ್ಷಗಳಲ್ಲಿ 12 ಪಕ್ಷಗಳು ಕಳೆದ ಆರು ತಿಂಗಳಿಂದ ಸಕ್ರಿಯವಾಗಿವೆ.

ಹೊಸದಾಗಿ ಹುಟ್ಟಿದ ಪಕ್ಷಗಳೆಂದರೇ ನಟ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ, ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಅವರ ಭಾರತೀಯ ಜನಶಕ್ತಿ ಕಾಂಗ್ರೆಸ್, ವರ್ತೂರು ಪ್ರಕಾಶ್ ಅವರ ನಮ್ಮ ಕಾಂಗ್ರೆಸ್ ಪಾರ್ಟಿ.

ಕೆಪಿಜೆಪಿ ಜೊತೆಗಿನ ಸಂಘರ್ಷದಿಂದಾಗಿ ಉಪೇಂದ್ರ ಹೊರ ಬಂದಿದ್ದು ಚುನಾವಣೆಯಲ್ಲಿ ಸ್ಪರ್ದಿಸಲು ಉತ್ತಮ ಪ್ರಜಾಕೀಯ ಪಾರ್ಟಿ ಸ್ಥಾಪಿಸಲಿದ್ದಾರೆ, ರಾಜ್ಯದ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಪಿಜೆಪಿ ನಿರ್ಧರಿಸಿದೆ.

ಅನುಪಮಾ ಶೆಣೈ ಕಾಪು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ,ಜೊತೆಗೆ 30 ವಿಧಾನಸಬೆ ಕ್ಷೇತ್ರಗಳಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಉಗಮವಾಗಿರುವ ಹೊಸ ಪಕ್ಷಗಳೆಂದರೇ
ಭಾರತೀಯ ರಾಷ್ಟ್ರೀಯ ಮಹಿಳಾ ಪಾರ್ಟಿ,
ಸರ್ವೋದಯ ಕಾಂಗ್ರೆಸ್
ಸಾಮಾನ್ಯ ಜನತಾ ಪಾರ್ಟಿ
ಭಾರತೀಯ ಜನಶಕ್ತಿ ಕಾಂಗ್ರೆಸ್
ನಮ್ಮ ಕಾಂಗ್ರೆಸ್ ಪಾರ್ಟಿ ಜನಸಾಮಾನ್ಯ ಪಕ್ಷ
ಪ್ರಜಾ ಪರಿವರ್ತನಾ ಪಾರ್ಟಿ
ಭಾರತೀಯ ಪ್ರಜಾ ಕಲ್ಯಾಣ ಪಾರ್ಟಿ
ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ
ಉತ್ತಮ ಪ್ರಜಾಕೀಯ ಪಾರ್ಟಿ
ರಾಣಿ ಚೆನ್ನಮ್ಮ ಪಾರ್ಟಿ
ಕರ್ನಾಟಕ ಪ್ರಜಾ ಪಾರ್ಟಿ.

Comments are closed.