ಆರೋಗ್ಯ

ಮಧುಮೇಹ ಸಮಸ್ಯೆ ಇರುವವರು ದಯವಿಟ್ಟು ಈ ತಪ್ಪು ಮಾಡಬೇಡಿ

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಬರುವ ಸಮಸ್ಯೆಗಳಿಗೆ ಏನು ತಿನ್ನಬೇಕು. ಏನು ತಿನ್ನಬಾರದು. ಎಂದು ಗೊತ್ತಾಗುವುದೇ ಇಲ್ಲ. ಏನು ತಿಂದರು ಏನಾದರೂ ಸಮಸ್ಯೆ ಬರುತ್ತದೆ ಎಂಬ ಭಯದಿಂದ ಏನು ತಿನ್ನಲು ಆಗುವುದಿಲ್ಲ. ಆದರೆ ನಮ್ಮ ದೇಹಕ್ಕೆ ನಮ್ಮ ಆರೋಗ್ಯಕ್ಕೆ ಉತ್ತಮ ಪೋಷಕಾಂಶ ಇರುವ ಸಮತೋಲಿತ ಆಹಾರ ತಿನ್ನುವುದರಿಂದ ನಮ್ಮ ದೇಹ ಮತ್ತು ಮನಸ್ಸಿನ ಅರೋಗ್ಯ ಉತ್ತಮವಾಗಿರಲು ಸಾಧ್ಯ. ಈ ಆಹಾರದ ಜೊತೆಗೆ ನಾವು ತಂಪು ಪಾನೀಯ .ವಿಟಮಿನ್,ಕರ್ಬೋಹೈಡ್ರೇಟ್,ಖನಿಜಾಂಶಗಳನ್ನು ಹೊಂದಿರುವ ಹಣ್ಣುಗಳನ್ನು ಬಳಸಬೇಕು.ಇದು ನಮ್ಮ ಉತ್ತಮ ಅರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಸಹಾಯಕವಾಗುತ್ತದೆ.

ಪ್ರತಿದಿನ ಆಹಾರದಲ್ಲಿ ಹಣ್ಣನ್ನು ಬಳಸುವುದರಿಂದ ನಾವು ಹಲವಾರು ಸಮಸ್ಯೆಗಳನ್ನು ದೂರವಿಡಬಹುದು. ಆದರೆ ಮಧುಮೇಹ ಸಮಸ್ಯೆ ಇರುವವರು ಹಣ್ಣುಗಳನ್ನು ಬಳಸುವಾಗ ಸ್ವಲ್ಪ ಎಚ್ಚರ ವಹಿಸಬೇಕು. ಹಣ್ಣುಗಳು ಆರೋಗ್ಯವನ್ನು ಕಾಪಾಡುತ್ತದೆ.ಆದರೆ ಸಕ್ಕರೆ ಕಾಯಿಲೆ ಇರುವವರಿಗೆ ಎಲ್ಲಾ ಹಣ್ಣುಗಳು ಅರೋಗ್ಯ ಸುಧಾರಿಸುವುದಿಲ್ಲ.ಆದ್ದರಿಂದ ಮಧುಮೇಹಿಗಳು ಆಯ್ದ ಕೆಲವೇ ಹಣ್ಣುಗಳನ್ನು ಬಳಸಬೇಕು.

ಮಧುಮೇಹ ಸಮಸ್ಯೆ ಇರುವವರು ತಿನ್ನುವ ಹಣ್ಣುಗಳಲ್ಲಿ ಪೌಷ್ಟಿಕಾಂಶ ಮತ್ತು ಶಕ್ತಿ ಹೆಚ್ಚಾಗಿ ದೊರಕುತ್ತದೆ. ಹಾಗೂ ಇವುಗಳಲ್ಲಿ ಆಂಟಿಆಕ್ಸಿಡೆಂಟ್ ಗಳಿದ್ದು ಕೇವಲ ಪೋಷಕಾಂಶಗಳ ಪ್ರಮಾಣ ಭಿನ್ನವಾಗಿರುತ್ತದೆ.ಮಧುಮೇಹಿ ರೋಗಿಗಳು ವಿವಿಧ ರೀತಿಯ ಹಣ್ಣುಗಳನ್ನು ಬಳಸುವುದರಿಂದ ಅದರಲ್ಲಿರುವ ಭಿನ್ನ ಪೋಷಕಾಂಶಗಳು ದೇಹದ ಸಕ್ಕರೆ ಅಂಶದ ಮೇಲೆ ಭಿನ್ನ ಪರಿಣಾಮ ಬೀರಬಹುದು. ಆದ್ದರಿಂದ ಇದನ್ನು ತಡೆಯಲು ಕೆಲವು ಹಣ್ಣುಗಳಿಂದ ದೂರವಿರುವುದು ಒಳ್ಳೆಯದು.

ಮಧುಮೇಹವನ್ನು ನಿಯಂತ್ರಣದಲ್ಲಿಡುವ ಉತ್ತಮ ತರಕಾರಿಗಳು ಹೆಚ್ಚಿನ ಹಣ್ಣುಗಳು ರಕ್ತದ ಸಕ್ಕರೆ ಅಂಶದ ಮಟ್ಟವನ್ನು ಹೆಚ್ಚಿಸುತ್ತವೆ.ಅಂತಹ ಹಣ್ಣುಗಳನ್ನು ಮಧುಮೇಹ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಬಳಸಬಾರದು.ಸಾಮಾನ್ಯವಾಗಿ ಮಧುಮೇಹಿಗಳಿಗೆ ಜಿ ಐ (ಗ್ಲೈಸಮಿಕ್ ಇಂಡೆಕ್ಸ್) ಮೌಲ್ಯ 55 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಸುರಕ್ಷಿತ ಎನ್ನಲಾಗುತ್ತದೆ.

ಸ್ಟ್ರಾಬೆರಿ,ಪಿಯರ್ಸ್,ಸೇಬು ಹಣ್ಣುಗಳಲ್ಲಿ ಕಡಿಮೆ ಕರ್ಬೋಹೈಡ್ರೇಟ್ ಗಳು ಇರುವುದರಿಂದ ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಇವುಗಳನ್ನು ಬಳಸಬಹುದು.

ಮಧುಮೇಹಿಗಳು ಬಳಸಬಾರದ ಹಣ್ಣುಗಳು
ಹಣ್ಣುಗಳ ರಾಜ ಎನ್ನಲಾದ ಮಾವಿನ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನಬಾರದು.

ಸಪೋಟ ಹಣ್ಣಿನಲ್ಲಿ ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ 55 ಕ್ಕಿಂತ ಅಧಿಕವಿರುವುದರಿಂದ ಇದು ಮಧುಮೇಹ ಕಾಯಿಲೆ ಇರುವವರ ಆರೋಗ್ಯಕ್ಕೆ ಉತ್ತಮವಲ್ಲ.ಇದರಲ್ಲಿ ಸಕ್ಕರೆ ಮತ್ತು ಕರ್ಬೋಹೈಡ್ರೇಟ್ ಅಂಶ ಅಧಿಕವಿರುತ್ತದೆ.

ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕಾಂಶ,ನಾರಿನಂಶ,ವಿಟಮಿನ್ ಗಳಿರುತ್ತವೆ,ಜೊತೆಗೆ ಅಧಿಕ ಪ್ರಮಾಣದ ಸಕ್ಕರೆ ಅಂಶ ಹಾಗೂ ಕಾರ್ಬೋಹೈಡ್ರೇಟ್ ಗಳಿರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ಬಳಸುವುದರಿಂದ ಅರೋಗ್ಯ ಹದಗೆಡಬಹುದು.

ಪೈನಾಪಲ್ ಹಣ್ಣಿನಲ್ಲಿ ಸಕ್ಕರೆ ಅಂಶ. ಕಾರ್ಬೋಹೈಡ್ರೇಟ್ ಅಧಿಕ ಪ್ರಮಾಣದಲ್ಲಿರುತ್ತದೆ. ಆದರಿಂದ ಮಧುಮೇಹಿಗಳಿಗೆ ಇದು ಉತ್ತಮ ಹಣ್ಣಲ್ಲ.

ಕಸ್ಟರ್ಡ್ ಆಪಲ್ ಇದರಲ್ಲಿ ವಿಟಮಿನ್ ಸಿ,ಕ್ಯಾಲ್ಸಿಯಂ,ಕಬ್ಬಿಣದಂಶ,ನಾರಿನಂಶಗಳಿದ್ದರೂ ಮಧುಮೇಹಿಗಳು ದೂರವಿರಬೇಕಾದ ಹಣ್ಣುಗಳಲ್ಲಿ ಇದು ಕೂಡ ಒಂದು.

ಅರ್ಧ ಕಪ್ ಬಾಳೆಹಣ್ಣಿನಲ್ಲಿ 15 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ.ಬಾಳೆಹಣ್ಣು 40 ರಿಂದ 70 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ ಒಳಗೊಂಡಿರುತ್ತದೆ.ಆದ್ದರಿಂದ ಕಳಿತ ಬಾಳೆಹಣ್ಣು ಮಧುಮೇಹ ಕಾಯಿಲೆ ಇರುವವರಿಗೆ ಸೂಕ್ತವಲ್ಲ.

ನಾರಿನಂಶ ಮತ್ತು ಕ್ಯಾಲೋರಿ ಕಡಿಮೆ ಇರುವ ಕಲ್ಲಂಗಡಿ ಹಣ್ಣು 72 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯವನ್ನು ಹೊಂದಿರುತ್ತದೆ.ಜೊತೆಗೆ ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತದೆ. ಆದಾಗ್ಯೂ ಅರ್ಧ ಕಪ್ ನಷ್ಟು ಕಲ್ಲಂಗಡಿ ಹಣ್ಣು 5 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಹೊಂದಿರುತ್ತದೆ.

ಸರಾಸರಿ 59 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ ಹೊಂದಿರುವ ಪಪ್ಪಾಯಿ ಹಣ್ಣು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಯನ್ನು ಅಧಿಕವಾಗಿ ಹೊಂದಿದೆ.ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನುವುದಾದರೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿಕೊಳ್ಳಲು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.

ಖರ್ಜೂರ ಹಣ್ಣಿನಲ್ಲಿ 103 ನಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಪ್ರಮಾಣವಿದ್ದು,ಕಾಲು ಕಪ್ ಹಣ್ಣಿನಲ್ಲಿ 24 ಗ್ರಾಂ ನಷ್ಟು ಕಾರ್ಬೋ ಹೈಡ್ರೇಟ್ ಇರುತ್ತದೆ. ಆದ್ದರಿಂದ ಮಧುಮೇಹಿಗಳು ಇದನ್ನು ಬಳಸಬಾರದು.

ಇವುಗಳನ್ನು ತಿಳಿದು ಹೆಚ್ಚರವಹಿಸಿ. ಆದಷ್ಟು ಈ ಹಣ್ಣುಗಳಿಂದ ದೂರವಿರಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

Comments are closed.