ಕರಾವಳಿ

ಮೂಳೆ, ಮಾಂಸಖಂಡ ಹಾಗೂ ನರವ್ಯೂಹದ ಸರಿಯಾದ ಕಾರ್ಯ ನಿರ್ವಹಣೆಗಾಗಿ ಈ ಬೀಜದ ಸೇವನೆ ಅತ್ಯಾವಶ್ಯಕ

Pinterest LinkedIn Tumblr

ಗೋಡಂಬಿ ಬೀಜಗಳು ಆರೋಗ್ಯಕರ ಕೊಬ್ಬಿನಾಂಶದಿಂದ ಸಮೃದ್ಧವಾದವು.ಕೊಲೆಸ್ಟ್ರಾಲ್ ಅನ್ನು ಶೂನ್ಯ ಮಟ್ಟದಲ್ಲಿ ಒಳಗೊಂಡಿವೆ.ಇದರಿಂದಾಗಿ ಗೋಡಂಬಿ ಬೀಜಗಳು ಅನಾರೋಗ್ಯಕರ ಐಆಐ ಕೊಲೆಸ್ಟ್ರಾಲ್ ಹಾಗು ಟ್ರೈಗ್ಲಿಸರೈಡ್ ನ ಪ್ರಮಾಣವನ್ನು ದೇಹದಲ್ಲಿ ತಗ್ಗಿಸಬಲ್ಲವು ಹಾಗು ತನ್ಮೂಲಕ ಹೃದಯದ ಸ್ವಾಸ್ಥ್ಯಕ್ಕೆ ದಾರಿಮಾಡಿಕೊಡಬಲ್ಲವು. ಅನೇಕರು ಭಾವಿಸಿಕೊಂಡಿರುವ ಪ್ರಕಾರ,ಕೊಬ್ಬಿನಾಂಶದ ಸೇವೆಯನ್ನು ತಗ್ಗಿಸಿವುದು ಅಥವಾ ನಿಲ್ಲಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವೆಂಬುದಾಗಿದೆ,ಆದರೆ ಇದೊಂದು ತಪ್ಪು ಕಲ್ಪನೆ. ಕೊಬ್ಬಿನಾಂಶವನ್ನು ಒಳಗೊಂಡಂತೆ ನಮ್ಮ ಶರೀರಕ್ಕೆ ಎಲ್ಲಾ ತರಹದ ಆಹಾರ ವರ್ಗಗಳಿಂದಲೂ ದೊರಕುವ ಪೋಷಕಾಂಶಗಳ ಅವಶ್ಯಕತೆ ಇದೆ.

ಗೋಡಂಬಿ ಬೀಜಗಳಲ್ಲಿ ಮ್ಯಾಗ್ನಿಷಿಯಂ ಅಧಿಕ ಪ್ರಮಾಣದಲ್ಲಿದ್ದು. ಇದು ಗಟ್ಟಿಮುಟ್ಟಾದ ಮೂಳೆಗಳಾಗಿ ಮತ್ತು ಮಾಂಸಖಂಡಗಳ ಹಾಗು ನರವ್ಯೂಹದ ಸರಿಯಾದ ಕಾರ್ಯ ನಿರ್ವಹಣೆಗಾಗಿ ಅತ್ಯಾವಶ್ಯಕವಾಗಿದೆ. ದಿನವೊಂದಕ್ಕೆ ಸುಮಾರು 300 ರಿಂದ 750 ಮಿಲಿಗ್ರಾಂಗಳಷ್ಟು ಮ್ಯಾಗ್ನಿಷಿಯಂನ ಸೇವನೆಯು ನಮ್ಮ ಶರೀರದ ಸ್ವಾಸ್ಥ್ಯಕ್ಕಾಗಿ ಅತ್ಯವಶ್ಯಕವಾಗಿದೆ . ಗೋಡಂಬಿ ಬೀಜಗಳು ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಅನ್ನು ಒಳಗೊಂಡಿದ್ದು. ಪೊಟ್ಯಾಶಿಯಂ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಒಳಗೊಂಡಿವೆ. ಈ ಕಾರಣದಿಂದಾಗಿ ಗೋಡಂಬಿ ಬೀಜಗಳಿಗೆ ಶರೀರದ ರಕ್ತದೊತ್ತಡದ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಶರೀರದಲ್ಲಿ (ರಕ್ತದಲ್ಲಿ ) ಸೋಡಿಯಂ ನ ಪ್ರಮಾಣವು ಹೆಚ್ಚಾದಲ್ಲಿ,ಶರೀರವು ಅಧಿಕ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಶರೀರದ ರಕ್ತದ ಗಾತ್ರದಲ್ಲಿ ಹೆಚ್ಚಳವನ್ನುoಟ್ಟು ಮಾಡುತ್ತದೆ ಹಾಗು ತನ್ಮೂಲಕ ರಕ್ತದೊತ್ತಡದಲ್ಲಿ ಹೆಚ್ಚಳವನುಂಟು ಮಾಡುತ್ತದೆ.

ಗೋಡಂಬಿ ಬೀಜಗಳಲ್ಲಿ ತಾಮ್ರದ ಅಂಶವು ಅತ್ಯುನ್ನತ ಮಟ್ಟದಲ್ಲಿದ್ದು. ಇದು ಶರೀರದಲ್ಲಿ ಕ್ವಿಣಗಳ ಚಟುವಟಿಕೆಗಳು ಹಾರ್ಮೋನುಗಳ ಉತ್ಪಾದನೆ, ಮೆದುಳಿನ ಕಾರ್ಯಾಚರಣೆ ಇವೆ ಮೊದಲಾದ ಅನೇಕ ಪ್ರಮುಖ ವಿಚಾರಗಳಲ್ಲಿ ಮಹತ್ವಕರ ಪಾತ್ರವಹಿಸುತ್ತದೆ. ಜೊತೆಗೆ ರಕ್ತಹೀನತೆಯನ್ನು ತಡೆಗಟ್ಟಲು ಅತ್ಯಗತ್ಯವಾದ ಕೆಂಪು ರಕ್ತಕಣಗಳನ್ನು ಶರೀರವು ಉತ್ಪತ್ತಿ ಮಾಡುವಂತಾಗಲು ಕೂಡ ತಾಮ್ರದ ಅಂಶದ ಅವಶ್ಯಕತೆಯು ಶರೀರಕ್ಕಿರುತ್ತದೆ.

ಗೋಡಂಬಿಯಲ್ಲಿರುವ ಒಲಿಕ್ ಆಮ್ಲ ಅಲ್ಪ ಪ್ರಮಾಣದಲ್ಲಿದ್ದರೂ ಹೃದಯಕ್ಕೆ ಉತ್ತಮ ಪೋಷಣೆ ನೀಡುವ ನಿಟ್ಟಿನಲ್ಲಿ ಮಹತ್ವ ಪಾತ್ರವಹಿಸುತ್ತದೆ. ಶಾಹಿ ಅಡುಗೆಗಳಲ್ಲಿ ಬಳಸಿದರು ಗೋಡಂಬಿಯಲ್ಲಿ ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿರುವ ಕಾರಣ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಏರದಂತೆ ನೋಡಿಕೊಳ್ಳುತ್ತದೆ ಹಾಗು ಇದರಲ್ಲಿರುವ ವಿವಿಧ ಆಂಟಿ ಅಕ್ಸಿಡೆಂಟ್ ಗಳು ಹೃದಯದ ಇತರೆ ತೊಂದೆರೆಗಳಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಹೃದಯ ಸ್ತಂಭನದ ಸಾಧ್ಯತೆಯನ್ನು ಬಹುವಾಗಿ ಕುಗ್ಗಿಸುತ್ತದೆ.

Comments are closed.