ಕರಾವಳಿ

ಯಾವ ರೀತಿಯ ಆಹಾರ ತಿನ್ನುತ್ತಾ ಇದ್ರೆ ತಲೆ ನೋವು ಶುರು ಆಗುತ್ತೆ..ಗೋತ್ತೆ..?

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮಿತಿಯಿಲ್ಲದೆ ತಲೆನೋವು ಕಂಡುಬರುತ್ತದೆ. ದೊಡ್ಡವರಿಗದಾರೆ ಅವರಿಗೆ ಹೆಚ್ಚು ಕೆಲಸ. ಒತ್ತಡ. ಜವಾಬ್ದಾರಿ. ಸುತ್ತಾಟ.ಗಳು ಇರುತ್ತವೆ ಆದ್ದರಿಂದ ತಲೆನೋವು ಕಂಡುಬರುತ್ತದೆ. ಆದರೆ ಚಿಕ್ಕಮಕ್ಕಳಲ್ಲೂ ಕಂಡು ಬರುವ ತಲೆನೋವಿಗೆ ಏನೆಂದು ಹೇಳಲು ಸಾಧ್ಯ. ಈ ಸಾಮಾನ್ಯ ತಲೆನೋವು. ಮೈಗ್ರೇನ್ ನಂತಹ ತಲೆನೋವುಗಳು ಕೆಲವರಿಗೆ ವಂಶಪಾರಂಪರ್ಯವಾಗು ಬರುತ್ತವೆ. ಆದರೆ ಅತಿ ಹೆಚ್ಚಾಗಿ ಇಂದಿನ ಆಹಾರದ ವ್ಯವಸ್ಥೆಯಿಂದ ಬರುತ್ತದೆ. ಹೌದು ಇಂದಿನ ಕೆಮಿಕಲ್. ಔಷಧಿಗಳ ಮಿಶ್ರಣದಿಂದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಇಂದಿನ ಜನಗಳು ಕೂಡ ಹೆಚ್ಚಾಗಿ ಪೋಷಕಾಂಶ ಇರುವ ಆಹಾರವನ್ನು ಬಿಟ್ಟು ದೇಹಕ್ಕೆ ಮಾರಕವಾದ ಆಹಾರಗಳನ್ನು ಹೆಚ್ಚಿಗಿ ಇಷ್ಟ ಪಡುತ್ತಾರೆ. ನಮಗೆ ಬರುವ ಸಾಮಾನ್ಯ ತಲೆನೋವು. ಮೈಗ್ರೇನ್ ಗಳು ನಾವು ಸೇವಿಸುವ ಆಹಾರದಿಂದಲು ಕಂಡುಬರುತ್ತದೆ.

ಹಾಗಾದರೆ ಯಾವ ರೀತಿಯ ಆಹಾರಗಳಿಂದ ತಲೆನೋವು ಬರುತ್ತದೆ ಎಂದು ತಿಳಿಯೋಣ ಬನ್ನಿ.

*ಆಹಾರದಲ್ಲಿ ವ್ಯತ್ಯಾಸ.
ದಿನನಿತ್ಯದ ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ತಲೆನೋವು ಬರುತ್ತದೆ. ಹಾಗೂ ಬೆಳಗ್ಗಿನ ಉಪಹಾರವನ್ನು ತುಂಬಾ ನಿಧಾನವಾಗಿ ತಿಂದರು ಸಹ ತಲೆನೋವು ಬರುತ್ತದೆ.
ತುಂಬಾ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿದರೂ ತಲೆ ನೋವು ಬರುತ್ತದೆ. ದೇಹಕ್ಕೆ ಬೇಕಾಗಿರುವ ನೀರು ಸರಿಯಾಗಿ ಸೇರದೆ ಇದ್ದರು ತಲೆನೋವು ಬರುತ್ತದೆ.

*ತೈರಮಿನ್.
ಇದೊಂದು ಅಮೈನೋ ಆಸಿಡ್. ಇದರ ಖಾದ್ಯಗಳು ಕೆಂಪು ವೈನ್. ಚೀಜ್. ಚಾಕೊಲೇಟ್. ಅಲ್ಕೋಹಾಲ್ ಯುಕ್ತ ಪೆಯಗಳು. ಸಂಸ್ಕರಿಸಿದ ಮಾಂಸಗಳು.ಇವುಗಳ ಅತಿಯಾದ ಸೇವನೆಯಿಂದ ಮೆದುಳಿನ ಸಿರೋಟೋನಿನ್ ಮಟ್ಟವನ್ನು ಕುಂಠಿತ ಮಾಡುತ್ತದೆ ಇದರಿಂದ ತಲೆನೋವು ಕಾಣಿಸುತ್ತದೆ.

*ಹಲ್ಕೋಹಾಲ್ ಯುಕ್ತ ಪಾನೀಯಗಳ ಸೇವನೆ.
ಕೆಂಪು ವೈನ್ನಲ್ಲಿ ತೈರಮಿನ್. ಫೆನೊಲ್.ಎಂದು ಕರೆಯುವ ಫ್ಯಾಟೋರಾಸಾಯನಿಕಗಳು ಇರುತ್ತವೆ. ಹಾಗೂ ಬಿಯರ್ನ. ವಿಸ್ಕಿ. ವೈನ್ ಗಳಲ್ಲಿ ಸಿರೋಟಾನಾನ್ ಮಟ್ಟವು ಮೆದುಳಿನಲ್ಲಿ ಮೈಗ್ರೇನ್ ತಲೆನೋವನ್ನು ತರುತ್ತದೆ.

*ಚಾಕೊಲೇಟ್.
ಚಾಕೊಲೇಟ್ ಕಂಡರೆ ಎಲ್ಲರಿಗೂ ಪ್ರಿಯ. ಆದರೆ ಇದರಲ್ಲಿ ತೈರಮಿನ್ ಅಂಶವಿದ್ದು ಇದು ನಮ್ಮ ತಲೆನೋವಿಗೆ ಕಾರಣವಾಗುತ್ತದೆ. ಅದರೆ ಮಹಿಳೆಯರು ಒತ್ತಡ ಮತ್ತು ಗ್ರಂಥಿಗಳ ಸ್ರವಿಸುವಿಕೆಯ ಸಮಯದಲ್ಲಿ ಹೆಚ್ಚು ತಿನ್ನುವುದರಿಂದ ಇದು ಹೆಚ್ಚಿನ ಪ್ರಮಾಣದಲ್ಲಿ ತಲೆನೋವನ್ನು ತರುತ್ತದೆ.

*ಕಾಫಿ.
ಕೆಲವರಿಗೆ ಕಾಫಿ ಎಂದರೆ ಬಲು ಪ್ರಿಯ.ಈ ಕಾಫೀ ಕುಡಿಯುವವರು ತಮ್ಮ ಸೇವನೆಯನ್ನು ಹಠಾತ್ತಾಗಿ ನಿಲ್ಲಿಸಿ ಬಿಟ್ಟರೆ ತಲೆನೋವು ಕಾಣಿಸಿಕೊಳ್ಳುತ್ತದೆ. ಕಾಫಿಯು ತಾತ್ಕಾಲಿಕವಾಗಿ ಮಾನಸಿಕ ಜಾಗರೂಕತೆ ಮತ್ತು ಏಕಾಗ್ರತೆ ಹೆಚ್ಚಿಸುವದರಿಂದ ಹೆಚ್ಚು ಜನರು ಇದನ್ನು ಚಟವಾಗಿ ಮಾಡಿಕೊಂಡಿರುತ್ತಾರೆ. ಯಾವುದೇ ಚಟವನು ಹಠಾತ್ತನೆ ನಿಲ್ಲಿಸಿದರೆ ಸಾಮಾನ್ಯವಾಗಿ ತಲೆನೋವುಗಳು, ಕಿರಿಕಿರಿ ಮತ್ತು ಇತರ ಋಣಾತ್ಮಕ ಲಕ್ಷಣಗಳು ಕಾಣಿಸುತ್ತವೆ.

*ಸಕ್ಕರೆ ಅಂಶ.
ನಮ್ಮ ದೇಹದಲ್ಲಿ ಸಕ್ಕರೆ ಅಂಶ ಮಿತ ಪ್ರಮಾಣದಲ್ಲಿ ಇರಲೇಬೇಕು. ಹಾಗೂ ನಮ್ಮೆಲ್ಲರ ಆರೋಗ್ಯಕ್ಕೂ ನೈಸರ್ಗಿಕ ಸಕ್ಕರೆ ತುಂಬಾ ಮುಖ್ಯ. ಈ ಸಕ್ಕರೆಯ ಅಂಶವು ನಮ್ಮ ದೇಹದಲ್ಲಿ ಇಲ್ಲದಿದ್ದರೂ ತಲೆನೋವು ಬರುತ್ತದೆ. ಅತಿಯಾದ ಸಕ್ಕರೆ ಅಂಶ ಇದ್ದರೂ ತಲೆನೋವು ಕಾಣಿಸುತ್ತದೆ.

*ಅತಿಯಾದ ಊಟ ಜೀರ್ಣವಾಗದೆ ಇರುವುದು.
ಆಹಾರವು ನಮ್ಮ ದೇಹದಲ್ಲಿ ಹೆಚ್ಚಾಗಿ. ನಮಗೆ ಸರಿಯಾಗಿ ಚಯಾಪಚಯ ಕ್ರಿಯೆಗಳು ನೆಡೆಯದೆ ಇದ್ದಾಗ ಊಟವು ಅಜೀರ್ಣವಾಗಿ ತಲೆನೋವು ಬರುತ್ತದೆ.

ಆದ್ದರಿಂದ ಈ ಆಹಾರಗಳು ಪದೇ ಪದೇ ನಮ್ಮನ್ನು ತಲೆನೋವು ಬರುವಂತೆ ಮಾಡುತ್ತದೆ. ಹಾಗಾಗಿ ಸರಿಯಾದ ಆಹಾರ ಕ್ರಮಗಳನ್ನು ಅನುಸರಿಸಿ ತಲೆನೋವಿನಿಂದ ಮುಕ್ತಿ ಹೊಂದಿರಿ.

Comments are closed.