ಕರಾವಳಿ

ಕಾರ್ಕಳದಲ್ಲಿ ಭುಗಿಲೆದ್ದ ಭಿನ್ನಮತ: ಮೊಯ್ಲಿ ವಿರುದ್ದ ಬೀದಿಗಿಳಿದ ಮುನಿಯಾಲು ಬೆಂಬಲಿಗರು!

Pinterest LinkedIn Tumblr

ಉಡುಪಿ: ಕಾಂಗ್ರೆಸ್ ಟಿಕೆಟ್ ಪ್ರಕಟಗೊಂಡ ಹಿನ್ನಲೆಯಲ್ಲಿ ಕಾರ್ಕಳ ಕಾಂಗ್ರೆಸ್ ನಲ್ಲಿ ಭಾರೀ ಭಿನ್ನಮತ ಸ್ಪೋಟಗೊಂಡಿದೆ.ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲು‌ ಉದಯ್ ಕುಮಾರ್ ಶೆಟ್ಟಿಗೆ ಟಿಕೆಟ್‌ ಕೈ ತಪ್ಪಿರುವುದರಿಂದ ಉದಯ್ ಕುಮಾರ್ ಶೆಟ್ಟಿ ಬೆಂಬಲಿಗರು ಕಾರ್ಕಳದಲ್ಲಿ ಆಕ್ರೋಷ ವ್ಯಕ್ತಪಡಿಸಿ ಬೀದಿಗಿಳಿದಿದ್ರು. ಕಾರ್ಕಳದಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಟಿಕೆಟ್ ನೀಡೋ ಬದಲು, ಮಾಜಿ ಶಾಸಕ ಗೋಪಾಲ್ ಭಂಡಾರಿಗೆ ಟಿಕೆಟ್ ನೀಡಿರುವುದು ಬೆಂಬಲಿಗರ ಆಕ್ರೋಷಕ್ಕೆ ಮೂಲ‌ ಕಾರಣವಾಗಿದ್ರೆ ,ಟಿಕೆಟ್ ಕೈ ತಪ್ಪಲು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೋಯ್ಲಿಯೇ ನೇರ ಕಾರಣ ಎಂದು ಮುನಿಯಾಲು ಬೆಂಬಲಿಗರು ಆರೋಪಿಸಿದ್ರು.

ವೀರಪ್ಪ ಮೊಯ್ಲಿ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಕಾರ್ಯಕರ್ತರ ನ್ನು ಕಡೆಗಣಿಸಿದ್ದಾರೆ.ಕಾರ್ಕಳದಲ್ಲಿ ಕಾಂಗ್ರೆಸ್ ನೆಲಕಚ್ಚಲು ಮೊಯ್ಲಿಯೇ ಕಾರಣ ಎಂದರಲ್ಲದೇ…ಈ‌ ಬಾರಿ ಉದಯ್ ಕುಮಾರ್ ಶೆಟ್ಟಿಗೂ ಟಿಕೆಟ್ ಸಿಗದಂಗೆ ನೋಡ್ಕೊಂಡಿದ್ದಾರೆ,ಹೀಗಾಗಿ ಅಕ್ರೋಷಿತ ಕಾರ್ಯಕರ್ತರು ಮೊಯ್ಲಿ ವಿರುದ್ದ ಘೋಷಣೆಯನ್ನ ಕೂಗಿದರು.

ಮೊಯ್ಲಿ ಹಟಾವೋ…ಕಾಂಗ್ರೆಸ್ ಬಾಚವೋ ಎಂದು ಘೋಷಣೆಯನ್ನು ಕೂಗಿದ ಕಾರ್ಯಕರ್ತರು ವೀರಪ್ಪ ಮೊಯ್ಲಿ ಅಣುಕು ಶವಯಾತ್ರೆ ನಡೆಸಿ , ಪ್ರತಿಕೃತಿಗೆ ಬೆಂಕಿ ಹಚ್ಚಿದರು.

ನಂತರ ಮೆರವಣಿಗೆ ಮೂಲಕ ಕಾರ್ಕಳ ತಾಲೂಕು ಪಂಚಾಯತ್ ಬಳಿ ಇರುವ ಗೋಪಾಲ್ ಭಂಡಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಉದಯ್ ಕುಮಾರ್ ಶೆಟ್ರಿಗೆ ಟಿಕೆಟ್ ಬಿಟ್ಟುಕೊಡುವಂತೆ ಅಗ್ರಹಿಸಿದರು.

ಒಂದು ವೇಳೆ ಉದಯ್ ಕುಮಾರ್ ಶೆಟ್ಟಿಗೆ ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಯಾವುದೇ ಪ್ರಚಾರಕ್ಕೆ ಬಾರದೆ ತಟಸ್ಥ ನೀತಿ ಅನುಸರಿಸುವುದಾಗಿ‌ ಎಚ್ಚರಿಸಿದ್ದಾರೆ.

ಇನ್ನೂ ಈ‌ ಬಗ್ಗೆ ಪ್ರತಿಕ್ರಿಯಿಸಿದ ಉದಯ್ ಕುಮಾರ್ ಶೆಟ್ಟಿ ನಾನು ಕಾರ್ಕಳದಲ್ಲಿ ನೆಲಕಚ್ಚಿದ ಕಾಂಗ್ರೆಸ್ ನ್ನು ಎದ್ದು ನಿಲ್ಲಿಸಲು‌ ಪ್ರಯತ್ನಿಸಿದವ.ಹೀಗಾಗಿ ಕಾರ್ಕಳದಲ್ಲಿ ಗೆಲ್ಲುವ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದೆ.ಈ ಬಗ್ಗೆ ಗೋಪಾಲ್ ಭಂಢಾರಿ ಬಳಿ‌ ಕೂಡ ಕಾರ್ಕಳದಲ್ಲಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದೆ.ಅದ್ರೆ ಪಕ್ಷ ಗೋಪಾಲ್ ಭಂಢಾರಿಯವರಿಗೆ ಟಿಕೆಟ್ ನೀಡಿದೆ .ಮುಂದೆ ಪಕ್ಷದ ಕಾರ್ಯಕರ್ತರು ಎನು ನಿರ್ಧರಿಸುತ್ತಾರೋ ಅದಕ್ಕೆ ಬದ್ದನಾಗಿರುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ವೀರಪ್ಪ ಮೊಯ್ಲಿ ಉದಯ್ ಕುಮಾರ್ ಶೆಟ್ಟಿಗೆ ಟಿಕೆಟ್ ತಪ್ಪಿಸಲು ಯಶಸ್ವಿಯಾಗಿದ್ದರೂ ಕೂಡ ,ಇದೀಗ ಎದ್ದಿರುವ ಭಿನ್ನಮತ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪಾವಾಗಿ ಪರಿಣಮಿಸಿದೆ.ಇತ್ತ ಬಿಜೆಪಿ ಕಾಂಗ್ರೆಸ್ಸಿನ ಭಿನ್ನಮತವನ್ನು ಯಾವ ರೀತಿ ಬಳಸಿಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಾಗಿದೆ‌.

Comments are closed.