ಆರೋಗ್ಯ

ಪೋರ್ನ್(ಸೆಕ್ಸ್) ವೀಡಿಯೊ ನೋಡುವುದಕ್ಕೂ ಮುನ್ನ ಈ ವರದಿ ಓದಿ…! ನಿಮ್ಮ ಆರೋಗ್ಯಕರ ಜೀವನವೇ ನರಕವಾಗಬಹುದು !

Pinterest LinkedIn Tumblr

ಅತೀಯಾದರೆ ಯಾವುದು ಕೂಡ ವಿಷವಾಗುತ್ತೆ ! ಈಗ ಮೊಬೈಲ್ ಜಮಾನ. ಎಲ್ಲರ ಕೈಯಲ್ಲಿ ಮೊಬೈಲ್…! ಮೊಬೈಲಿನಲ್ಲಿ ಬೇಕಾಬಿಟ್ಟಿ ಇಂಟರ್ನೆಟ್. ಫ್ರೀ ಇಂಟರ್ನೆಟ್ಟಿನಲ್ಲಿ ಬಹುತೇಕರು ನೋಡಬಾರದ್ದನ್ನೆ ನೋಡುತ್ತಾರೆ. ಮಕ್ಕಳಿಂದ ಹಿಡಿದು, ಮುದುಕರವರೆಗೆ ಅತೀ ಹೆಚ್ಚು ಜನ ನೋಡುವುದೇ ಪೋರ್ನ್(ಸೆಕ್ಸ್) ವೀಡಿಯೊ.

ಈ ಪೋರ್ನ್ ವಿಡಿಯೋಗಳ ಗೀಳು ಮನುಷ್ಯನ ಮಾನಸಿಕ ಆರೋಗ್ಯದ ಮೇಲು ಪರಿಣಾಮ ಬೀರುತ್ತೆ. ಅದರಲ್ಲಿ ಅಶ್ಲೀಲ ಚಿತ್ರಗಳನ್ನು ಅತಿಯಾಗಿ ನೋಡುವುದು ಕೂಡ ಒಂದು ಎನ್ನಲಾಗುತ್ತೆ. ಇದು ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳೆಯುತ್ತಿರುವ ಒಂದು ಸಮಸ್ಯೆ ಎನ್ನುವುದನ್ನು ಕೂಡ ತಳ್ಳಿ ಹಾಕುವಂತಿಲ್ಲ. ರತಿಮೋಹಕ ದೃಶ್ಯಗಳನ್ನ ನೋಡುವ ಗೀಳು ವಿಪರೀತ ಕಲ್ಪನೆಗಳ ಗುಚ್ಛ. ಇದು ಬಣ್ಣ ಬಣ್ಣ ರತಿಲೋಕದ ಚಿತ್ರಣವನ್ನು ತೆರೆದಿಡುವುದರಿಂದ ಬದುಕಿನಲ್ಲಿ ಋಣಾತ್ಮಕ ಪರಿಣಾಮ ಬೀರುವುದಂತೂ ಪಕ್ಕಾ ಎನ್ನುತ್ತಿವೆ ಸಂಶೋಧನೆಗಳು.

ಈ ರೀತಿಯ ಹಸಿ ಹಸಿ ಲೈಂಗಿಕ ಕ್ರೀಡೆಗಳ ಮನೋರಂಜಕ ದೃಶ್ಯಗಳನ್ನು ನೋಡುವವರ ಅದಕ್ಕೆ ಒಂದು ಸಮರ್ಥನೆಯನ್ನು ನೀಡುತ್ತಾರೆ. ಪೋರ್ನ್ವಿ ವೀಡಿಯೊ ನೋಡುವುದರಿಂದ ಜೋಡಿಗಳ ತಮ್ಮ ಸರಸ ಸಲ್ಲಾಪಗಳ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಅವರ ವಾದ. ಜೋಡಿಗಳು ಒಟ್ಟಿಗೆ ಕುಳಿತು ಇಂತಹ ದೃಶ್ಯಗಳನ್ನು ನೋಡುವುದರಿಂದ ತಮ್ಮ ಸಂಬಂಧದಲ್ಲಿ ಹೊಸ ಕಿಡಿ ಹುಟ್ಟುವುದು ಎಂದು ಅವರು ಅಂದುಕೊಳ್ಳುತ್ತಾರೆ. ಪೋರ್ನ್​ ವಿಡಿಯೋಗಳ ವೀಕ್ಷಣೆಯಿಂದ ಸಂಗಾತಿಯೊಂದಿಗೆ ಲೈಂಗಿಕ ಹೊಸ ಪ್ರಯೋಗಗಳನ್ನು ಕೈಗೊಳ್ಳಬಹುದು, ಇದರಿಂದ ಬೆಡ್​ರೂಮಿನಲ್ಲಿ ಮುಕ್ತವಾಗಿ ರಸನಿಮಿಷಗಳನ್ನು ಕಳೆಯಲು ಸಹಾಯವಾಗುತ್ತದೆ ಇದೊಂದು ಲೈಂಗಿಕ ಕಲ್ಪನೆಯನ್ನು ಉತ್ತುಂಗಕ್ಕೆ ಒಯ್ಯುವ ನಿರುಪದ್ರವ ಸಾಧನ ಎಂಬುದು ಮತ್ತೊಬ್ಬರ ವಾದ.

ಆದರೆ ನೆನಪಿರಲಿ. ಇದು ನಿಮ್ಮ ನಡುವಳಿಕೆಯನ್ನ, ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯನ್ನು ತಿಂದು ಹಾಕುತ್ತದೆ. ಇಂದಿನ ದಿನಮಾನದಲ್ಲಿ ಅತಿ ವೇಗದ ಇಂಟರ್ನೆಟ್​ ನಮ್ಮ ಕೈಯಲ್ಲಿದೆ. ಪೋರ್ನ್ ವೀಡಿಯೊಗಳು ಅಷ್ಟೆ ಬೇಗ ನಮಗೆ ಲಭ್ಯವಾಗುತ್ತಿವೆ. ಬೆರಳು ಮೊಬೈಲ್​ನಲ್ಲಿ ಸರಿದರೆ ಸಾಕು ನಿಮ್ಮನ್ನು ಉದ್ರೇಕದ ಉತ್ತುಂಗಕ್ಕೆ ಕರೆದೊಯ್ಯುವ ವಿಡಿಯೋಗಳು ಲಭ್ಯ. ಆದ್ರೆ ಪೋರ್ನ್​ ವಿಡಿಯೋಗಳ ಗೀಳು ನಿಮ್ಮ ರೊಮ್ಯಾಂಟಿಕ್ ರಿಲೆಷನ್​ಶಿಪ್ ಗುಣಮಟ್ಟವನ್ನ ಬಡಿದು ಹಾಕುತ್ತವೆ ಅನ್ನೋದು ಲೈಂಗಿಕ ತಜ್ಞರ ಅಭಿಮತ. ಇದು ಲೈಂಗಿಕ ಗುಣಮಟ್ಟ ಹಾಗೂ ತೃಪ್ತಿಯನ್ನ ಅಧೋಗತಿಗೆ ತಂದಿಳಿಸುತ್ತೆ. ನೀವು ಪೋರ್ನ್​ ವಿಡಿಯೋಗಳನ್ನು ಏಕಾಂಗಿಯಾಗಿ ವೀಕ್ಷಿಸಿದಷ್ಟು ನಿಮ್ಮ ಮಾನಸಿಕ ಆರೋಗ್ಯದ ಸಾಮರ್ಥ್ಯ ಕುಸಿದು ಹೋಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಭಾವನಾತ್ಮಕ ಬಾಂಧವ್ಯಕ್ಕೆ, ನಿಮ್ಮ ಅನ್ಯೊನ್ಯತೆಗೆ ಸಿಡಿಲು ಬಡಿದು ನಿಮಗೆ ಒಂಟಿತನ ಕಾಡುವುದು ನಿಶ್ವಿತ ಎನ್ನುತ್ತವೆ ಅಧ್ಯಯನಗಳು.

ಇನ್ನು ನಿಮ್ಮ ದೈನಂದಿನ ಬದುಕಿಗೂ ಪೋರ್ನ್ ವಿಡಿಯೋಗಳು ಮಾರಕ. ನಿರಂತರ ಪೋರ್ನ್ ವಿಡಯೋಗಳ ವೀಕ್ಷಣೆಯಲ್ಲಿಯೇ ಕಾಲ ಕಳೆಯುವುದರಿಂದ ಔದ್ಯೋಗಿಕ, ಸಾಮಾಜಿಕವಾಗಿ ನೀವು ಬೆರೆಯಲು ಸಾಧ್ಯವಿಲ್ಲ. ಪೋರ್ನ್​ ವಿಡಯೋ ಗೀಳು ನಿಮಗೆ ಇಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ. ಪೋರ್ನ್​ ವಿಡಿಯೋ ನೋಡಲೇಬೇಕು ಎಂಬ ಗೀಳು ನಿಮ್ಮನ್ನು ಕೆಲಸ ಬಿಟ್ಟು ಕೂರುವಂತೆ ಮಾಡುತ್ತದೆ. ಯಾರ ಜೊತೆಯೂ ಬೆರೆಯದಂತೆ ಮಾಡುತ್ತದೆ. ನಿಮಗೆ ನಿಮ್ಮ ಕೆಲಸಗಳನ್ನೇ ಮುಗಿಸಲು ಸಮಯ ಸಿಗದಿರುವಷ್ಟು ನಿಮ್ಮನ್ನು ಈ ಗೀಳು ಮುಗಿಸಿ ಹಾಕುತ್ತದೆ. ನೀವು ಲೈಂಗಿಕ ದೌರ್ಜನ್ಯವನ್ನು ಮಾಡಲು ಪ್ರೇರೆಪಿಸುವ ಸಂಭವವು ಇದೆ. ಈ ಗೀಳು ನಿಮ್ಮನ್ನು ಖಿನ್ನತೆಯ ಪಾತಾಳಕ್ಕೂ ತಳ್ಳಬಹುದು. ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಮುಗಿಸಿಬಿಡುವ ಸಾಧ್ಯತೆಯೂ ಇದೆ. ಹೀಗಾಗಿ ಈ ಗೀಳು ಹಚ್ಚಿಕೊಳ್ಳುವ ಮುನ್ನ ದೂರವಿದ್ದರೆ ಒಳ್ಳೆಯದು.

Comments are closed.