ಮನೋರಂಜನೆ

ಬಾಲಿವುಡ್ ನಟ ಇರ್ಫಾನ್ ಬದುಕುವುದು ಕಷ್ಟ ಎಂಬುವುದು ಗಾಳಿಸುದ್ದಿ!

Pinterest LinkedIn Tumblr

ಬಾಲಿವುಡ್ ನಟ ಇರ್ಫಾನ್ ಖಾನ್ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಅವರ ಮಾಧ್ಯಮ ಪ್ರತಿನಿಧಿ ತಳ್ಳಿಹಾಕಿದ್ದಾರೆ. ‘ಇರ್ಫಾನ್ ಆರೋಗ್ಯ ತುಂಬಾ ಕ್ಷೀಣಿಸಿದ್ದು, ಇನ್ನು ಅವರು ಕೆಲವೇ ಕೆಲವು ದಿನಗಳ ಕಾಲ ಮಾತ್ರ ಬದುಕುಳಿಯುತ್ತಾರೆ’ ಎಂಬ ವದಂತಿಗಳು ಹರಿದಾಡುತ್ತಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಸಮಸ್ಯೆಯಿಂದ ಇರ್ಫಾನ್ ಖಾನ್ ಬಳಲುತ್ತಿರುವುದು ಗೊತ್ತೇ ಇದೆ. ಸದ್ಯಕ್ಕೆ ಯುಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಚಿಕಿತ್ಸೆಗೆ ಇರ್ಫಾನ್ ಪ್ರತಿಕ್ರಿಯಿಸುತ್ತಿಲ್ಲ, ಇನ್ನು ಅವರು ಬದುಕುವುದು ಕಷ್ಟ ಎಂಬ ಗಾಳಿಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸಲಾಗುತ್ತಿದ್ದು, ಆ ವದಂತಿಗಳ ಆಧಾರವಾಗಿ ಸುದ್ದಿ ಪ್ರಕಟಿಸಬೇಡಿ ಎಂದು ಅವರು ಮಾಧ್ಯಮ ಪ್ರತಿನಿಧಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂದರೆ ಏನು?
ಇದು ನಾಡಿಗೆ ಸಂಬಂಧಿಸಿದ ಗಡ್ಡೆ. ವೇಗವಾಗಿ ಅಥವಾ ನಿಧಾನಕ್ಕೆ ಅಥವಾ ಊಹಿಸದ ರೀತಿಯಲ್ಲಿ ಬೆಳೆಯಬಹುದು. ದೇಹದ ಇತರೆ ಭಾಗಗಳಿಗೂ ಸೋಕಬಹುದು. ಬಹಳಷ್ಟು ಮಂದಿಯಲ್ಲಿ ಇದರ ಲಕ್ಷಣಗಳನ್ನು ಅಷ್ಟು ಬೇಗ ಗುರುತಿಸಲು ಸಾಧ್ಯವಿಲ್ಲ. ಏನಾದರೂ ಘಟಿಸಿ ಅದರ ಮೂಲಕ ಪರೀಕ್ಷಿಸಿದಾಗ ತಿಳಿಯುತ್ತದೆ.

ಚರ್ಮ ಬಿಳಿಚಿಕೊಂಡಂತೆ ಕಾಣಿಸುವುದು ಅಥವಾ ರಕ್ತದಲ್ಲಿ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಾಗುವುದು ನಡೆಯುತ್ತದೆ. ಇನ್ನು ಚಿಕಿತ್ಸೆ ಎಂಬುದು ಗಡ್ಡೆಯ ತೀವ್ರತೆಯ ಮೇಲೆ ಆಧಾರಪಟ್ಟಿರುತ್ತದೆ. ರೇಡಿಯೇಷನ್ ಅಥವಾ ಕಿಮೋಥೆರಪಿ ಮೂಲಕ ಮಾತ್ರ ಚಿಕಿತ್ಸೆ ಪಡೆಯಬೇಕಾಗುತ್ತದೆ.

Comments are closed.